ಮದುವೆಯಾಗೋರಿಗೆ ಸರ್ಕಾರದ ಹಣ ಬರುತ್ತೆ!
– ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಬಂಪರ್
– ಮದುವೆ ಸಹಾಯಧನಕ್ಕೆ ಈ ದಾಖಲೆಗಳು ಕಡ್ಡಾಯ
NAMMUR EXPRESS NEWS
ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಡ ಮಂಡಳಿ ನೊಂದಾಯಿತ ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ್ದು, ಮಂಡಳಿಯು ನೋಂದಾಯಿತ ಕಾರ್ಮಿಕರ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ ಸಹಾಯಧನವನ್ನು ನೀಡುತ್ತದೆ. ನೋಂದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯು ಸಹಾಯಧನವನ್ನು ನೀಡುತ್ತದೆ. ಫಲಾನುಭವಿಯು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ನೋಂದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮ೦ಡಳಿಯು ಸಹಾಯಧನವನ್ನು ನೀಡುತ್ತದೆ.
ಮದುವೆ ಸಹಾಯಧನಕ್ಕೆ ಈ ದಾಖಲೆಗಳು ಕಡ್ಡಾಯ
– ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ
– ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ
– ಬ್ಯಾಂಕ್ ಪಾಸ್ ಬುಕ್ ಪ್ರತಿ
– ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಿ ಪತ್ರ
– ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡವಿಟ್ ಸಲ್ಲಿಸಬೇಕು
– ರೇಷನ್ ಕಾರ್ಡ್ ಪ್ರತಿ
– ವರ ಮತ್ತು ವಧುವಿನ ಆಧಾರ್ ಕಾರ್ಡ್ ಪ್ರತಿ
– ಅರ್ಹತೆ ಮತ್ತು ಮಾನದಂಡಗಳು
– ಮ೦ಡಳಿಯಲ್ಲಿ ನೋ೦ದಾಯಿತ ಸದಸ್ಯರಾಗಿರಬೇಕು
– ನೋ೦ದಣಿ ದಿನಾ೦ಕದಿ೦ದ ಮದುವೆ ದಿನಾ೦ಕದವರೆಗೆ ಮ೦ಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
– ಒ೦ದು ಕುಟು೦ಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ
– ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು
– ಮದುವೆಯ ದಿನಾಂಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು