ಟಾಪ್ ನ್ಯೂಸ್ ಕರ್ನಾಟಕ
– ಶಾಸಕ ಸತೀಶ್ ಸೈಲ್ ಅವರಿಗೆ 7 ವರ್ಷ ಶಿಕ್ಷೆ ಪ್ರಕಟ!
– ಹಾಸನ : ಪೊಲೀಸ್ ಠಾಣೆ ಎದುರೇ ಗಾಂದೀಜಿ ವೇಷದಲ್ಲಿ ಮಕ್ಕಳ ಭಿಕ್ಷಾಟನೆ
– ಗಂಡ ಕಪ್ಪಗಿದ್ದಾನೆ ಎಂದು ಮನನೊಂದು ಯುವತಿ ನೇಣಿಗೆ ಶರಣು
NAMMUR EXPRESS NEWS
ಕಾರವಾರ: ಅದಿರು ನಾಪತ್ತೆ ಪ್ರಕರಣ ಸಂಬಂಧ ಆರು ಪ್ರಕರಣಗಳಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಗೆ ಜನಪ್ರತಿನಿಧಿಗಳ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷ ವಿಧಿಸಿ ತೀರ್ಪು ನೀಡಿದೆ. ಎಲ್ಲಾ ಆರು ಪ್ರಕರಣಗಳ ಒಟ್ಟಾರೆ ಪರಿಗಣಿಸಿ ಈ ಶಿಕ್ಷೆ ಪ್ರಕಟವಾಗಿದೆ. ಈ ಹಿಂದೆ ನ್ಯಾಯಾಲಯ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಈಗ ಎಲ್ಲಾ ಪ್ರಕರಣಗಳನ್ನು ಪರಿಗಣಿಸಿ ಏಳು ವರ್ಷ ಶಿಕ್ಷೆ ಪ್ರಕಟಿಸಿದೆ.
ಶಿಕ್ಷೆ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಶಾಸಕ ಸೈಲ್ ಮನವಿ ಮಾಡಿದ್ದರು. ಆದರೆ ಇದೀಗ 7 ವರ್ಷ ಜೈಲು ಆಗಿರುವುದರಿಂದ ಶಾಸಕ ಸ್ಥಾನವೂ ಅನರ್ಹ ಆಗಲಿದೆ.
– ಹಾಸನ : ಪೊಲೀಸ್ ಠಾಣೆ ಎದುರೇ ಗಾಂದೀಜಿ ವೇಷದಲ್ಲಿ ಮಕ್ಕಳ ಭಿಕ್ಷಾಟನೆ
ಹಾಸನ: ಪೊಲೀಸ್ ಠಾಣೆ ಎದುರೇ ಎನ್.ಆರ್. ವೃತ್ತದಲ್ಲಿ ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂದೀಜಿ ವೇಶದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಐವರು ಮಕ್ಕಳನ್ನು ಶ್ರೀರಾಮ ಸೇನೆಯವರು ರಕ್ಷಣೆ ಮಾಡಿ ಅವರನ್ನು ಮೊದಲು ಪೊಲೀಸ್ ಠಾಣೆಗೆ ಕರೆತಂದು ನಂತರ ಪೊಲೀಸರ ಸಲಹೆ ಮೆರೆಗೆ ಮಕ್ಕಳನ್ನು ಕಲ್ಯಾಣ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ. ಶ್ರೀರಾಮಸೇನೆ ಜಾನೆಕೆರೆ ಹೇಮಂತ್ ಮಾಧ್ಯಮದೊಂದಿಗೆ ಮಾತನಾಡಿ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ ಸೇರಿದಂತೆ ಇತರೆ ಭಾಗಗಳಿಂದ ನಮ್ಮ ರಾಜ್ಯ ಜಿಲ್ಲೆಗೆ ಮಕ್ಕಳು ಹಾಗೂ ಇತರರು ಕರೆತಂದು ಭಿಕ್ಷಾಟನೆ ಮಾಡಿಸುವ ಜಾಲವಿದ್ದು, ಹಾಸನ ನಗರದ ಎನ್.ಆರ್. ವೃತ್ತದಲ್ಲಿ ಪೊಲೀಸ್ ಠಾಣೆ ಎದುರೇ ಐದು ಜನ ಮಕ್ಕಳು ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂಧೀಜಿ ವೇಶದಲ್ಲಿ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ತಿಳಿದು ಶ್ರೀರಾಮ ಸೇನೆಯಿಂದ ಅವರನ್ನು ರಕ್ಷಣೆ ಮಾಡಿ ಪೊಲೀಶ್ ಠಾಣೆಗೆ ಒಪ್ಪಿಸಲಾಯಿತು. ಆದರೇ ನಂತರ ಸಲಹೆ ಮೆರೆಗೆ ಮಕ್ಕಳ ಕಲ್ಯಾಣ ಸಮಿತಿಯ ಇಲಾಖೆಗೆ ಒಪ್ಪಿಸಲಾಗಿದೆ. ಇಂತಹ ಮಕ್ಕಳು ಇಲ್ಲಿ ೨೦೦ಕ್ಕೂ ಹೆಚ್ಚು ಇದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ ಎಂದು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿಯ ಛೇರ್ ಪರ್ಸನ್ ಕೋಮಲ ಮಾತನಾಡಿ, ಶ್ರೀರಾಮ ಸೇನೆಯವರು ಮಕ್ಕಳನ್ನು ಕರೆತಂದು ಉತ್ತಮ ಕೆಲಸ ಮಾಡಿದ್ದಾರೆ. ಇಲ್ಲಿರುವ ಮಕ್ಕಳಲ್ಲಿ ೧೦ ವರ್ಷ, ೧೪, ೧೭ ವರ್ಷದವರು ಬಾಲಕರು ಇದ್ದಾರೆ. ಪ್ರಸ್ತೂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹೊರಗಿನಿಂದ ಈ ಮಕ್ಕಳು ಬಂದಿದ್ದು, ಮಕ್ಕಳ ಕಲ್ಯಾಣ ಸಮಿತಿಯಿಂದ ಇಂತಹ ಮಕ್ಕಳನ್ನು ವಿಚಾರಿಸಿ ಎಜಕೇಶನ್ ಕೊಡಲು ಮುಂದಾಗುತ್ತೇವೆ. ಇಂತಹ ಮಕ್ಕಳ ಸಂಖ್ಯೆ ದಿನೆದಿನೆ ಹೆಚ್ಚಾಗಿ ಅವ್ಯವಸ್ಥೆ ಉಂಟಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಗಮನವಹಿಸಬೇಕು ಎಂದರು.
– ಗಂಡ ಕಪ್ಪಗಿದ್ದಾನೆ ಎಂದು ಮನನೊಂದು ಯುವತಿ ನೇಣಿಗೆ ಶರಣು
ನವ ವಿವಾಹಿತೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಸಿಮ್ರಾನ್ ಆತ್ಮಹತ್ಯೆಗೆ ಶರಣಾದ ಯುವತಿ. ಪ್ರತಿ ದಿನದಂತೆ ಈ ಘಟನೆ ನಡೆದ ದಿನವೂ ಆಕೆಯ ಪತಿ ಕೆಲಸಕ್ಕೆ ಹೋಗಿದ್ದರು. ಆಗ ಮನೆಯಲ್ಲಿ ಒಬ್ಬಳೇ ಇದ್ದ ಆಕೆ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ.
ಆ ಮಹಿಳೆಗೆ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಆದರೆ, ತನ್ನ ಗಂಡ ಕಪ್ಪಗಿದ್ದಾನೆ ಎಂದು ಆಕೆ ಕೊರಗುತ್ತಿದ್ದಳು. ಆಕೆಯ ಆತ್ಮಹತ್ಯೆಯ ನಂತರ ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಆ ಮಹಿಳೆಗೆ ಪತಿ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.
ಈ ಪ್ರಕರಣವು ಹತ್ರಾಸ್ನ ಸಿಯಾಲ್ ಖೇಡಾ ಮೊಹಲ್ಲಾದಲ್ಲಿ ನೆಲೆಸಿರುವ ತೌಫಿಕ್, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆಯಷ್ಟೇ ತೌಫಿಕ್, 25 ವರ್ಷದ ಸಿಮ್ರಾನ್ ಅವರನ್ನು ವಿವಾಹವಾಗಿದ್ದರು. ಸಿಮ್ರಾನ್ ಬರೌಲಾದ ಅಲಿಗಢದ ಜಫರಾಬಾದ್ ನಿವಾಸಿಯಾಗಿದ್ದರು. ತೌಫಿಕ್ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ತೌಫಿಕ್ ಕೆಲಸಕ್ಕೆ ತೆರಳಿದ ಬಳಿಕ ಆತನ ಪತ್ನಿ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದ ಸಿಮ್ರಾನ್ನನ್ನು ನೋಡಿದ ಅಕ್ಕಪಕ್ಕದ ಕೆಲವರು ಆಕೆಯ ಪತಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಕುರಿತು ಮೃತನ ಸಹೋದರ ಫಕ್ರುದ್ದೀನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ತನ್ನ ಸಹೋದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ತಿಂಗಳ ಹಿಂದೆ ತೌಫಿಕ್ ಎಂಬಾತನಿಗೆ ತಂಗಿಯನ್ನು ಮದುವೆ ಮಾಡಿಸಿದ್ದೆ. ತಂಗಿಗೆ ಹುಡುಗ ಇಷ್ಟವಾಗಲಿಲ್ಲ. ಇದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅನುಮಾನವಿದೆ ಎಂದಿದ್ದಾರೆ.