ರಾಜ್ಯ ರಾಜಕಾರಣದಲ್ಲಿ ಆರ್. ಎಂ ಪ್ರಭಾವಿ!
– ಸಚಿವರ ಜತೆ ಚರ್ಚೆ: ಯೋಗೇಶ್ವರ್ ಸೇರ್ಪಡೆ ವೇಳೆ ಉಪಸ್ಥಿತಿ
– ಡಿಕೆಶಿ ಜತೆ ಸಹಕಾರಿ ನಾಯಕನ ಮಾತುಕತೆ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯ ಸಹಕಾರ ನಾಯಕ ಡಾ.ಆರ್. ಎಂ.ಮಂಜುನಾಥ ಗೌಡ ಪ್ರಭಾವಿಯಾಗಿದ್ದು ಕಳೆದ 3 ದಿನಗಳಿಂದ ವಿವಿಧ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗ ಜಿಲ್ಲೆ, ಸಹಕಾರ ಸಂಸ್ಥೆಗಳು, ತೀರ್ಥಹಳ್ಳಿ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾರೆ.
ಉಪ ಚುನಾವಣೆ ಪ್ಲಾನ್: ಸಭೆಯಲ್ಲಿ ಹಾಜರ್
ಬೆಂಗಳೂರು ಕಾಂಗ್ರೆಸ್ ಕಛೇರಿಯಲ್ಲಿ ಡಿಕೆಶಿ ಹಾಗೂ ಪ್ರಮುಖ ನಾಯಕರಾದ ಚಂದ್ರಶೇಖರ್,, ವಸಂತ ಕುಮಾರ್, ಪ್ರಚಾರ ಸಮಿತಿಯ ವಿನಯಕುಮಾರ ಸೊರಕೆ ನೇತೃತ್ವದಲ್ಲಿ ಮುಂಬರುವ ಉಪ ಚುಣಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳು ವಿಭಾಗಗಳ ಮುಖ್ಯಸ್ಥರ ಸಭೆಯಲ್ಲಿ ಮಂಜುನಾಥ ಗೌಡ ಅವರು ಭಾಗವಹಿಸಿದ್ದರು.
ಸಹಕಾರ ಸಚಿವರ ಜತೆ ಸಹಕಾರ ಚರ್ಚೆ
ವಿಧಾನ ಸೌಧದಲ್ಲಿ ರಾಜ್ಯ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಗೌರವ ಉಪಸ್ಥಿತಿ ಹಾಗೂ ಸಹಕಾರಿ ಯೂನಿಯನ್ ರಾಜ್ಯಾಧ್ಯಕ್ಷರಾದ ಜಿ ಟಿ ದೇವೇಗೌಡ ಅಧ್ಯಕ್ಷತೆಯಲ್ಲಿ ರಾಜ್ಯ ಸಹಕಾರಿಗಳ ಸಭೆ ನಡೆಸಲಾಯಿತು 71 ನೇ ಸಹಕಾರಿ ಸಪ್ತಾಹದ ಪೂರ್ವಭಾವಿ ಸಭೆಯಲ್ಲಿ ಮಂಜುನಾಥ ಗೌಡ ಮತ್ತು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬೇಳೂರು ಗೋಪಾಲಕೃಷ್ಣ ಹಾಗೂ ಶಿವಮೊಗ್ಗ ಶಿಮೂಲ್ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾಧರ್ , ಶಿವಮೊಗ್ಗ ಸಹಕಾರಿ ಯೂನಿಯನ್ ಅಧ್ಯಕ್ಷರಾದ ವಾಟಗೋಡು ಸುರೇಶ್ ಮತ್ತು ರಾಜ್ಯದ ಎಲ್ಲಾ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರುಗಳು ಸಹಕಾರಿ ಯೂನಿಯನ್ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಯೋಗೇಶ್ವರ್ ಸೇರ್ಪಡೆ ವೇಳೆ
ಚನ್ನಪಟ್ಟಣ ಮಾಜಿ ಶಾಸಕರು,ಮಾಜಿ ಸಚಿವರಾದ ಸಿ ಪಿ ಯೋಗೇಶ್ವರ್ ಅವರು ರಾಜ್ಯ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದು ಚನ್ನಪಟ್ಟಣ ವಿಧಾನಸಭೆ ಉಪಚುಣಾವಣೆಗೆ ಬಿ ಫಾರಂಗೆ ಅರ್ಜಿ ಸಲ್ಲಿಸಿದರು. ಕಾರ್ಯಧ್ಯಕ್ಷರಾದ ಚಂದ್ರಶೇಖರ್ ಸಿ ಪಿ ಯೋಗೇಶ್ವರ್ ಅವರ ಕಾಂಗ್ರೆಸ್ ಸೇರ್ಪಡೆ ರೂವಾರಿಗಳಾದ ಡಿ. ಕೆ.ಸುರೇಶ್, ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡ ಶಾಸಕರಾದ ಪೊನ್ನಣ್ಣ ಇದ್ದರು.