- ಟ್ರಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬ್ಲಾಸ್ಟ್ ಬಗ್ಗೆ ಎನ್ ಐಎ ತನಿಖೆ
- ರಾಜ್ಯದಲ್ಲಿ ಮತ್ತೆ ಉಗ್ರ ಕಾರ್ಯಾಚರಣೆ ಮುನ್ನೆಲೆಗೆ
NAMMUR EXPRESS NEWS
ಶಿವಮೊಗ್ಗಕ್ಕೆ ಮತ್ತೆ ಎನ್ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್ನ ನಡುವೆ ಇರಬಹುದಾದ ಲಿಂಕ್ಗಳನ್ನು ಸಹ ಹುಡುಕುತ್ತಿದ್ದಾರೆ. ಕಾರಣ ಶಾರೀಖ್, ಹೌದು.
ತೀರ್ಥಹಳ್ಳಿ ಮೂಲದ ಶಾರೀಖ್ ಟ್ರಯಲ್ ಬ್ಲಾಸ್ಟ್ ಕೇಸ್ನಲ್ಲಿಯು ಆರೋಪಿಯಾಗಿದ್ದು . ಶಂಕಿತ ಮಾಜ್ ಹಾಗೂ ಯಾಸೀನ್ನಡುವೆ ಲಿಂಕ್ ಹೊಂದಿದ್ದವನು. ಅಲ್ಲದೆ ಪ್ರೇಮ್ ಸಿಂಗ್ ಗೆ ಇರಿತ ಪ್ರಕರಣದಲ್ಲಿಯು ಆರೋಪಿ ಜಬಿಗೆ ಶಾರೀಖ್ ಸಂಪರ್ಕ ಹೊಂದಿದ್ದ.ಈ ಆರೋಪಿಯೇ ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ನ ಪ್ರಮುಖ ಆರೋಪಿ. ಇನ್ನೂ ಮಂಗಳೂರಿನಲ್ಲಿ ನಡೆದ ಗೋಡೆಬರಹ ಕೇಸ್ನಲ್ಲಿಯು ಈತ ಆರೋಪಿಯಾಗಿದ್ದ. ಈ ಎಲ್ಲಾ ಕಾರಣದಲ್ಲಿ ಎನ್ಐಎ ಕೈಗೆತ್ತಿಕೊಂಡಿರುವ ಕೇಸ್ ನಡಿಯಲ್ಲಿ ಶಾರೀಖ್ನನ್ನ ವಿಚಾರಣೆ ನಡೆಸ್ತಿದೆ. ಶಿವಮೊಗ್ಗ ತೀರ್ಥಹಳ್ಳಿ, ಮಂಗಳೂರಿನ ನಡುವೆ ಶಾರೀಖಿನ ಲಿಂಕ್ ನ ಬಗ್ಗೆ ಎನ್ಐಎ ತನಿಖೆ ನಡೆಸ್ತಿದೆ.
ತೀರ್ಥಹಳ್ಳಿಗೆ ಶಾರೀಕ್ ಕರೆ ತಂದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ