ಕಿಮ್ಮನೆ, ಆರತಿ ಕೃಷ್ಣ ಸೇರಿ 22 ಮಂದಿಗೆ ವಿದೇಶದಲ್ಲಿ ಪ್ರಶಸ್ತಿ!
– ವಿಯೆಟ್ನಾಮ್ ರಾಜಧಾನಿ ಹನೋಯ್ ನಗರದಲ್ಲಿ ಕಾರ್ಯಕ್ರಮ
– ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ
NAMMUR EXPRESS NEWS
ಬೆಂಗಳೂರು: ವಿಯೆಟ್ನಾಮ್ ರಾಜಧಾನಿ ಹನೋಯ್ ನಗರದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಅನಿವಾಸಿ ಭಾರತೀಯ ಸಂಘಟಕಿ ಡಾ. ಆರತಿ ಕೃಷ್ಣ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಸೇರಿದಂತೆ ಕರ್ನಾಟಕದ ಇಪ್ಪತ್ತೆರಡು ಸಾಧಕರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸನ್ಮಾನ ನಡೆದಿದ್ದು ವಿಶೇಷ.
ವಿಯೆಟ್ನಾಮ್ -ಭಾರತ ದೇಶಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ವಿಶ್ವವಾಣಿ ಮತ್ತು ವಿಯೆಟ್ನಾಮ್ ರಾಯಭಾರ ಕಚೇರಿಯಿಂದ ಜಂಟಿಯಾಗಿ ಆಯೋಜನೆ ಮಾಡಲಾಗಿತ್ತು. ವಿಯೆಟ್ನಾಮಿನಲ್ಲಿ ನಡೆದ ಉಭಯ ದೇಶಗಳ ಸಾಂಸ್ಕೃತಿಕ ತಂಡಗಳಿಂದ ಕಾರ್ಯಕ್ರಮ ಪ್ರಸ್ತುತಿ ಎರಡು ದೇಶಗಳ ಗಣ್ಯರ ಸಮ್ಮುಖದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.