ಎಲ್ಲೆಡೆ ವಾತಾವರಣದ ಅವಾಂತರ, ಕಂಗಾಲಾದ ಜನ!
– ಮುಂಜಾನೆ ಬಿಸಿಲು ವಾತಾವರಣ, ಸಂಜೆ ಬಳಿಕ ನಿರಂತರ ಮಳೆ!!
– ವಾತಾವರಣದ ಎಫೆಕ್ಟ್, ಕೃಷಿ ಮತ್ತು ಆರೋಗ್ಯಕ್ಕೆ ತೊಂದರೆ!
NAMMUR EXPRESS NEWS
ಬೆಂಗಳೂರು: ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅ. 21ರಂದು ಹಗಲು ವೇಳೆಯಲ್ಲಿ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಸಂಜೆಯಾಗುತ್ತಲೇ ದಟ್ಟ ಮೋಡ ಕವಿಯಲು ಆರಂಭವಾಗಿ ವಿವಿಧೆಡೆ ಮಳೆ ಸುರಿದಿದೆ.
ಮಂಗಳೂರು ನಗರ ಆಸುಪಾಸಿನಲ್ಲಿ ಮುಂಜಾನೆ ವೇಳೆ ಸಾಮಾನ್ಯ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಕರಾವಳಿಗೆ ಎರಡು ದಿನ ಎಲ್ಲೋ ಅಲರ್ಟ್ ಘೋಷಿಸಿದೆ. ಅ. 22ಮತ್ತು 23ರಂದು ಮಳೆ ಇರುವ ಸಾಧ್ಯತೆಯಿದೆ. ಅ.24ಮತ್ತು 25 ಯಾವುದೇ ಮಳೆ ಮುನ್ಸೂಚನೆ ಇಲ್ಲ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
– ಮುಂಜಾನೆ ಬಿಸಿಲು ವಾತಾವರಣ, ಸಂಜೆ ಬಳಿಕ ನಿರಂತರ ಮಳೆ!!
ಬೆಳ್ತಂಗಡಿ: ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತ ಅ. 21ರಂದು ಉತ್ತಮ ಮಳೆಯಾಗಿದೆ. ಬೆಳಾಲು, ಕೊಯ್ಯೂರು, ಬೆಳ್ತಂಗಡಿ ಉಜಿರೆ ಸಹಿತ ಇತರೆಡೆ ಸಂಜೆ ಬಳಿಕ ಸಿಡಿಲು, ಮಿಂಚು ಸಹಿತ ಮಳೆಯಾಗಿದೆ.
ಶಿವಮೊಗ್ಗ,ಚಿಕ್ಕಮಗಳೂರು ವ್ಯಾಪ್ತಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಮಳೆಯಾಗಿದೆ. ಮುಂಜಾನೆ ಬಿಸಿಲಿನ ವಾತಾವರಣವಿದ್ದು, ಸಂಜೆ ಬಳಿಕ ನಿರಂತರ ಮಳೆಯಾಗುತ್ತಿದೆ.
– ವಾತಾವರಣದ ಎಫೆಕ್ಟ್, ಕೃಷಿ, ಅರೋಗ್ಯಕ್ಕೆ ತೊಂದರೆ!
ಪರಿಣಾಮ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಬದಲಾದ ವಾತಾವರಣದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗತೊಡಗಿವೆ. ಅಸಮರ್ಪಕ ವಾತಾವರಣದಿಂದ ತೊಂದರೆಗೀಡಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಹೊಂಡಮಯವಾಗಿದ್ದ ಸ್ಥಳಗಳಿಗೆ ನಿನ್ನೆಯಷ್ಟೇ ಡಾಮರು ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ ಅದಕ್ಕೂ ಸಮಸ್ಯೆಯಾಗಿದೆ.