ಕಪ್ ನಮ್ದೇ…!
– ಕನ್ನಡಿಗರ ಕನಸು ನನಸು ಮಾಡಿದ ಮಹಾಲಕ್ಷ್ಮಿಯರು!
– ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಆರ್.ಸಿ. ಬಿ
NAMMUR EXPRESS NEWS
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಕ್ರಿಕೆಟ್ ಪಂದ್ಯಾಟದಲ್ಲಿ RCB ಮಹಿಳಾ ತಂಡವು ಕೊನೆಗೂ ಕಪ್ ಗೆದ್ದುಕೊಂಡು ಇತಿಹಾಸ ನಿರ್ಮಿಸಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ,
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ತಂಡ 113 ರನ್ ಗಳಿಗೆ ಕಟ್ಟಿಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವರ್ಮಾರವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ 18.3 ಓವರ್ ಗಳಲ್ಲಿ 113 ರನ್ನಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಬೆಂಗಳೂರು ತಂಡದ ಪರ ಶ್ರೇಯಂಕ್ ಪಾಟೀಲ್ ಅವರು ನಾಲ್ಕು ವಿಕೆಟ್ ಹಾಗೂ ಎಸ್ ಮೊಲಿನಿಸ್ ಮೂರು ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತ ದಾಖಲಿಸಿತ್ತು. ಡೆಲ್ಲಿ ಪರ ಶಿಫಾಲಿ ವರ್ಮಾ 44 ರನ್, ರಾಧಾ ಯಾದವ್ 12, ಅನುರಾಧ ರೆಡ್ಡಿ 10 ರನ್ ಬಾರಿಸಿದ್ದು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್ ಗಳಿಗೆ ಆಲೌಟ್ ಆಗಿದ್ದು ಆರ್ ಸಿಬಿಗೆ 114 ರನ್ ಗಳ ಗುರಿ ನೀಡಿತ್ತು.
ಕನ್ನಡತಿ ಶ್ರೇಯಾಂಕಗೆ 4 ವಿಕೆಟ್!
14ನೇ ಓವರ್ನ ಮೊದಲ ಎಸೆತದಲ್ಲಿ ಆಶಾ ಕೇಪ್ ಅವರನ್ನು 8 ರನ್ಗಳಿಗೆ ಬಲಿ ಪಡೆದರೆ, ಜೆಸ್ ಜೊನಾಸೆನ್ ಕೂಡ ಆಶಾಗೆ ವಿಕೆಟ್ ಒಪ್ಪಿಸಿದರು. ಸೋಫಿ ಮೊಲಿನೆಕ್ಸ್ ಅವರ ಅದ್ಭುತ ಎಸೆತದಲ್ಲಿ ರಾಧಾ ರನೌಟ್ಗೆ ಬಲಿಯಾದರೆ, ಕೊನೆಯ ಮೂರು ವಿಕೆಟ್ಗಳನ್ನು ಕನ್ನಡತಿ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾದರು. ಶ್ರೇಯಾಂಕ, ಮಿನ್ನು ಮಣಿ (5 ರನ್) ಅರುಂಧತಿ ರೆಡ್ಡಿ (10 ರನ್) ತನಿಯಾ ಭಾಟಿಯಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಫೈನಲ್ ಪಂದ್ಯದಲ್ಲಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್ನಲ್ಲಿ ಅತಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ನಂತರ ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಮೃತಿ ಮಂದಣ್ಣ ಹಾಗೂ ಡಿವೈನ್ ರವರಿಂದ ಭರ್ಜರಿ ಆರಂಭ ಪಡೆದುಕೊಂಡಿತ್ತು. ಸ್ಮೃತಿ ಮಂದಣ್ಣ 31ರನ್ ಗಳಿಸಿ ಔಟ್ ಆದರೆ ಡಿವೈನ್ ರವರು 32ರನ್ ಗಳಿಸಿ ಔಟಾದರು.