ರೈತರಿಗೆ ಸಾಲದ ಬಡ್ಡಿ ಮನ್ನಾ!
– ಬಡ ರೈತರಿಗೆ ಬಿಗ್ ರಿಲೀಫ್
– ಏನಿದು ಸರ್ಕಾರದ ಯೋಜನೆ?
NAMMUR EXPRESS NEWS
ಸಿದ್ದರಾಮಯ್ಯ ಸರ್ಕಾರದಿಂದ ಬಡ ಕೃಷಿಕರಿಗೆ ಮಹಾ ರಿಲೀಫ್ ಸಿಕ್ಕಿದೆ. ಅಂಥದ್ದೊಂದು ಸುದ್ದಿ ಇದೀಗ ಹೊರಬಿದ್ದಿದೆ. ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ತಿಯಾಗಿರುವ ರೈತರು ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಆದರೆ, ಈ ಸಾಲದ ಅಸಲು ಪಾವತಿಸಬೇಕು. ಹಾಗಾದರೆ ಮಾತ್ರ ರೈತರು ಈ ಸಾಲ ಬಡ್ಡಿ ಮನ್ನಾ ಯೋಜನೆಯ ಸಂಪೂರ್ಣ ಲಾಭ ಪಡೆಯಬಹುದಾಗಿದೆ.2023ರ ಡಿಸೆಂಬರ್ 31ಕ್ಕೆ ಸುಸ್ತಿದಾರರಾದ ಬಡ ರೈತರಿಗೆ ಈ ಬಡ್ಡಿ ಮನ್ನಾ ಯೋಜನೆಯ ಲಾಭ ಸಿಗಲಿದೆ. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಸುಸ್ತಿ ಬಡ್ಡಿ ರೂ. 440.20 ಕೋಟಿ ರೂ. ಆಗಲಿದ್ದು, ಇದನ್ನು ರಾಜ್ಯ ಸರ್ಕಾರವೇ ಭರಿಸಲಿದೆ.ಹೆಚ್ಚಿನ ಮಾಹಿತಿಗೆ ಸಾಲ ಪಡೆದ ನಿಮ್ಮ ಬ್ಯಾಂಕಿಗೆ ಭೇಟಿ ನೀಡಬಹುದು.