ಕರ್ನಾಟಕದಲ್ಲಿ ಮಳೆ ಅಬ್ಬರ ಶುರು..!
– ಬೇಸಿಗೆಯಲ್ಲೂ ಭಾರಿ ಮಳೆಯ ಸುಳಿವು
– ಏಪ್ರಿಲ್ ಮೊದಲ ವಾರದಿಂದಲೆ ಮಳೆ
NAMMUR EXPRESS NEWS
ಮಳೆಗಾಗಿ ಜನರು ಕಾದು ಕೂತಿದ್ದಾರೆ, ಆದಷ್ಟು ಬೇಗ ಮಳೆ ಬರಲಿ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೂ ಮಳೆಯ ಸುಳಿವೆ ಇಲ್ಲ, ಮಳೆ ಬರಬೇಕಾದ ಸಮಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಮಳೆಯ ಮೋಡಗಳು ಮರೆಯಾಗಿ ಹೋಗುತ್ತಿವೆ. ಹೀಗಿದ್ದಾಗಲೇ ಮಳೆಯ ವಿಚಾರವಾಗಿ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಕರ್ನಾಟಕದ ಬಹುತೇಕ ಕಡೆ ಇದೀಗ ನೆತ್ತಿ ಸುಡವ ಬಿಸಿಲು ಆವರಿಸಿದ್ದು, ಜನರು ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನೇ ಆಶ್ರಯಿಸಿದ್ದಾರೆ. 3000 ದಿಂದ 4000 ರೂಪಾಯಿ ಖರ್ಚು ಮಾಡಿ ಜನ ತೋಟ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳೆಗೆ ಬಿಡಿ ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ ಮಳೆ ಬರಲಿ ಅಂತಾ ಹಲವು ಪ್ರದೇಶದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭರ್ಜರಿ ಸುದ್ದಿಯೊಂದು ಹೊರಬಿದ್ದಿದ್ದು, ಈ ಸಂಕಷ್ಟದ ನಡುವೆ ಇದೀಗ ಭಾರಿ ಮಳೆ ಸುರಿಯಲು ಆರಂಭವಿಸಿದೆ.
ಮಳೆ ಬಂತು ಮಳೆ.. ಮಳೆ ಬಂತು ಮಳೆ..!
ಮಳೆಗಾಗಿ ಭೂಮಿ ತಾಯಿ ಕಾದು ಕೂತಿದ್ದಾಳೆ ಮಳೆ ಬೀಳದೆ ಇದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಪರಿಸ್ಥಿತಿ ಹೀಗೆ ಹದ್ದು ಮೀರಿ ಹೋಗಿರುವ ಸಮಯದಲ್ಲೇ, ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದು ಏನೆಂದರೆ ಕರ್ನಾಟಕದ ಕೆಲವು ಪ್ರದೇಶದಲ್ಲಿ ಭರ್ಜರಿ ಮಳೆ ಬೀಳುವ ಎಲ್ಲಾ ಮುನ್ಸೂಚನೆ ಇದೀಗ ಸಿಕ್ಕಿದೆ. ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾ ಇದೀಗ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಪೂರಕವಾಗಿ ಈಗಾಗಲೇ, ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ಹಾಗೇ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಂದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಹಲವು ಕಡೆ ಭಾರಿ ಮಳೆ ಶುರುವಾಗಿದೆ.
ಸರ್ಕಾರಕ್ಕೂ ರಿಲೀಫ್ ಸಿಗಲಿದೆ!
ಒಟ್ಟಿನಲ್ಲಿ ಮಳೆ ಬರದೇ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ, ಹಾಗೇ ಚುನಾವಣೆಯ ವೇಳೆ ಇದು ಸರ್ಕಾರಗಳಿಗೂ ಸಮಸ್ಯೆ ತಂದೊಡ್ಡಿದೆ. ಹೀಗಾಗಿ ನೀರಿನ ಕೊರತೆ ನೀಗಿಸಲು ಸರ್ಕಾರದ ಕಡೆಯಿಂದ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಮತ್ತೊಂದು ಕಡೆ ಪ್ರಕೃತಿಯ ಕಡೆಯಿಂದ ಕೂಡ ಅನುಮತಿ ಸಿಗಬೇಕಿದ್ದು, ಈ ಮೂಲಕ ಭರ್ಜರಿ ಮಳೆಯಾದರೆ ನೀರಿನ ಬಗ್ಗೆ ಎದ್ದಿರುವ ಸಮಸ್ಯೆ ಸುಖಾಂತ್ಯ ಕಾಣಲಿದೆ.