ಸಿ.ಎಂ ಎದುರು ಶರಣಾಗಲಿರೋ ನಕ್ಸಲರು..!!
– ಜಿಲ್ಲಾಡಳಿತದ ಮುಂದಿ ಶರಣಾಗವುದಾಗಿ ಮಾಹಿತಿ ಕೊನೆ ಕ್ಷಣದಲ್ಲಿ ಬದಲಾವಣೆ
– ಮಧ್ಯಾಹ್ನ ಮುಖ್ಯಮಂತ್ರಿ ಎದುರು ಶರಣಾಗಲಾರೋ 6 ಮಂದಿ ನಕ್ಸಲರು
NAMMUR EXPRESS NEWS
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಆರು ಮಂದಿ ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲರ ತಂಡ, ಬೆಂಗಳೂರಿನಲ್ಲಿ ಶರಣಾಗತರಾಗಲಿದ್ದಾರೆ. ಈ ಮುಂಚೆ ನಿಗದಿಯಾದಂತೆ ಚಿಕ್ಕಮಗಳೂರಿನ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಬೇಕಿತ್ತು. ಬದಲಾದ ಕಾರ್ಯಕ್ರಮದಲ್ಲಿ ಸಿಎಂ ಸಮ್ಮುಖದಲ್ಲಿ ಮಧ್ಯಾಹ್ನ ಶರಣಾಗತರಾಗಲಿದ್ದಾರೆ. “ಆರು ಮಂದಿ ನಕ್ಸಲ್ ಹೋರಾಟಗಾರರು ಬುಧವಾರ ಸರ್ಕಾರದ ಎದುರು ಶರಣಾಗಲಿದ್ದಾರೆ. ಅವರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ” ಎಂದು ಸರ್ಕಾರ ತಿಳಿಸಿದೆ. ಚಿಕ್ಕಮಗಳೂರಿನ ಮುಂಡಗಾರು ಲತಾ(ಶೃಂಗೇರಿ), ವನಜಾಕ್ಷಿ( ಬಾಳೆಹೊಳೆ ಕಳಸ), ದಕ್ಷಿಣ ಕನ್ನಡದ ಸುಂದರಿ (ಕುಂತಲೂರು), ರಾಯಚೂರಿನ ಮಾರೆಪ್ಪ ಅರೋಲಿ (ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು), ಕೇರಳದ ಟಿ ಎನ್ ಜೀಶ, ತಮಿಳುನಾಡಿನ ವಸಂತ ಕೆ ಅವರು ಸರ್ಕಾರದ ಮುಂದೆ ಶರಣಾಗುವುದಾಗಿ ಒಪ್ಪಿಕೊಂಡಿದ್ದಾರೆ.