ಟಾಪ್ ನ್ಯೂಸ್
– ಜಲಪಾತದಲ್ಲಿ ಯುವಕರ ಹುಚ್ಚಾಟ: ಚಡ್ಡಿ ಹೊತ್ತೋಯ್ದ ಪೊಲೀಸರು..!
– ಕಿರಿಕ್ ವಿಡಿಯೋ: ವಿಕ್ಕಿಪೀಡಿಯಾ ವಿಕಾಸ್ಗೆ ಎಚ್ಚರಿಕೆ
– ವೀರ ಯೋಧನಿಗೆ ಕೀರ್ತಿ ಚಕ್ರ: ಅತ್ತೆ ಸೊಸೆ ಗಲಾಟೆ!
ಚಾರ್ಮಾಡಿ: ನಿಷೇಧಿತ ಫಾಲ್ಸ್ ನಲ್ಲಿ ಹುಚ್ಚಾಟ ನಡೆಸುತ್ತಿದ್ದ ಯುವಕರಿಗೆ ಅವರ ಬಟ್ಟೆ ಹೊತ್ತೊಯ್ದು ಪೊಲೀಸರು ಬುದ್ಧಿ ಕಲಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಡೆದಿದೆ.ಜಲಪಾತದ ಬಳಿ ಹಾಕಿರುವ ಸೂಚನಾ ಫಲಕಗಳನ್ನೂ ಲೆಕ್ಕಿಸದೇ ಯುವಕರು ಅಪಾಯಕಾರಿ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಎಚ್ಚರಿಕೆ ಕೊಟ್ಟರೂ ಯುವಕರು ಮಾತು ಕೇಳದ ಕಾರಣ ಬಟ್ಟೆಯನ್ನು ಕೊಂಡೊಯ್ದು ಗಸ್ತು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಯುವಕರು ಬರಿ ಚಡ್ಡಿಯಲ್ಲೇ ಪೊಲೀಸರ ಹಿಂದೆ ಸರ್.. ಬಟ್ಟೆ ಕೊಡಿ ಎಂದು ಕೇಳಿಕೊಂಡಿದ್ದಾರೆ.
ಯುವಕರು ಎಷ್ಟೇ ಕೇಳಿದರೂ ಪೊಲೀಸರು ಮಾತ್ರ ಬಟ್ಟೆ ವಾಪಸ್ ಕೊಡಲಿಲ್ಲ. ಇದರಿಂದ ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಬಳಿಕ ಯುವಕರು ಇನ್ನೂ ಹೀಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಬಳಿಕ ಪೊಲೀಸರು ಬಟ್ಟೆ ಕೊಟ್ಟು ಬುದ್ದಿವಾದ ಹೇಳಿ ಕಳಿಸಿದ್ದಾರೆ.
ಆಕ್ಷೇಪಾರ್ಹ ವಿಡಿಯೋ: ವಿಕ್ಕಿಪೀಡಿಯಾ ವಿಕಾಸ್ಗೆ ಎಚ್ಚರಿಕೆ
ಬೆಂಗಳೂರು: ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಎಂಬ ಹಾಡಿನ ಹಾಸ್ಯಮಯ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್ ಎಂಬಾತನಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವಿಡಿಯೋವೊಂದರ ಮೇಲೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ವಿಕಾಸ್ನನ್ನು ಬೈಯಪ್ಪನಹಳ್ಳಿ ಪೊಲೀಸರು ಫೋನ್ ಮೂಲಕ ಸಂಪರ್ಕಿಸಿದ್ದು, ಡ್ರಗ್ಸ್ ಬಗೆಗಿನ ಪ್ರಚೋದನಾತ್ಮಕ ಹೇಳಿಕೆಯ ವಿಡಿಯೋ ಡಿಲೀಟ್ ಮಾಡಬೇಕು ಎಂದಿದ್ದಾರೆ. ಅಲ್ಲದೆ ವಿಡಿಯೋ ಡಿಲಿಟ್ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಖಾಕಿ ಎಚ್ಚರಿಕೆ ನೀಡಿದ ಬೆನ್ನಲ್ಲೆ ವಿಕಾಸ್ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೀರ್ತಿ ಚಕ್ರ: ಅತ್ತೆ ಸೊಸೆ ಗಲಾಟೆ!
ಹೊಸದಿಲ್ಲಿ: ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್ ಭಾರತೀಯ ಸೇನಾ ಕ್ಯಾಂಪ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅಗ್ನಿ ಕೆನ್ನಾಲಿಗೆಯಿಂದ ಇತರರನ್ನು ರಕ್ಷಿಸುವ ವೇಳೆ ಹುತಾತ್ಮರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ತನ್ನ ಮಗ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಅವರು ಪ್ರದಾನಿಸಿದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸೊಸೆ ಸ್ಮೃತಿ ತನ್ನೊಂದಿಗೆ ಕೊಂಡೊಯ್ದಿದ್ದಾರೆ ಎಂದು ಅಂಶುಮನ್ ತಂದೆ ಆರೋಪಿಸಿದ್ದಾರೆ.
ಅಂಶುಮಾನ್ ತಂದೆ ರವಿಪ್ರತಾಪ್ ಸಿಂಗ್ ಸುದ್ದಿವಾಹಿನಿಯೊಂದಿಗೆ ಮಾತನಾಡಿ, ತಮ್ಮ ಪುತ್ರನಿಗೆ ಮರಣೋತ್ತರವಾಗಿ ಸರ್ಕಾರ ನೀಡಿದ ಕೀರ್ತಿ ಚಕ್ರವನ್ನು ಅವರ ಸೊಸೆ ಸ್ಮೃತಿ ಅಂಶುಮಾನ್ ಫೋಟೋ ಆಲ್ಬಮ್, ಬಟ್ಟೆ ಮತ್ತು ಇತರ ನೆನಪುಗಳೊಂದಿಗೆ ಗುರುದಾಸ್ಪುರದ ಮನೆಗೆ ತೆಗೆದುಕೊಂಡು ಹೋದರು. ನಾವು ಅಂಶುಮಾನ್ ಅವರನ್ನು ಸ್ಕೃತಿಯೊಂದಿಗೆ ವಿವಾಹ ಮಾಡಿದ್ದೆವು. ಮದುವೆಯ ನಂತರ, ಅವರು ನನ್ನ ಮಗಳೊಂದಿಗೆ ನೋಯ್ದಾದಲ್ಲಿ ಇರಲು ಪ್ರಾರಂಭಿಸಿದರು. ಜುಲೈ 19, 2023 ರಂದು, ಅಂಶುಮಾನ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂದಾಗ, ನಾನು ಅವರನ್ನು ಲಕ್ಕಿಗೆ ಕರೆದಿದ್ದೆ, ಆದರೆ ಅಂತ್ಯಕ್ರಿಯೆಯ ನಂತರ ಅವಳು (ಸ್ಕೃತಿ) ಗುರುದಾಸ್ಪುರಕ್ಕೆ ಹಿಂತಿರುಗಿದಳು” ಎಂದು ರವಿ ಪ್ರತಾಪ್ ಸಿಂಗ್ ತಿಳಿಸಿದರು.ಇನ್ನು ಅಂಶುಮಾನ್ ಅವರಿಗೆ ಕೀರ್ತಿ ಚಕ್ರ ನೀಡಿದಾಗ, ಆತನ ತಾಯಿ ಮತ್ತು ಸ್ಮೃತಿ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರ ನೀಡಿ ಗೌರವಿಸಿದರು, ಆದರೆ ನನಗೆ ಅದನ್ನು ಒಮ್ಮೆಯೂ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಕ್ಯಾಪ್ಟನ್ ಅಂಶುಮಾನ್ ಸಿಂಗ್ ತಾಯಿ ಮಂಜು, “ರಾಷ್ಟ್ರಪತಿ ಭವನದಲ್ಲಿ ಸ್ಕೃತಿ ಅವರೊಂದಿಗೆ ಜುಲೈ 5 ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆವು. ನಾವು ಕಾರ್ಯಕ್ರಮದಿಂದ ಹೊರಡುವಾಗ, ಸೇನಾಧಿಕಾರಿಗಳ ಹೇಳಿಕೆಯ ಮೇರೆಗೆ ನಾನು ಫೋಟೋಗಾಗಿ ಕೀರ್ತಿ ಚಕ್ರವನ್ನು ಹಿಡಿದಿದ್ದೇನೆ. ಆದರೆ ಅದರ ನಂತರ, ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡಳು” ಎಂದು ಆರೋಪಿಸಿದರು.