1,099 ರೂಗೆ ರಿಲಯನ್ಸ್ ಸ್ಮಾರ್ಟ್ ಫೋನ್!
– ಸ್ಮಾರ್ಟ್ ಫೋನ್ ಪ್ರಿಯರಿಗೆ ಗುಡ್ ನ್ಯೂಸ್: ಎರಡು ಮೊಬೈಲ್ ಬಿಡುಗಡೆ
– ರಿಚಾರ್ಜ್ ದರ ಕೂಡ ಭಾರೀ ಕಡಿಮೆ: ಹೊಸ ಸೌಲಭ್ಯ
NAMMUR EXPRESS NEWS
ಬೆಂಗಳೂರು: ಸ್ಮಾರ್ಟ್ ಫೋನ್ ಪ್ರಿಯರಿಗೆ ಮುಖೇಶ್ ಅಂಬಾನಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸದ್ದಿಲ್ಲದೆ, ಕೇವಲ 1,099 ರೂ.ಗೆ ಎರಡು ಹೊಸ ಮೊಬೈಲ್ಗಳನ್ನು ಬಿಡುಗಡೆ ಮಾಡಿದ್ದಾರೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ, ತನ್ನ ‘ಜಿಯೋ ಭಾರತ್ ಸರಣಿ’ಯಲ್ಲಿ ಕೈಗೆಟಕುವ 4G ಫೋನ್ಗಳನ್ನು ಅನಾವರಣಗೊಳಿಸಿದೆ. ಅದುವೇ, ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಸ್ಮಾರ್ಟ್ಫೋನ್. ಈ ಮೂಲಕ ಇನ್ನಿತರ ಮೊಬೈಲ್ ಕಂಪನಿಗಳಿಗೆ ಸವಾಲನ್ನು ಹಾಕಿದೆ.
ರಿಲಯನ್ಸ್ ಜಿಯೋ, ಈ ಎರಡೂ 4G ಫೀಚರ್ ಫೋನ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ 4G ಫೀಚರ್ ಫೋನ್ಗಳು 1,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿವೆ. ಕಂಪನಿಯು 128GB ಮೆಮೊರಿ ಕಾರ್ಡ್ ಅನ್ನು ಒದಗಿಸಿದೆ. ಈ ಫೋನ್ಗಳಲ್ಲಿ, ವಾಟ್ಸಪ್ ಇಲ್ಲದೆಯೇ ಚಾಟಿಂಗ್ ಮಾಡಬಹುದು. ಶೀಘ್ರದಲ್ಲೇ ಅಮೆಜಾನ್ ಮೂಲಕ ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಮಾರಾಟ ಪ್ರಾರಂಭಿಸಲಿವೆ. ಜಿಯೋ ಬಳಕೆದಾರರು 123 ರೂ.ಗಳ ರೀಚಾರ್ಜ್ಪ ಡೆಯಬಹುದು. ಈ ಅಗ್ಗದ ಜಿಯೋ ಫೋನ್ಗಳ ರೀಚಾರ್ಜ್ ಯೋಜನೆಗಳು ಸಹ ಅಗ್ಗವಾಗಿವೆ. ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಫೋನ್ಗಳನ್ನು ಖರೀದಿಸುವ ಗ್ರಾಹಕರು ಕೇವಲ 123 ರೂ.ಗಳ ರೀಚಾರ್ಜ್ ಮಾಡುವ ಮೂಲಕ 4G ಫೋನ್ ಅನ್ನು ಆನಂದಿಸಬಹುದು. ಈ 123 ರೂ.ಗಳ ಜಿಯೋ ಯೋಜನೆಯಲ್ಲಿ, ನೀವು ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಪಡೆಯಬಹುದು. ಜಿಯೋ ಬಳಕೆದಾರರು 123 ರೂ.ಗೆ 14GB ಇಂಟರ್ನೆಟ್ ಡೇಟಾವನ್ನು ಸಹ ಪಡೆಯಬಹುದು.