ಮದ್ಯಪ್ರಿಯರಿಗೆ ಶಾಕ್: ಓಟಿ-ಬಿಪಿಯ ರೇಟು ಹೆಚ್ಚಳ
– 72 ಸಾವಿರಕ್ಕೆ ಏರಲಿದೆ ಚಿನ್ನದ ಬೆಲೆ
– ಡಿ.31ಕ್ಕೆ ಹೋಟೆಲ್ ರೂಮ್ ಬೆಲೆ ₹7 ಲಕ್ಷ!
NAMMUR EXPRESS NEWS
ಮದ್ಯಪ್ರಿಯರ ಫೇವರೇಟ್ ಬ್ರಾಂಡ್ ಆಗಿರುವ ಓಲ್ಡ್ ಟ್ಯಾವರ್ನ್ ಹಾಗೂ ಬ್ಯಾಗ್ ಪೈಪರ್ನ 180 ಎಂ.ಎಲ್ ಪೌಚ್ನ ಬೆಲೆಯಲ್ಲಿ ಏರಿಕೆಯಾಗಿದೆ. ಓಲ್ಡ್ ಟ್ಯಾವರ್ನ್ ಗೆ 100 ರೂಪಾಯಿ ಇದ್ದುದನ್ನು 125ಕ್ಕೆ ಹಾಗೂ ಬಿಪಿ 125ರೂ ಇದ್ದದ್ದು 160ಕ್ಕೆ ಏರಿಕೆಯಾಗಿದೆ. ಮೊದಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮದ್ಯಪ್ರಿಯರಿಗೆ ಹೊಸ ವರ್ಷದ ಆರಂಭದಲ್ಲೇ ದರ ಏರಿಕೆ ಬಿಸಿ ಬಾಧಿಸಿದೆ.
72 ಸಾವಿರಕ್ಕೆ ಏರಲಿದೆ ಚಿನ್ನದ ಬೆಲೆ!
ನವದೆಹಲಿ: ಹೊಸ ವರ್ಷದಲ್ಲಿ ಬಂಗಾರದ ಬೆಲೆ 10 ರಿಂದ 72 ಸಾವಿರ ರೂ.ವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಹಲವು ದೇಶಗಳ ಕೇಂದ್ರೀಯ ಬ್ಯಾಂಕ್ಗಳು, ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ ರೂಪಿಸುವ ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2023ರಲ್ಲಿ ಸದೃಢವಾದ ಶೇ.15ರಷ್ಟು ಗಳಿಕೆಯ ಕಾರ್ಯಕ್ರಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹತ್ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನ ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ. ಬಡ್ಡಿ ದರವನ್ನು ಏರಿಸುವ ನೀತಿಯ ಸುಳಿವು ಕೊಟ್ಟಿರುವ ಅಮೆರಿಕ ಫೆಡರಲ್ ರಿಸರ್ವ್, ತನ್ನ ನೀತಿಯ ನಿಲುವನ್ನು ಸ್ಪಷ್ಟಪಡಿಸಿದೆ.
31ಕ್ಕೆ ಹೋಟೆಲ್ ರೂಮ್ ಬೆಲೆ ₹7 ಲಕ್ಷ!
ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾಡಾದಲ್ಲಿ ಡಿ.31ರಂದು ಕೊಠಡಿಗಳ ಸಾಮಾನ್ಯ ಶುಲ್ಕ 1,20,000 ರೂ.ವಿಧಿಸಿದ್ದು, ಈ ಹೋಟೆಲ್ನಲ್ಲಿ ಮಹಾರಾಜ ಸೂಟ್ ಗಾಗಿ 7 ಲಕ್ಷ ರೂಪಾಯಿ ನೀಡಿ ಬುಕ್ಕಿಂಗ್ ಮಾಡಿದ್ದಾರೆ. ದೆಹಲಿ, ಜೈಪುರ ಮತ್ತು ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ಗಳು ಮತ್ತು ರೆಸಾರ್ಟ್ಗಳ ಬಾಡಿಗೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಲೀಲಾ ಪ್ಯಾಲೇಸ್ ಉದಯಪುರದಲ್ಲಿ ಡಿ.31ಕ್ಕೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಈ ಹೋಟೆಲ್ನಲ್ಲಿ ಕ್ರಿಸ್ಮಸ್ ದಿನದಂದು ಒಂದು ರಾತ್ರಿ ತಂಗಲು 1,06,200 ರೂ. ಶುಲ್ಕ ವಿಧಿಸಿತ್ತು. ಈಗ ಹೊಸ ವರ್ಷದಂದು ಅದರ ದರ ಮತ್ತಷ್ಟು ಹೆಚ್ಚಾಗಿದೆ. ಡಬಲ್ ಟ್ರೇಯ ಹಿಲ್ಟನ್ ಗೋವಾ ರೆಸಾರ್ಟ್ ಕ್ಯಾಂಡೋಲಿಮ್ ಮತ್ತು ಹಿಲ್ಟನ್ ಗೋವಾ ಅರ್ಪೋರಾ ಬಾಗಾದ ಪ್ರಾಪರ್ಟಿಗಳಲ್ಲಿ ಡಿ.31ಕ್ಕೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಸರಾಸರಿ ಹೋಟೆಲ್ ಬಾಡಿಗೆ ದರಗಳು ಹಿಂದಿನ ವರ್ಷಗಳಿಗಿಂತ ಶೇ.40ರಷ್ಟು ಹೆಚ್ಚಾಗಿದೆ. ಫೇರ್ ಮಾಂಟ್ ಜೈಪುರದಲ್ಲಿ ಹೋಟೆಲ್ ಬುಕಿಂಗ್ ಪ್ಯಾಕೇಜ್ಗಳು ಕನಿಷ್ಠ 65,000 ರೂ. ಮತ್ತು ತೆರಿಗೆಗಳಿಂದ ಪ್ರಾರಂಭವಾಗಿವೆ. ಉದಯಪುರದ ಅವರ ಝಾನಾ ಲೇಕ್ ರೆಸಾರ್ಟ್ ನಲ್ಲಿ ಎರಡು ರಾತ್ರಿ ತಂಗುವ ದರ 55 ಸಾವಿರ ದಾಟಿದ್ದು, ಮ್ಯಾರಿಯೊಟ್ ಮನ್ಸೂರಿ ವಾಲ್ನಟ್ ಗ್ಲೋವ್ ರೆಸಾರ್ಟ್ ನಲ್ಲಿ 32 ಸಾವಿರ ರೂ.ಗೆ ರೂಮ್ ಬುಕ್ ಮಾಡಲಿಗಿದ್ದು ಯಾವುದೇ ಕೊಠಡಿ ಲಭ್ಯವಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.