ಪ್ರಾಣದ ಹಂಗು ತೊರೆದು ಬೆಳಕು ಕೊಡ್ತಾರೆ ಲೈನ್ ಮ್ಯಾನ್ಸ್!
– ಮಳೆ ಹೆಚ್ಚಾಯ್ತು ಕೆಇಬಿ ಸಿಬ್ಬಂದಿ ಬದುಕು ಈಗ ಕಷ್ಟ-ಕಷ್ಟ
– ಮಳೆ, ಗಾಳಿ, ಚಳಿ ಬಿಟ್ಟು ಕೆಲಸ: ನಿಮ್ಮ ಸೇವೆಗೆ ಸಲಾಂ
NAMMUR EXPRESS NEWS
ವಿದ್ಯುತ್ ಇಲಾಖೆಗಳಲ್ಲಿ ಕೆಲಸ ಮಾಡುವ ಲೈನ್ ಮ್ಯಾನ್ ಗಳದ್ದು ಯಾವಾಗಲೂ ಕಷ್ಟ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಾರೆ. ಇದೀಗ ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ಮಳೆಗಾಲ ಹೆಚ್ಚಾಗುತ್ತಿದ್ದಂತೆ ಲೈನ್ ಮ್ಯಾನ್ ಬದುಕು ಕಷ್ಟಕರವಾಗಿದೆ. ಮಳೆಯ ಹೆಚ್ಚಳದಿಂದ ಕರೆಂಟ್ ಕಂಬದ ಮೇಲೆ ಮರ ಬೀಳುವುದು ಹಾಗೂ ಇತರೆ ಯಾವುದೇ ಅನಾಹುತಗಳು ಸಂಭವಿಸಿದಾಗ ಜನರಿಗೆ ವಿದ್ಯುತ್ ಕಡಿತವಾಗದಂತೆ ಲೈನ್ ಮ್ಯಾನ್ ಪ್ರಾಣದ ಹಂಗು ತೊರೆದು ಮಳೆಯನ್ನು ಲೆಕ್ಕಿಸದೆ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಗಳನ್ನು ರಿಪೇರಿ ಮಾಡುತ್ತಿರುವಂತಹ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ. ಹೀಗೆ ಕೆಲಸ ಮಾಡುವಾಗ ನೂರಾರು ಮಂದಿ ವಿದ್ಯುತ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ.
ಮಲೆನಾಡಿನಲ್ಲಿ ಹೆಚ್ಚಾಗಿ ಮಳೆ ಹಾಗೂ ಮರಗಳು ಹೆಚ್ಚಿರುವುದರಿಂದ ಮಳೆ ಹೆಚ್ಚಾಗುತ್ತಿದ್ದಂತೆ ವಿದ್ಯುತ್ ಕಂಬಗಳ ಮೇಲೆ ಮರ ಬೀಳುವುದು ಸಹಜವಾಗಿದೆ. ಲೈನ್ ಮ್ಯಾನ್ ಗಳು ಅವರ ಪ್ರಾಣವನ್ನು ಲೆಕ್ಕಿಸದೆ ಜನರಿಗೆ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಲೈನ್ ಮೆನ್ ಸೇವೆಗೆ ನಮ್ಮ ಸಲಾಂ.
ವಿದ್ಯುತ್ ಇಲಾಖೆ ಸಿಬ್ಬಂದಿ ಸೇವೆ ಗುರುತಿಸೋಣ… ಅವರನ್ನು ಗೌರವಿಸೋಣ..!
– ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರ್ನಾಟಕ