ಜನಮನ ಸೆಳೆದ ರಾಜಧಾನಿಯ ಸಹ್ಯಾದ್ರಿ ಸಂಘದ ಕ್ರೀಡಾಕೂಟ!
– 1500ಕ್ಕೂ ಹೆಚ್ಚು ಮಲೆನಾಡಿಗರ ಸಮಾಗಮ: ಯಶಸ್ವಿ ಕ್ರೀಡಾಕೂಟ
– ಮಕ್ಕಳ ಡ್ಯಾನ್ಸ್, ಆಟ ಸೂಪರ್: ಬಹುಮಾನ ವಿತರಣೆ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರ ಪ್ರಾತಿನಿಧಿಕ ಸಂಸ್ಥೆ ‘ಸಹ್ಯಾದ್ರಿ ಸಂಘ ಭಾನುವಾರ ತನ್ನ 21ನೆಯ ವಾರ್ಷಿಕ ಕ್ರೀಡಾಕೂಟವನ್ನು ಸುಂಕದ ಕಟ್ಟೆಯ ಒಕ್ಕಲಿಗರ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ನಡೆಸಿದ್ದು ಸಾವಿರಾರು ಮಂದಿ ಮಲೆನಾಡಿಗರು ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಖುಷಿ ಪಟ್ಟರು. ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಅಂಕಿತಾ ಅಮರ್, ಹಾಗೂ ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಗೌಡ, ಕಾರ್ಯದರ್ಶಿ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮಕ್ಕಳು, ಮಹಿಳೆಯರು, ಪುರುಷರು ಆಟ ಆಡಿ ಸಂಭ್ರಮಿಸಿದರು. ಕಬ್ಬಡ್ಡಿ, ವಾಲಿಬಾಲ್ ಥ್ರೋಬಾಲ್ ಗಮನ ಸೆಳೆಯಿತು. ಅತ್ಯುತ್ತಮ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಸಿಐಡಿ ಸೂಪರಿಡೆಟೆಂಟ್ ಆಫ್ ಪೋಲೀಸ್ ಎಂ.ಡಿ.ಶರತ್, ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲೆಯ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್, ಚಿಕ್ಕಮಗಳೂರು ಜಿಲ್ಲೆ ನಿರ್ದೇಶಕರಾದ ಪೂರ್ಣೇಶ್, ಅಧ್ಯಾತ್ಮಿಕ ಚಿಂತಕರಾದ ಡಾ.ಸುಬ್ರಹ್ಮಣ್ಯ, ಸಂಘದ ಅಧ್ಯಕ್ಷರಾದ ಪುರುಷೋತ್ತಮ ಗೌಡ, ಕಾರ್ಯದರ್ಶಿ ಜಯಪ್ರಕಾಶ್ ಎಚ್. ಸಿ, ಆಧ್ಯಾತ್ಮಿಕ ಚಿಂತಕರಾದ ಸುಬ್ರಮಣ್ಯ ಉಡುಪ, ಸಂಘದ ಪದಾಧಿಕಾರಿಗಳಾದ ಗುರು ದೇವ ಪ್ರಸಾದ್ ಕಾಳಮ್ಮನಗುಡಿ, ಮಲ್ಲಪ್ಪಗೌಡ, ಇ.ವಿ.ಸತ್ಯನಾರಾಯಣ, ಗಂಗಪ್ಪ ಗೌಡ, ಭಾಗ್ಯ ಟ್ಯಾಗೂರ್, ಕೆ.ಟಿ.ನಾಗರಾಜ್ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು. ಎಲ್ಲಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಂಜುನಾಥ್ ಶೃಂಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಡಾನ್ಸ್ ಗಮನ ಸೆಳೆಯಿತು. ಮಲೆನಾಡಿನವರೆಲ್ಲರೂ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ಎಡಿಬಿ ದೊನ್ನೆ ಬಿರಿಯಾನಿ ಭೋಜನ ಮಾಡಿದ್ದರು. ಸರ್ವರಿಗೂ ಸಹ್ಯಾದ್ರಿ ಸಂಘದ ಗೌರವಾಧ್ಯಕ್ಷರಾದ ಜಿ.ಎ.ಪುರುಷೋತ್ತಮ ಗೌಡ ಮತ್ತು ಕಾರ್ಯದರ್ಶಿ ಎಚ್.ಸಿ.ಜಯಪ್ರಕಾಶ್ ಸೇರಿ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಧನ್ಯವಾದ ಅರ್ಪಿಸಿದ್ದಾರೆ.