ಅಪಾರ್ಟ್ಮೆಂಟ್ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು
– ಪೊಲೀಸರಿಗೇ ಮೇಲ್ ಕಳಿಸಿ ಐಸಿಸ್ ಸೇರಲು ಹೊರಟಿದ್ದ ಯುವಕ ಅರೆಸ್ಟ್!
– ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ
– ಮನೆಯೊಳಗೆ ನುಗ್ಗಿ ಗಲಾಟೆ ಮಾಡಿ ಮತ್ತು ಓಮಿನಿ ಕಾರು ಜಖಂಗೊಳಿಸಿದ ಪ್ರಕರಣ
– ಬೈಕ್ ಅಪಘಾತ ವಿವಾಹಿತೆ ಸಾವು
– ಕಾರಿನಲ್ಲಿ ಅಕ್ರಮ ಗೋ ಸಾಗಾಟ, ದನ ಬಿಟ್ಟು ಓಡಿ ಹೋಗಿದ್ದಾರೆ
– ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ಲಕ್ಷಾಂತರ ರುಪಾಯಿ ವಂಚಿಸಿದವ ಅರೆಸ್ಟ್
– ದರೋಡೆಗೆ ಸ್ಕೆಚ್ ಹಾಕಿದ್ದ ಗ್ಯಾಂಗ್ ಇಬ್ಬರು ಅರೆಸ್ಟ್
– ಬಂಧಿಸಲು ಬಂದ ಪೊಲೀಸರ ಮೇಲೆ ಅಟ್ಯಾಕ್
– ಫೇಸ್ಬುಕ್ ಗೆಳೆಯನಿಂದ ತಾಯಿ-ಮಗನ ಕ್ರೂರ ಹತ್ಯೆ
NAMMUR EXPRESS NEWS
ಕುಂದಾಪುರ : ಅಪಾರ್ಟಮೆಂಟ್ ಒಂದರ ಐದನೇ ಮಹಡಿಯಿಂದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ ಘಟನೆ ಹಳೇ ಗೀತಾಂಜಲಿ ಟಾಕೀಸ್ ಸಮೀಪ ನಡೆದಿದೆ. ಮೃತರನ್ನು ಲಕ್ಷ್ಮೀ ಪ್ರತಾಪ್ ನಾಯಕ್ (41) ಎಂದು ಗುರುತಿಸಲಾಗಿದೆ. ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದ ಲಕ್ಷ್ಮೀ ಪ್ರತಾಪ್ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ಫ್ಲೋರಿಗೆ ಬಿದ್ದರೆನ್ನಲಾಗಿದೆ. ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಪೊಲೀಸರಿಗೇ ಮೇಲ್ ಕಳಿಸಿ ಐಸಿಸ್ ಸೇರಲು ಹೊರಟಿದ್ದ ಯುವಕ ಅರೆಸ್ಟ್!
ಕುಖ್ಯಾತ ಭಯೋತ್ಪಾದ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಫಾರ್ ಇರಾಕ್ ಮತ್ತು ಸಿರಿಯಾ(ಐಸಿಸ್) ಸೇರುವುದಾಗಿ ತಿಳಿಸಿದ್ದ ಗುವಾಹಟಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಗುವಾಹಟಿ) ವಿದ್ಯಾರ್ಥಿಯೊಬ್ಬನನ್ನು ಗುವಾಹಟಿ ಸಮೀಪದ ಹಾಜೋ ಪ್ರದೇಶದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಐಸಿಸ್ನ ಭಾರತ ಘಟಕದ ಮುಖ್ಯಸ್ಥ ಹ್ಯಾರಿಸ್ ಅಜ್ಮಲ್ ಫಾರೂಖಿ ಬಂಧನದ ನಾಲ್ಕೇ ದಿನಗಳಲ್ಲಿ ವಿದ್ಯಾರ್ಥಿಯೊಬ್ಬ ಐಸಿಸ್ ಉಗ್ರ ಸಂಘಟನೆಗೆ ಸೇರುವುದಾಗಿ ಘೋಷಣೆ ಮಾಡಿರುವುದು ಮಹತ್ವವೆನಿಸಿದೆ. ಪೊಲೀಸರಿಗೆ ಐಸಿಸ್ ಸೇರುವುದಾಗಿ ಮೇಲ್ ಕಳಿಸಿರುವ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಖಿ ಐಐಟಿ ಗುವಾಹಟಿಯಲ್ಲಿ ನಾಲ್ಕನೇ ವರ್ಷದ ಬಯೋಟೆಕ್ನಾಲಜಿ ಸ್ನಾತಕೊತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಜೊತೆಗೆ ಈತ ದೆಹಲಿಯ ಓಖ್ಲಾ ಮೂಲದವನು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವಿದ್ಯಾರ್ಥಿಯೇ ಖುದ್ದು ಪೊಲೀಸರಿಗೆ ಮೇಲ್ ಕಳಿಸಿ ತಾನು ಐಸಿಸ್ ಉಗ್ರ ಸಂಘಟನೆ ಸೇರುವುದಾಗಿ ತಿಳಿಸಿದ್ದ. ಬಳಿಕ ಪೊಲೀಸರು ಆತ ವ್ಯಾಸಂಗ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿದಾಗ ಆತ ನಾಪತ್ತೆಯಾಗಿರುವುದಾಗಿ ತಿಳಿದುಬಂದಿತ್ತು. ಇದೇ ಸಮಯದಲ್ಲಿ ಆತನ ಮೊಬೈಲ್ ಸಂಪರ್ಕ ಕೂಡ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಕೊಠಡಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಐಸಿಸ್ ಬಾವುಟ ಹೋಲುವ ಕಪ್ಪು ಬಾವುಟ ಪತ್ತೆಯಾಗಿದೆ. ನಂತರ ಸ್ಥಳೀಯರ ಸಹಕಾರದೊಂದಿಗೆ ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಾಜೋ ಎಂಬ ಪ್ರದೇಶದಲ್ಲಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ವಿಚಾರಣೆಗೆಂದು ವಶಕ್ಕೆ ಪಡೆಯಲಾಗಿದೆ.
– ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ
ತರೀಕೆರೆ: ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ವ್ಯಾಪ್ತಿಯ ವರ್ತೆಗುಂಡಿ ಎಂಬ ಗ್ರಾಮದಲ್ಲಿ ನಡೆದಿದೆ. ಅಕ್ಟರ್(35) ಮೃತ ದುರ್ದೈವಿ. ತೋಟದಲ್ಲಿ ಆನೆ ಓಡಿಸುವಾಗ ಏಕಾಏಕಿ ನುಗ್ಗಿ ಬಂದಿದ್ದ ಕಾಡಾನೆ ಟಿಂಬರ್ ಕಾರ್ಮಿಕ ಅಕ್ಬರ್ ಮೇಲೆ ದಾಳಿ ಮಾಡಿದೆ. ಈ ವೇಳೆ ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಆನೆ ಕಾಲಿಟ್ಟು ಕೊಂದಿದೆ. ಭೀಕರತೆಗೆ ದೇಹದ ಅಂಗಾಗಗಳು ಛಿದ್ರವಾಗಿ, ಕರುಳು ಹೊರ ಬಂದಿದೆ.
– ಮನೆಯೊಳಗೆ ನುಗ್ಗಿ ಗಲಾಟೆ ಮಾಡಿ ಮತ್ತು ಓಮಿನಿ ಕಾರು ಜಖಂಗೊಳಿಸಿದ ಪ್ರಕರಣ
ಶಿವಮೊಗ್ಗ: ಮನೆಗೆ ನುಗ್ಗಿ ಪೀಠೋಪಕರಣಗಳ ಹಾನಿ ಮಾಡಿದ ಮತ್ತು ಓಮಿನಿ ವಾಹನಗಳನ್ನ ಜಖಂಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ. ಓರ್ವ ಮಹಿಳೆ ಮತ್ತು ಕಡ್ಡಿ ಮಧು ಅವರಿಂದ ಸಚಿನ್ ಯಾನೆ ಸ್ಯಾಡೋ, ಪ್ರವೀಣ ಯಾನೆ ಮೋಟು, ವಿಶಾಲ್ ಯಾನೆ ಡಾಲು, ದರ್ಶನ್ ಯಾನೆ ನಲ್ ಕುಮಾರಿ, ಸೂರಜ್ ಯಾನೆ ಸೂರು, ನಿತಿನ್ ರಾಜ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಹೊಸಮನೆಯಲ್ಲಿ ಮನೆಗೆ ಬಂದ ಸಚಿನ್, ದರ್ಶನ್ ಹಾಗೂ ಇತರರು. ನಡು ರಾತ್ರಿಯಲ್ಲಿ ಬಾಗಿಲು ಬಡೆದಿದ್ದಾರೆ. ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ.
ಸೇವಂತ್ ಎಂಬುವರು ಬಂದು ಗಲಾಟೆ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಆತನ ಮೇಲೂ ಹಲ್ಲೆ ನಡೆಸಲಾಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಸೇವಂತ್ ನನ್ನ ಗಾಜಿನ ಮೇಲೆ ಎಳೆದಾಡಿದ್ದಾರೆ.ಈ ಗಲಾಟೆಯಲ್ಲಿ ಮಹಿಳೆಯ 30 ಗ್ರಾಂ ಮಾಂಗಲ್ಯ ಸರ ಕದ್ದುಕೊಂಡು ಹೋಗಿರುವ ಘಟನೆ ನಡೆದಿದ್ದು ದೂರು ದಾಖಲಾಗಿದೆ. ಅದೇ ರೀತಿ ಕಡ್ಡಿ ಮಧು ಅವರು ಹೊಸಮನೆ 3 ನೇ ತಿರುವಿನಲ್ಲಿರುವ ಅಂತರಘಟ್ಟಮ್ಮ ದೇವಸ್ಥಾನದ ಬಳಿ ನಿಲ್ಲಿಸಿರುವ ಮಾರುತಿ ಒಮ್ನಿಯನ್ನ ಇದೇ ಗ್ಯಾಂಗ್ ಹಾನಿಗೊಳಿಸಿರುವುದು ದೂರು ದಾಖಲಾಗಿದೆ. ಕೆಎ 14 ಎಂಡಿ 3636 ಕ್ರಮಸಂಖ್ಯೆ ವಾಹನವನ್ನ ಹಾಳುಮಾಡಿರುವುದಾಗಿ ಕಡ್ಡಿ ಮಧು ದೂರು ದಾಖಲಿಸಿದ್ದಾರೆ.
– ಬೈಕ್ ಅಪಘಾತ ವಿವಾಹಿತೆ ಸಾವು
ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪದ ತಿಪ್ಲೆಪದವು ಎಂಬಲ್ಲಿ ರಸ್ತೆ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು, ಸಹ ಸವಾರೆ ಅವರ ಪತ್ನಿ ಮೃತಪಟ್ಟಿರುವ ಘಟನೆ ಸಂಜೆ ನಡೆದಿದೆ. ಬೋಂದೇಲ್ ನಿವಾಸಿ ಶ್ರೀನಿಧಿ (29) ಮೃತ ದುರ್ದೈವಿ. ಬೈಕ್ ಸವಾರ ಯತೀಶ್ (30) ಎಂಬವರು ಗಂಭೀರ ಗಾಯಗೊಂಡಿದ್ದು, ಅವರ ಪತ್ನಿ ನಿಧಿ (29) ಮೃತಪಟ್ಟಿದ್ದಾರೆ. ಮೃತರು ಹಾಗೂ ಗಾಯಾಳು, ಮುಡಿಪುವಿನಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿ ವಾಪಸ್ಸಾಗುವ ಸಂದರ್ಭ ಬೈಕ್, ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದು ಈ ದುರ್ಘಟನೆ ನಡೆದಿದೆ. ಇನ್ನು ಮೃತ ಶ್ರೀನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಯತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಕಾರಿನಲ್ಲಿ ಅಕ್ರಮ ಗೋ ಸಾಗಾಟ ಕಾರು, ದನ ಬಿಟ್ಟು ಓಡಿ ಹೋಗಿದ್ದಾರೆ
ಪುತ್ತೂರು : ಪುತ್ತೂರಿನಲ್ಲಿ ಅಕ್ರಮ ಗೋ ಸಾಗಾಟದ ಜಾಲವನ್ನು ಬಜರಂಗದಳ ಬಯಲಿಗೆಳೆದಿದ್ದು, ಸಂಘಟನೆಯ ಕಾರ್ಯಕರ್ತರನ್ನು ನೋಡಿ ಆರೋಪಿಗಳು ಕಾರು, ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಬಕ ಅಡ್ಯಲಾಯ ದೈವಸ್ಥಾನದ ಸಮೀಪವೇ ಈ ಕೃತ್ಯ ನಡೆದಿದೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ. ಕಾರಿನಲ್ಲಿ ಎರಡು ದನ ಹಾಗೂ ಎರಡು ಕರು ಪತ್ತೆಯಾಗಿದೆ. ಅದರ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು.
ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಕಾರು ಸಮೇತ ಚಾಲಕ ಪರಾರಿಯಾಗಲು ಯತ್ನಿಸಿದಾಗ ಕಾರು ಚರಂಡಿಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ನಾಲ್ಕು ಗೋವುಗಳನ್ನು ಮತ್ತು ಜಖಂಗೊಂಡ ವಾಹನವನ್ನು ಪುತ್ತೂರು ನಗರ ಠಾಣೆಗೆ ಸಾಗಿಸಿದ್ದಾರೆ. ಗೋವುಗಳಿಗೆ ನೀರು ಮೇವು ನೀಡಿ ಬಜರಂಗದಳದ ಕಾರ್ಯಕರ್ತರು ವ್ಯವಸ್ಥೆ ಮಾಡಿದ್ದಾರೆ.
– ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ಲಕ್ಷಾಂತರ ರುಪಾಯಿ ವಂಚಿಸಿದವ ಅರೆಸ್ಟ್
ಮಂಗಳೂರು: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ವಾಟ್ಸ್ಆ್ಯಪ್ ನಲ್ಲಿ ಲಿಂಕ್ ಕಳುಹಿಸಿ ಹಣ ಪಡೆದು ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜೋಧ್ಪುರ್ ಜಿಲ್ಲೆಯ ಬಾವುರಿಯ ಸದ್ದಾಂ ಗೌರಿ ಬಾವುರಿ (30) ಬಂಧಿತ ಆರೋಪಿ. ಆರೋಪಿಯು ದೂರುದಾರಿಗೆ ವಾಟ್ಸ್ಆ್ಯಪ್ ನಲ್ಲಿ ಸಂದೇಶವನ್ನು ಕಳುಹಿಸಿದ್ದು, ಪಾರ್ಟ್ ಟೈಂ ಜಾಬ್ ನ ಲಿಂಕ್ ಕಳುಹಿಸಿ ಲಿಂಕ್ ಮುಖಾಂತರ ಹಣ ತೊಡಗಿಸಲು ತಿಳಿಸಿದ್ದಾನೆ. ಜೊತೆಗೆ ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಗಳಿಸಬಹುದು ಎಂದು ದೂರುದಾರರನ್ನು ನಂಬಿಸಿದ್ದಾನೆ. ಆರೋಪಿ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿರುವುದಾಗಿ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ರಾಜಸ್ಥಾನದ ಜೋಧ್ ಪುರ್ ಜಿಲ್ಲೆಯ ಬಾವುರಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್, 8 ಡೆಬಿಟ್ ಕಾರ್ಡ್ ಗಳು, 4 ಬ್ಯಾಂಕ್ ಚೆಕ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
– ದರೋಡೆಗೆ ಸ್ಕೆಚ್ ಹಾಕಿದ್ದ ಗ್ಯಾಂಗ್ ಇಬ್ಬರು ಅರೆಸ್ಟ್
ಶಿವಮೊಗ್ಗ: ಬಂಗಾರದ ವಸ್ತುಗಳನ್ನ ದೋಚಿಕೊಂಡು ಹೋಗಲು ಸಂಚು ಹಾಕುತ್ತಿದ್ದ ಗ್ಯಾಂಗ್ ವೊಂದನ್ನ ಹಿಡಿದ ದೊಡ್ಡಪೇಟೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಮಾ. 23 ರಂದು 4-5 ಜನರು ಅಪಾಯಕರವಾದ ಆಯುಧಗಳನ್ನು ಹೊಂದಿ ಶರಾವತಿನಗರ ಚಾನಲ್ ಹತ್ತಿರ ಶರಾವತಿನಗರದಿಂದ ವಿನೋಬನಗರದ ಕಡೆ ಹೋಗುವವರನ್ನು ತಡೆದು ಆಯುಧಗಳನ್ನು ತೋರಿಸಿ ಹೆದರಿಸಿ ಅವರ ಬಳಿ ಇರುವ ನಗದು ಹಣ ಬಂಗಾರದ ಒಡವೆಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದೆ. ಸ್ಥಳಕ್ಕೆ ಹೋಗಿ ನೋಡಿದ ಪೊಲೀಸರಿಗೆ 4-5 ಜನರು ಅಪಾಯಕಾರವಾದ ಆಯುಧಗಳನ್ನು ಹೊಂದಿ ಸುಲಿಗೆ ದರೋಡೆಯಂತಹ ಕೃತ್ಯವನ್ನವೆಸಗಲು ಹೊಂಚು ಹಾಕುತ್ತಿರುವಂತೆ ಕಂಡುಬಂದಿದೆ. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 2 ಜನರನ್ನು ಹಿಡಿಯಲಾಗಿದೆ, ಮೂವರು ಓಡಿ ಹೋಗಿದ್ದಾರೆ.
ಆರೋಪಿತರನ್ನು ಕೂಲಕುಂಶವಾಗಿ ವಿಚಾರ ಮಾಡಿದಾಗ ಹಣದ ಅವಶ್ಯಕತೆ ಇದ್ದುದ್ದರಿಂದ ನಗದು ಹಣ ಮತ್ತು ಬಂಗಾರದ ಒಡವೆಗಳನ್ನು ಹೊಂದಿರುವ ಜನರನ್ನು ತಡೆದು ಅವರ ಮುಖಕ್ಕೆ ಕಾರದ ಪುಡಿ ಎರಚಿ ಆಯುಧಗಳನ್ನು ತೋರಿಸಿ ಹೆದರಿಸಿ ಅವರಿಂದ ನಗದು ಹಣ ಮತ್ತು ಬಂಗಾರ ಒಡವೆಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. 1ನೇ ಆರೋಪಿ ವಿನಯ್ ವಿ ಈತನ ಬಳಿ 1 ½ ಅಡಿ ಉದ್ದದ ಕಬ್ಬಿಣದ ರಾಡು, 2ನೇ ಆರೋಪಿ ಸೃಜನ್ ಈತನ ಬಳಿ 1 ಅಡಿ ಉದ್ದದ ಪ್ಲಾಸ್ಟಿಕ್ ಹಿಡಿ ಇರುವ ಸ್ಟೀಲ್ ಡ್ರಾಗನ್ ಪತ್ತೆಯಾಗಿದೆ. ಓಡಿಹೋದ ಆರೋಪಿತರು ತಂದಿದ್ದ ಸುಮಾರು 2 ½ ಅಡಿ ಉದ್ದದ ಮರದ ಹಿಡಿ ಇರುವ ಕಬ್ಬಿಣದ ಲಾಂಗ್ ಹಾಗೂ ಸುಮಾರು 50 ಗ್ರಾಂ ತೂಕದ ಖಾರದ ಪುಡಿ ಇರುವ ಒಂದು ಪ್ಲಾಸ್ಟಿಕ್ ಕಪ್ಪು ಕವರ್ ನ್ನ ವಶಕ್ಕೆ ಪಡೆಯಲಾಗಿದೆ. ಓಡಿ ಹೋದವರಲ್ಲಿ ಮಧು ಯಾನೆ ಕಡ್ಡಿಮಧು, ಶ್ರೀನಿವಾಸ ಕಡ್ಡಿ ಸೀನಾ, ದೀಕ್ಷಿತ್ ಎಂದು ಗುರುತಿಸಲಾಗಿದ್ದು ಐದು ಜನರ ಮೇಲೆ ಸುಮೋಟೋ ಪ್ರಕರಣ ದಾಖಲಾಗಿದೆ.
– ಬಂಧಿಸಲು ಬಂದ ಪೊಲೀಸರ ಮೇಲೆ ಅಟ್ಯಾಕ್
ಶಿವಮೊಗ್ಗ: 307 ಪ್ರಕರಣದಲ್ಲಿ ಡ್ರ್ಯಾಗರ್ ನಿಂದ ಇರಿದಿದ್ದ ಆರೋಪಿ ಬಂಧನಕ್ಕೆ ತೆರಳಿದ್ದ ಪೊಲಿಸರ ಮೇಲೆ ಅಟ್ಯಾಕ್ ಮಾಡಲಾಗಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಬಾರಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಮಾ.18 ರಂದು ಟಿಪ್ಪುನಗರದಲ್ಲಿ ನಾಸೀರ್, ಮೊಹ್ಮದ್ ತಂಜೀಮ್ ಮತ್ತು ಅಫ್ತಾಬ್ ಎಂಬುವರ ನಡುವೆ ಗಲಾಟೆಯಾಗಿರುತ್ತದೆ. ಈ ವೇಳೆ ಫರ್ವೇಜ್ ಅಲಿಯಸ್ ಫರು ಎಂಬಾತನು ತನ್ನ ನಾಲ್ಕೈದು ಜನ ಸ್ನೇಹಿತರೊಂದಿಗೆ ಬಂದು ಡ್ರ್ಯಾಗರ್ ನಿಂದ ತಂಜೀಮ್ ಗೆ ಮೂರು ಕಡೆ ಇರಿದಿರುತ್ತಾನೆ. ತಂಜೀಮ್ ಮೇಲೆ ಆಯುಧದಿಂದ ಅಟ್ಯಾಕ್ ಮಾಡಿ ಫರು ಪರಾರಿಯಾಗಿರುತ್ತಾನೆ. ತಂಜೀಮ್ ಡ್ಯಾಗರ್ ಅಟ್ಯಾಕ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾನೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ 307 ದಾಖಲಾಗಿರುತ್ತದೆ. ಆರೊಪಿ ಫರುವಿನ ವಿರುದ್ಧ ಇದೇ ಮೊದಲ ಪ್ರಕರಣಗಳು ದಾಖಲಾಗಿಲ್ಲ. 1 ಮರ್ಡರ್ ಗಾಂಜಾ, ಹಾಫ್ ಮರ್ಡರ್, ರಾಬರಿ ಪ್ರಕರಣಗಳು ದಾಖಲಾಗಿವೆ.
ತುಂಗನಗರ ಪೊಲೀಸ್ ಠಾಣೆ ಒಂದರಲ್ಲೇ ಈತನ ವಿರುದ್ಧ 6 ಪ್ರಕರಣಗಳು ದಾಖಲಾಗಿದೆ. ಬಂಧನಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಫರು ಕಾಲಿಗೆ ಗುಂಡು ಹಾರಿಸಿಲಾಗಿದೆ. ಫಾರು ಎಂಬಾತನ ಕಾಲಿಗೆ ಇಂದು ಬೆಳಗ್ಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಫಾರು ಎಂಬಾತ ಮಲ್ಲಿಗೇನಹಳ್ಳಿ ಬಳಿ ಇರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.ಆತನ ಬಂಧನಕ್ಕೆ ತೆರಳಿದ್ದ ವೇಳೆ ತುಂಗಾ ನಗರ ಠಾಣೆ ಸಿಬ್ಬಂದಿ ನಾಗಪ್ಪ ಅವರ ಮೇಲೆ ಆರೋಪಿ ಫಾರು ಚಾಕುವಿನಿಂದ ದಾಳಿ ನಡೆಸಿದ್ದನು. ಆತ್ಮರಕ್ಷಣೆಗಾಗಿ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸತ್ಯನಾರಾಯಣ ಅವರು ಆರೋಪಿ ಫಾರು ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
– ಫೇಸ್ಬುಕ್ ಗೆಳೆಯನಿಂದ ತಾಯಿ-ಮಗನ ಕ್ರೂರ ಹತ್ಯೆ
ವಿಜಯಪುರ ಪೊಲೀಸರು ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ-ಮಗನ ಹತ್ಯೆಯ ಕೇಸ್ನ್ನು ಭೇಧಿಸುವಲ್ಲಿ ಸಫಲರಾಗಿದ್ದಾರೆ. ಕಳೆದ ವರ್ಷದ 2023ರ ಮಾರ್ಚ್ 13ರಂದು ಮೈಸೂರು ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಎಂಬುವವರ ಅತಿ ಕ್ರೂರವಾಗಿ ಹತ್ಯೆಯಾಗಿತ್ತು. ಅವರ ಶವಗಳನ್ನು ಬ್ಯಾಗ್ವೊಂದರಲ್ಲಿ ತುಂಬಿ ಬಾವಿಗೆ ಬಿಸಾಡಲಾಗಿತ್ತು. ಈ ತಾಯಿ-ಮಗನ ಕೊಲೆ ಮಾಡಿದ ವ್ಯಕ್ತಿ ವಿಜಯಪುರದ ಸಾಗರ ನಾಯಕ ಎಂಬಾತ ಎಂದು ತಿಳಿದು ಬಂದಿದೆ.