ಗುಜರಿ ಅಂಗಡಿಗೆ ಬೆಂಕಿ: ಮೂವರು ಸಜೀವ ದಹನ!
– ರಾಜಧಾನಿಯಲ್ಲಿ ನಡೆದ ದುರಂತ: ನಾಲ್ವರ ಸ್ಥಿತಿ ಚಿಂತಾಜನಕ
– ಹಂದಿ ಸಾಯಿಸಲು ಬ್ಯಾಗಲ್ಲಿ ಕೊಂಡೋಯ್ದ ಸಿಡಿಮದ್ದು ಸ್ಫೋಟ!
– ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಸ್ಫೋಟ, ಇಬ್ಬರಿಗೆ ಗಾಯ: ಕೇಸ್ ದಾಖಲು
NAMMUR EXPRESS NEWS
ಬೆಂಗಳೂರು: ಮೈಸೂರು ರಸ್ತೆಯ ರಾಮಸಂದ್ರದಲ್ಲಿರುವ ಗುಜರಿ ಮಳಿಗೆ ಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮಳಿಗೆಯ ಮಾಲೀಕ ಸೇರಿ ಮೂವರು ಸಜೀವ ದಹನವಾಗಿದ್ದಾರೆ. ಭಾನುವಾರ ಸಂಜೆ 5.30 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಚಿಕ್ಕಬಸ್ತಿ ನಿವಾಸಿ ಸಲೀಂ ಹಾಗೂ ಇಬ್ಬರು ಕಾರ್ಮಿಕರು ಮೃತಪಟ್ಟಿ ದ್ದಾರೆ. 10 ವರ್ಷದ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು. ‘ರಾಮಸಂದ್ರ ಬಸ್ ನಿಲ್ದಾಣ ಸಮೀಪದಲ್ಲಿರುವ ನಿವೇಶನದಲ್ಲಿ ಶೆಡ್ ನಿರ್ಮಿಸಿ ಗುಜರಿ ಮಳಿಗೆ ತೆರೆಯಲಾಗಿತ್ತು. ಗುಜರಿ ವಸ್ತುಗಳನ್ನು ಖರೀದಿಸು ತ್ತಿದ್ದ ಮಾಲೀಕ ಸಲೀಂ, ಕಾರ್ಮಿಕರನ್ನು ಬಳಸಿಕೊಂಡು ವಸ್ತುಗಳನ್ನು ಬೇರ್ಪಡಿಸುತ್ತಿದ್ದರು. ನಂತರ, ಅದೇ ವಸ್ತುಗಳನ್ನು ಮರು ಬಳಕೆಗಾಗಿ ಬೇರೆಡೆ ಸಾಗಿಸುತ್ತಿ ದ್ದರು’ ಎಂದರು.
ಹಂದಿ ಸಾಯಿಸಲು ಬ್ಯಾಗಲ್ಲಿ ಕೊಂಡೋಯ್ದ ಸಿಡಿಮದ್ದು ಸ್ಫೋಟ!
ಶಿವಮೊಗ್ಗ: ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪ ಫುಟ್ಪಾತ್ನಲ್ಲಿದ್ದ ಬ್ಯಾಗ್ನಲ್ಲಿ ಹಂದಿ ಸಾಯಿಸುವ ಸಿಡಿ ಮದ್ದು ಸ್ಫೋಟ ಸಂಭವಿಸಿ ಇಬ್ಬರಿಗೆ ಗಾಯವಾಗಿದ್ದು ಪ್ರಕರಣ ದಾಖಲಾಗಿದೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಬೆಳಿಗ್ಗೆ ನಡೆದ ಈ ಘಟನೆ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಶಿರಾಳಕೊಪ್ಪ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿಕಾರಿಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಇಂತಹ ಸ್ಪೋಟಕ ವಸ್ತುಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಅಕ್ರಮ ಸಾಗಣೆ, ಬಳಕೆ ಬಗ್ಗೆ ತನಿಖೆಗೆ ಮುಂದಾಗಿದೆ.