ಟಾಪ್ 3 ನ್ಯೂಸ್
– ರಾಹುಲ್ ಗಾಂಧಿಗೆ 75 ಲಕ್ಷ ಶೂರಿಟಿ ಕೊಟ್ಟ ಡಿಕೆ ಸುರೇಶ್!
– ಚಂದನ್ ಶೆಟ್ಟಿ – ನಿವೇದಿತಾ ಡೈವೋರ್ಸ್
– ಲೋಕ ಸಭೆಗೆ ಅಟ್ಯಾಕ್ ಭೀತಿ: ಅರೆಸ್ಟ್!
NAMMUR EXPRESS NEWS
ಬೆಂಗಳೂರು: ಭ್ರಷ್ಟಾಚಾರ ಕುರಿತು ದಿನಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬೆಂಗಳೂರಿನ 42ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಷರತ್ತು ಬದ್ಧ ಜಾಮೀನು ನೀಡಿದೆ. ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರು 75 ಲಕ್ಷ ಮೌಲ್ಯದ ಆಸ್ತಿದ ದಾಖಲೆಯನ್ನ ಶ್ಯೂರಿಟಿ ಆಗಿ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಕೋರ್ಟ್ಗೆ ಖುದ್ದು ಹಾಜರಾಗಲು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಕೋರ್ಟ್ ವಿಚಾರಣೆಗೆ ಹಾಜರಾಗಲು ರಾಹುಲ್ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಜೂ.1ರಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು. ರಾಹುಲ್ಗಾಂಧಿ 3ನೇ ಸಮನ್ಸ್ಗೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದ್ದರು. ಇಂದು ವಿಚಾರಣೆಗೆ ಹಾಜರಾದ ರಾಹುಲ್ ಗೆ ಕೋರ್ಟ್ ಕಂಡೀಷನಲ್ ಬೇಲ್ ನೀಡಿದೆ. ಬೇಲ್ ಪಡೆದ ರಾಹುಲ್ ಮತ್ತೆ ದೆಹಲಿಗೆ ವಾಪಸ್ಸಾಗಿದ್ದಾರೆ.
ನಕಲಿ ಆಧಾರ್ ಕಾರ್ಡ್ ಬಳಸಿ ಸಂಸತ್ ಎಂಟ್ರಿಗೆ ಯತ್ನ..!
ಸಂಸತ್ ನುಗ್ಗಿ ಯುವಕರು ಸ್ಮೋಕ್ ಬಾಂಬ್ ಸಿಡಿಸಿ ದಾಂದಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಒಂದು ಘಟನೆ ಸ್ವಲ್ಪದರಲ್ಲೇ ತಪ್ಪಿದೆ. ನಕಲಿ ಆಧಾರ್ ಕಾರ್ಡ್ ಬಳಸಿ ಸಂಸತ್ ಭವನಕ್ಕೆ ಎಂಟ್ರಿ ಕೊಡಲು ಯತ್ನಿಸಿದ್ದ ಮೂವರನ್ನು ಭದ್ರತಾ ಪಡೆ ಅರೆಸ್ಟ್ ಮಾಡಿದೆ. ಇನ್ನು ಬಂಧಿತರನ್ನು ಖಾಸಿಂ, ಮೋನೀಶ್ ಮತ್ತಿ ಸೋಯೆಬ್ ಎಂದು ಗುರುತಿಸಲಾಗಿದೆ.
ಗುರುವಾರ ಭದ್ರತಾ ಸಿಬ್ಬಂದಿ ನಿತ್ಯ ನಡೆಸುವಂತೆ ತಪಾಸಣೆ ವೇಳೆ ಈ ಮೂರು ಕಾರ್ಮಿಕರು ನಕಲಿ ಆಧಾರ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಸಂಸತ್ ಭವನದ ಎದುರು ನಿಯೋಜನೆಗೊಂಡಿರುವ CISF ಭದ್ರತಾ ಸಿಬ್ಬಂದಿ ಮೂವರನ್ನು ತಪಾಸಣೆ ನಡೆಸಿದಾಗ ಇವರ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಕಂಡು ಬಂದಿದ್ದು, ತಕ್ಷಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಫೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಿಸಿ ತನಿಖೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ CISF ಸಿಬ್ಬಂದಿ ಹಾಗೂ ದಿಲ್ಲಿ ಪೊಲೀಸರು ಸಂಸತ್ ಭವನದ ಸಂಪೂರ್ಣ ಭದ್ರತೆಯನ್ನು ಮರುಪರಿಶೀಲಿಸಿದ್ದಾರೆ.
ಇನ್ನು ಈ ಮೂವರು ನೌಕರರು ಡೀ ವೀ ಪ್ರಾಜೆಕ್ಟ್ ಲಿಮಿಟೆಡ್ ನಿಯೋಜಿಸಿರುವ ಗುತ್ತಿಗೆ ನೌಕರರಾಗಿದ್ದು, ಇವರು ಸಂಸತ್ ಭವನದ ಒಳಗೆ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಐಪಿಸಿ ಸೆಕ್ಷನ್ಗಳು 465 (ನಕಲಿ), 419 (ವ್ಯಕ್ತಿತ್ವದಿಂದ ವಂಚನೆ), 120B (ಅಪರಾಧದ ಪಿತೂರಿ), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು), ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) ಅಡಿಯಲ್ಲಿ ಮೂವರ ಮೇಲೂ ಎಫ್ ಐಆರ್ ದಾಖಲಿಸಲಾಗಿದೆ.
ವಿಚ್ಛೇದನ ಪಡೆದ ಚಂದನ್ ಶೆಟ್ಟಿ, ನಿವೇದಿತಾ ಗೌಡ?
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿರುವ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ . ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಅವರು ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ.
ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಂಸಾರದಲ್ಲಿ ಬಿರುಕು ಮೂಡಿದೆ. ಜೂ 7ಕ್ಕೆ ಅವರು ಡೈವೋರ್ಸ್ ಅರ್ಜಿ ಸಲ್ಲಿಸಿದ್ದು, ಅವರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.