-2 ಸರ್ಕಾರಿ ಬಸ್ಗಳು ಮುಖಾಮುಖಿ ಡಿಕ್ಕಿ; ಇಬ್ಬರ ಸಾವು!
– ದಿನಸಿ ಅಂಗಡಿ ಮಾಲೀಕನ ಬರ್ಬರ ಹತ್ಯೆ!
– ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಮುಖ್ಯ ಶಿಕ್ಷಕ ಅಮಾನತು!
– ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಕಾಮುಕರ ಬಳಿ ಬಿಟ್ಟ ಪರಿಚಿತ ಮಹಿಳೆ;
ನಾಲ್ವರಿಂದ ಸಾಮೂಹಿಕ ಅತ್ಯಾಚಾರ
-ಕಾರು ಬೈಕ್ ಡಿಕ್ಕಿ; ಸ್ಥಳದಲ್ಲೇ ಮೂವರ ಸಾವು!
NAMMUR EXPRESS NEWS
ವಿಜಯಪುರ: ಜನವರಿ 06ರಂದು ವಿಜಯಪುರ ತಾಲೂಕಿನ ಕವಲಗಿ ಬಳಿ ಹೆದ್ದಾರಿಯಲ್ಲಿ 2 ಸರ್ಕಾರಿ ಬಸ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಸಾಜೀದಾ ಬೇಗಂ(36), ರೋಹಿಣಿ ಪಂಚಾಳ(31) ಮೃತಪಟ್ಟಿದ್ದಾರೆ. ಬಸನವಬಾಗೇಬಾಡಿ ತಾಲೂಕಿನ ಡೋಣೂರು ನಿವಾಸಿಯಾದ ಸಾಜೀದಾ ಮತ್ತು ಕಲಬುರಗಿ ನಗರದ ನಿವಾಸಿಯಾದ ರೋಹಿಣಿ ಮೃತ ದುರ್ದೈವಿಗಳು. ಸದ್ಯ ಗಾಯಾಳು ಪ್ರಯಾಣಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಅಪಘಾತ ಹಿನ್ನೆಲೆ ಸಂಚಾರ ಬಂದ್ ಮಾಡಲಾಗಿದೆ. 3 ಕಿಲೋಮೀಟರ್ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
– ದಿನಸಿ ಅಂಗಡಿ ಮಾಲೀಕನ ಬರ್ಬರ ಹತ್ಯೆ
ಆನೇಕಲ್: ಹೊಸೂರಿನ ಸಿಪ್ಕಾಟ್ ಸಮೀಪದ ಬೇಗಿಪಲ್ಲಿಯಲ್ಲಿ ದಿನಸಿ ಅಂಗಡಿ ಮಾಲಿಕನಾದ ತಿಮ್ಮರಾಜು(40) ಯನ್ನು ಹತ್ಯೆ ಮಾಡಿದ್ದಾರೆ. ನಿನ್ನೆ ಸಂಜೆ ಬೈಕ್ನಲ್ಲಿ ಬಂದ ಮುಸುಕುಧಾರಿಗಳು, 25 ಬಾರಿ ಚಾಕುವಿನಿಂದ ಇರಿದು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಿಪ್ ಕಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕ ಅಮಾನತು!
ಮೈಸೂರು: ನಂಜನಗೂಡು ತಾಲೂಕಿನ ದಾಸನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಮುಖ್ಯ ಶಿಕ್ಷಕನನ್ನು ಅಮಾನತುನ ಮಾಡಲಾಗಿದೆ.
ಮೈ ಕೈ ಮುಟ್ಟುವುದು, ಅಸಭ್ಯವಾಗಿ ವರ್ತಿಸುತ್ತಿರುವ ಮುಖ್ಯ ಶಿಕ್ಷಕ ಪ್ರಕಾಶ್ ವಿರುದ್ಧ ವಿದ್ಯಾರ್ಥಿನಿಯರ ಪೋಷಕರು ದೂರು ನೀಡಿದ್ದರು. ಪ್ರಕರಣ ಸಂಬಂಧ ಪೋಕ್ಸೋದಡಿ ಪ್ರಕರಣ ದಾಖಲು ಮಾಡಲು ಡಿಡಿಪಿಐಗೆ ಶಿಫಾರಸ್ಸು ಮಾಡಲಾಗಿದೆ.
– ಬಾಲಕಿಯನ್ನು ಕಾಮುಕರ ಬಳಿ ಬಿಟ್ಟ ಪರಿಚಿತ ಮಹಿಳೆ;
ನಾಲ್ವರಿಂದ ಸಾಮೂಹಿಕ ಅತ್ಯಾಚಾರ!
ದೆಹಲಿ: ಉತ್ತರ ದೆಹಲಿಯ ಸದರ್ ಬಜಾರ್ನಲ್ಲಿ 12 ವರ್ಷದ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಅತ್ಯಾಚಾರವೆಸಗಿದ್ದಾರೆ. ಪರಿಚಿತ ಮಹಿಳೆಯೊಬ್ಬರು ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಕಾಮುಕರ ಬಳಿ ಬಿಟ್ಟಿದ್ದಾರೆ. ಗುರುವಾರ ಜನವರಿ 4 ರಂದು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
ಪರಿಚಿತ ಮಹಿಳೆಯೊಬ್ಬಳು ಬಾಲಕಿಯನ್ನು ಪುಸಲಾಯಿಸಿ ಮನೆಯಿಂದ ನಾಲ್ವರು ಆರೋಪಿಗಳಿದ್ದ ಸ್ಥಳಕ್ಕೆ ಕರೆದು ಕೊಂಡು ಹೋಗಿದ್ದಾರೆ. ಅದೇ ಸ್ಥಳದಲ್ಲಿ ಅತ್ಯಾಚಾರ ನಡೆದಿದೆ. ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿತ್ತು. ಸದರ್ ಬಜಾರ್ಗೆ ಕಸ ಸಂಗ್ರಹಿಸಲು ಬಂದಾಗ ಆ ಪ್ರದೇಶದಲ್ಲಿ ನೆಲೆಸಿರುವ ತನ್ನ ಸೋದರ ಮಾವನ ಬಳಿ ನಡೆದ ಘಟನೆಯನ್ನೆಲ್ಲ ಹೇಳಿದ್ದಾಳೆ. ಇದಾದ ಬಳಿಕ ಸೋದರ ಸಂಬಂಧಿ ಅಪ್ರಾಪ್ತ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದು, ನಂತರ ಎಲ್ಲರೂ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಕೆಲವೇ ಗಂಟೆಗಳಲ್ಲಿ ತಂಡವನ್ನು ರಚಿಸಿ ಮತ್ತು ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳಲ್ಲಿ ಒಬ್ಬ ಸುರೇಶ್ ಕುಮಾರ್ 38 ವರ್ಷ ಸದರ್ ಬಜಾರ್ ಕೊಳೆಗೇರಿಯಲ್ಲಿ ಟೀ ಮಾರುತ್ತಿದ್ದವ. ಮೂವರು ಆರೋಪಿಗಳು 12, 14 ಮತ್ತು 15 ವರ್ಷ ವಯಸ್ಸಿನವರಾಗಿದ್ದು, ಮಹಿಳೆಯನ್ನು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿದೆ.
– ಕಾರು ಬೈಕ್ ಡಿಕ್ಕಿ; ಸ್ಥಳದಲ್ಲೇ ಮೂವರ ಸಾವು!
ತುಮಕೂರು: ಜನವರಿ 6 ರಂದು ತುರುವೇಕೆರೆ ತಾಲೂಕಿನ ಜೋಡಗಟ್ಟೆ ಗ್ರಾಮದ ಬಳಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಿಪಟೂರು ಮೂಲದ 21 ವರ್ಷದ ಅನಿಲ್ ಕುಮಾರ್, ನರಸಿಂಹ ಮೂರ್ತಿ (21) ಹಾಗೂ ಕಾವ್ಯಾ (19) ಸಾವನಪ್ಪಿದ ದುರ್ದೈವಿಗಳು. ಆದಿಚುಂಚನಗಿರಿ ಮಠಕ್ಕೆ ಹೋಗಿ ವಾಪಸಾಗುವಾಗ ಘಟನೆ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮೃತದೇಹಗಳು ಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
– ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್!
ತುಮಕೂರು: ತುಮಕೂರು ತಾಲೂಕಿನ ಒಕ್ಕೋಡಿ ಬಳಿ
ರೌಡಿಶೀಟರ್ ಮನೋಜ್ ಅಲಿಯಾಸ್ ಮಂಡೇಲಾ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೆಳಗ್ಗೆ ಬಂಡೆ ನಾಗನ ಮೇಲೆ ಕೊಲೆಗೆ ಯತ್ನಿಸಿದ್ದ ರೌಡಿ ಮನೋಜ್
ಬಂಡೆನಾಗ ಎಂಬುವವನು ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದು, ಕೊಲೆ ಯತ್ನದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ. ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಮನೋಜ್ಗಾಗಿ ಹುಡುಕಾಟ ನಡೆಸಿದ್ದು, ಒಕ್ಕೋಡಿಯಲ್ಲಿ ತಲೆ ಮರೆಸಿಕೊಂಡಿರುವ ಮನೋಜ್ ಬಂಧನಕ್ಕೆ ತೆರಳಿದ್ದ ವೇಳೆ ಹೆಡ್ ಕಾನ್ಸ್ಟೇಬಲ್ ಮೇಲೆ ರೌಡಿ ಮಚ್ಚು ಬೀಸಿದ್ದಾನೆ. ಆತ್ಮರಕ್ಷಣೆಗಾಗಿ ತುಮಕೂರು ಸಿಪಿಐ ದಿನೇಶ್ ಕುಮಾರ್ ರಿಂದ ಪೈರಿಂಗ್ ಮಾಡಲಾಗಿದೆ. ಮನೋಜ್ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.