ದೀಪಾವಳಿ ಹಬ್ಬಕ್ಕೆ ಯಜಮಾನಿಯರಿಗೆ ಸಿಹಿಸುದ್ದಿ!!
– ಎರಡು ಕಂತು ಗೃಹಲಕ್ಷ್ಮಿಹಣ ಖಾತೆಗೆ ಜಮಾ!
– ಗೃಹಲಕ್ಷ್ಮಿ ಯೋಜನೆ ಅನ್ನಭಾಗ್ಯ ಯೋಜನೆ ಹಣ ವಿವರಗಳನ್ನು ತಿಳಿಯುವುದು ಹೇಗೆ?
NAMMUR EXPRESS NEWS
ಬೆಂಗಳೂರು : ರಾಜ್ಯ ಸರ್ಕಾರವು ಯಜಮಾನಿಯರಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಎರಡು ತಿಂಗಳ ಹಣ ವರ್ಗಾವಣೆಯಾಗಿದೆ. ಈ ಮೂರು ತಿಂಗಳ ಬಳಿಕ ಗೃಹಲಕ್ಷ್ಮಿಹಣಗಳ ಖಾತೆ ಸೇರಿದೆ.
ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣವು ತಾಂತ್ರಿಕ ಕಾರಣದಿಂದ ಯಮಾನಿಯರ ಖಾತೆಗೆ ಜಮಾ ಆಗಲಿಲ್ಲ. ಯಜಮಾನಿಯರಿಗೆ ಇದೀಗ ಎರಡು ಕಂತುಗಳ ಗೃಹಲಕ್ಷ್ಮಿಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಜುಲೈ, ಆಗಸ್ಟ್ ತಿಂಗಳ 2000 ರೂ. ಆಗಿದ್ದು, ಸದ್ಯ ಬಾಕಿ ಇರುವ ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಗೃಹಲಕ್ಷ್ಮಿ ಯೋಜನೆ ಅನ್ನಭಾಗ್ಯ ಯೋಜನೆ ಹಣ ವಿವರಗಳನ್ನು ತಿಳಿಯುವುದು ಹೇಗೆ?
ವರ್ಗಾವಣೆ ಅಗತ್ಯ ಗೃಹಲಕ್ಷ್ಮಿ ಹಣ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ ಹೇಗಿದೆ ನೋಡಿ, ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿ, ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿಕೊಳ್ಳಿ, ಡೌನ್ ಲೋಡ್ ಮಾಡಿದ ಆಪ್ ಓಪನ್ ಮಾಡಿಕೊಳ್ಳಿ, ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ಹಾಕಿ, ನಂತರ ಆಧಾರ್ ಕಾರ್ಡ್ ಲಿಂಕ್ ಇರುವ ನಂಬರ್ ಗೆ ಬಂದು ಇರುವ ಓಟಿಪಿಯನ್ನು ಹಾಕಿ, ನಂತರ ನಾಲ್ಕು ಡಿಜಿಟ್ ಇರುವ ಕೋಡನ್ನು ಕ್ರಿಯೇಟ್ ಮಾಡಿ, ನಂತರ ಮುಖಪುಟದಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಹಣ ಮತ್ತು ಅನ್ನಭಾಗ್ಯ ಯೋಜನೆ ಹಣ ಎಲ್ಲಾ ವಿವರಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.