ಕರ್ನಾಟಕ ಟಾಪ್ ನ್ಯೂಸ್
ಉಡುಪಿ: ಹುಟ್ಟೂರು ಹೆಬ್ರಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಂತ್ಯ ಸಂಸ್ಕಾರ
– ಬೆಂಗಳೂರು :ಇನ್ಮುಂದೆ ರೈಲ್ವೆ ಪ್ರಯಾಣಿಕರು ಟಿಕೆಟ್ ಗಾಗಿ ಕಾಯಬೇಕಿಲ್ಲ!
– ದೆಹಲಿ: ಮಿತಿಮೀರಿದ ವಾಯುಮಾಲಿನ್ಯ,ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್!
– ಬೆಂಗಳೂರು : ದಾಳಿಂಬೆ ಬೆಲೆ ದಿಢೀರ್ ಕುಸಿತ!
– ಬೆಂಗಳೂರು : ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರುವ ಘಟನೆ!
NAMMUR EXPRESS NEWS
ಉಡುಪಿ: ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿಸಿದರು. ಕೂಡ್ಲುವಿನಲ್ಲಿ ವಿಕ್ರಂಗೆ ಸೇರಿದ್ದ ಜಾಗದಲ್ಲಿ ನಡೆದ ಅಂತ್ಯಸಂಸ್ಕಾರ ಸಮಯದಲ್ಲಿ ಸಮೀಪದ ಬಂಧುಗಳು, ಪೊಲೀಸರು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪೀತಬೈಲ್ನಲ್ಲಿ ಸೋಮವಾರ ರಾತ್ರಿ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆಯ (ಎಎನ್ಎಫ್) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ (46) ಹತ್ಯೆಯಾಗಿದ್ದ. ಹೆಬ್ರಿ ತಾಲ್ಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದೆ. ಸೋಮವಾರ ರಾತ್ರಿ ಸುಮಾರು ಆರು ಮಂದಿ ನಕ್ಸಲರ ತಂಡ ಪೀತಬೈಲ್ನ ಮನೆಯೊಂದರ ಸಮೀಪ ಬಂದಿತ್ತು. ಈ ವೇಳೆ ಅವರು ಹಾಗೂ ಎಎನ್ಎಫ್ ತಂಡ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಮೃತಪಟ್ಟಿದ್ದು, ಉಳಿದವರು ಪರಾರಿಯಾದರು ಎಂದು ಪೊಲೀಸರು ಹೇಳಿಕೆ ನೀಡಿದ್ದರು.
– ಬೆಂಗಳೂರು: ಇನ್ಮುಂದೆ ರೈಲ್ವೆ ಪ್ರಯಾಣಿಕರು ಟಿಕೆಟ್ ಗಾಗಿ ಕಾಯಬೇಕಿಲ್ಲ!
ಬೆಂಗಳೂರು: ಇನ್ಮುಂದೆ ರೈಲ್ವೆ ಪ್ರಯಾಣಿಕರು ಟಿಕೆಟ್ ಗಾಗಿ ಕೌಂಟರ್ ಮುಂದೆ ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಪ್ರಯಾಣಿಕರ ದಟ್ಟಣೆಯ ಸಮಯದಲ್ಲಿ, ಪ್ರಯಾಣಿಕರಿದ್ದ ಜಾಗಕ್ಕೆ ಹೋಗಿ ಟಿಕೆಟ್ ಕೊಡಲು ನೈಋತ್ಯ ರೈಲ್ವೆ ಎಂ- ಯುಟಿಎಸ್ ವ್ಯವಸ್ಥೆ ಪರಿಚಯಿಸಿದೆ.
ಪ್ರಯಾಣಿಕರ ಸಂಕಷ್ಟ ತಪ್ಪಿಸಲು ನೈಋತ್ಯ ರೈಲ್ವೆ ಹೊಸ ಯೋಜನೆ ಶುರು ಮಾಡುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶರಯ್ಯ ನಿಲ್ದಾಣ, ಯಶವಂತಪುರ ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.
ಯಾವೆಲ್ಲ ಟಿಕೆಟ್, ಎಲ್ಲೆಲ್ಲಿ ಸಿಗಲಿದೆ?: ಎಂ-ಯುಟಿಎಸ್ ಯಂತ್ರಗಳ ಮೂಲಕ ಕಾಯ್ದಿರಿಸದ ಟಿಕೆಟ್, ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಪ್ರಯಾಣಿಕರು ನಿಂತಿರುವ ಜಾಗಕ್ಕೆ ಹೋಗಿ ಸಿಬ್ಬಂದಿ ಕೊಡಲಿದ್ದಾರೆ. ನಿಲ್ದಾಣದಿಂದ 500-ಮೀಟರ್ ಅಂತರದಲ್ಲಿ ಎಂ-ಯುಟಿಎಸ್ ಟಿಕೆಟ್ ವಿತರಿಸಲು ಅವಕಾಶವಿದೆ ಎಂದು ನೈಋತ್ಯ ರೈಲ್ವೇ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ತ್ರಿನೇತ್ರ ಕೆ.ಆರ್.ತಿಳಿಸಿದ್ದಾರೆ.
* ದೆಹಲಿ: ಮಿತಿಮೀರಿದ ವಾಯುಮಾಲಿನ್ಯ,ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್!
ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಷಮ ಸ್ಥಿತಿ ತಲುಪಿದೆ. ಜನ ಮನೆಯಿಂದ ಹೊರಬರುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗುರುಗ್ರಾಮದಲ್ಲಿನ ಪರಿಸ್ಥಿತಿಯನ್ನು ಗಮದಲ್ಲಿಟ್ಟುಕೊಂಡು ಅಲ್ಲಿನ ಕಾರ್ಪೋ ಖಾಸಗಿ ಸಂಸ್ಥೆಗಳು ಮತ್ತು ರೇಟ್ ಕಚೇರಿಗಳಿಗೆ ವರ್ಕ್ ಪ್ರಮ್ ಅಳವಡಿಸಿಕೊಳ್ಳುವಂತೆ ಹೇಳಿದೆ.
ಈ ಕ್ರಮದಿಂದ ಪ್ರತಿನಿತ್ಯ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ, ವಾಯು ಮಾಲಿನ್ಯತಾಗಬಹುದು ಎಂಬ ಲೆಕ್ಕಾಚಾರದಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗದ(CAQM) ಈ ಕ್ರಮಕ್ಕೆ ಮುಂದಾಗಿದೆ.
ದೆಹಲಿಯಲ್ಲಿ ನವೆಂಬರ್ 20 ರಿಂದ ಎಲ್ಲಾ ಖಾಸಗಿ ಕಂಪನಿಗಳಿಗೆ ಈ ನಿಯಮ ಅನ್ವಯ. ಮೊದಲಿನಿಂದ ಮುಂದಿನ ಸೂಚನೆ ಬರುವವರೆಗೆ ಇದೆ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ.
– ಬೆಂಗಳೂರು: ದಾಳಿಂಬೆ ಬೆಲೆ ದಿಢೀರ್ ಕುಸಿತ!
ಬೆಂಗಳೂರು: ಕಳೆದ ಎರಡು ತಿಂಗಳ ಹಿಂದೆ ರೈತರ ತೋಟದಲ್ಲೇ ಕೆ.ಜಿಗೆ ₹150ರಿಂದ ₹220ಕ್ಕೆ ಖರೀದಿಯಾಗುತ್ತಿದ್ದ ದಾಳಿಂಬೆ ಬೆಲೆಯು ಏಕಾಏಕಿ ₹50ಕ್ಕೆ ಕುಸಿದಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ದಾಳಿಂಬೆಗೆ ಬಂಪರ್ ಬೆಲೆ ಸಿಕ್ಕಿತ್ತು. ತೋಟದಲ್ಲೇ ಕೆ.ಜಿಗೆ ₹250ಕ್ಕೆ ಮಾರಾಟ ಆಗುತ್ತಿತ್ತು. ಎರಡು ತಿಂಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಬೆಲೆ ಮತ್ತೆ ಚೇತರಿಸಿಕೊಳ್ಳುತ್ತಿಲ್ಲ. ಈಗ ಕನಿಷ್ಠ ಬೆಲೆಗೆ ಬಂದು ನಿಂತಿದೆ ಎನ್ನುತ್ತಾರೆ ಬೆಳೆಗಾರರು. ‘ತರಕಾರಿ, ದ್ರಾಕ್ಷಿ ಮತ್ತು ಇತರೆ ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಬೇಗ ಹಾಳಾಗುವ ಕಾರಣ ದಾಳಿಂಬೆ ಬೆಳೆಯಲು ಆರಂಭಿಸಿದೆವು. ಈಗ ನೋಡಿದರೆ ದಾಳಿಂಬೆ ಖರೀದಿಗೆ ತೋಟಕ್ಕೆ ಬರುವ ವರ್ತಕರು ಕೆ.ಜಿಗೆ ₹50 ಕೇಳುತ್ತಿದ್ದಾರೆ. ಈ ಬೆಲೆಗೆ ನೀಡಿದರೆ ಹಾಕಿದ ಬಂಡವಾಳದಲ್ಲಿ ಶೇ 50ರಷ್ಟು ನಮ್ಮ ಕೈ ಸೇರುವುದಿಲ್ಲ. ಬೆಲೆ ಸಿಗುತ್ತಿಲ್ಲ ಎಂದು ಹಾಗೇ ಬಿಟ್ಟರೆ ತೋಟದಲ್ಲೇ ಹಣ್ಣು ಕೊಳೆಯುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ. ವ್ಯಾಪಾರಿಗಳು ತೋಟಗಳಿಗೆ ಬಂದು ರೈತರನ್ನು ಕಾಡಿಬೇಡಿ ಕೇಳಿದಷ್ಟು ಬೆಲೆ ನೀಡಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಈಗ ನಮ್ಮನ್ನು ಕೇಳುವವರೇ ಇಲ್ಲದಂತಾಗಿದೆ. ಕಟಾವು ಮಾಡಿಕೊಂಡು ಹೋದ ದಾಳಿಂಬೆಯು ಮಾರಾಟವಾದ ಬಳಿಕ ಹಣ ಕೊಡುವುದಾಗಿ ಹೇಳುತ್ತಾರೆ. ಅವರ ಷರತ್ತಿಗೆ ಒಪ್ಪಿದರೆ ಮಾತ್ರ ಕಟಾವಿಗೆ ಬರುತ್ತಾರೆ ನಷ್ಟವಾದರೂ ಅನಿವಾರ್ಯವಾಗಿ ಅವರು ಕೇಳಿದ ಬೆಲೆಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳೆಗಾರ ಬಸವರಾಜ ಅಳಲು ಹೇಳಿದರು. ದೇವನಹಳ್ಳಿ ತಾಲ್ಲೂಕಿನಲ್ಲಿ 480 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ವರ್ಷದಿಂದ ವರ್ಷಕ್ಕೆ ಬೆಳೆಯುವ ಪ್ರಮಾಣ ಏರಿಕೆಯಾಗುತ್ತಿದೆ. ನಿರೀಕ್ಷೆ ಮೀರಿ ದಾಳಿಂಬೆ ಫಸಲು ಬಂದಿರುವುದೇ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯಲು ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.
– ಬೆಂಗಳೂರು: ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರುವ ಘಟನೆ!
ಬೆಂಗಳೂರು: ಹಾಡಹಗಲೇ ಯುವಕನೊಬ್ಬನನ್ನು ಯುವಕರ ಗ್ಯಾಂಗ್ ವೊಂದು ಮನ ಬಂದಂತೆ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಯುವಕನೊಬ್ಬನನ್ನು ಕೆಲ ಯುವಕರ ಗುಂಪು ಹಿಡಿದು ಮನಬಂದಂತೆ ದೊಣ್ಣೆ ಹಾಗೂ ಹೆಲ್ಕೆಟ್ ಗಳಿಂದ ಥಳಿಸಿದ್ದಾರೆ. ಹೊಡೆದ ಏಟಿಗೆ ಯುವಕನ ಬಾಯಲ್ಲಿ ರಕ್ತ ಸೋರುತ್ತಿದ್ದರೂ, ಕರುಣೆ ತೋರದ ಯುವಕರ ಗುಂಪು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಯುವಕರ ಅಮಾನವೀಯ ಕೃತ್ಯವನ್ನು ಇನ್ನೋರ್ವ ಯುವಕ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಹಲ್ಲೆ ನಡೆಸಿರುವ ಗುಂಪಿನವರು ಯಾರು? ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕ ಯಾರು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ಈ ಸಂಬಂಧ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.