ಬೆಂಗಳೂರಿನಲ್ಲಿ ಮಳೆಗೆ ದುರಂತ: ಕೊಚ್ಚಿ ಹೋದ ಅಣ್ಣ, ತಂಗಿ!?
– ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ಬರದಂತೆ ಜನರಿಗೆ ಸೂಚನೆ
– ಮತ್ತೆ ಮಳೆ: ಕೈಗೆ ಸಿಗದ ಬೆಳೆ: ರೈತರ ಬದುಕು ಮೂರಾಬಟ್ಟೆ!?
NAMMUR EXPRESS NEWS
ಬೆಂಗಳೂರು : ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಳೆನೀರಿನಲ್ಲಿ ಅಣ್ಣ, ತಂಗಿ ಇಬ್ಬರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಅಣ್ಣ, ತಂಗಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅಣ್ಣ ಶ್ರೀನಿವಾಸ್ (13) ಹಾಗೂ ತಂಗಿ (11) ನಾಪತ್ತೆಯಾಗಿದ್ದು, ಮಳೆನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
– ಚಿಕ್ಕಮಗಳೂರು : ಭಾರೀ ಮಳೆ ಇದರಿಂದ ಪ್ರವಾಸಿ ತಾಣಗಳಿಗೆ ಬರದಂತೆ ಜನರಿಗೆ ಸೂಚನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಗುತ್ತಿರುವ ಭಾರೀ ಮಳೆಯ ಹಿನ್ನೆಲೆ, ಈ ಭಾಗದ ಪ್ರವಾಸಿ ತಾಣಗಳಿಗೆ ಬರುವ ವಿವಿಧ ಭಾಗಗಳ ಪ್ರವಾಸಿಗರಿಗೆ ಒಂದು ವಾರಗಳ ಕಾಲ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಒಮ್ಮೆ ಬಿಸಿಲು. ಮತ್ತೊಮ್ಮೆ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಒಟ್ಟಾರೆ ಹಿಂಗಾರು ಮಳೆಯ ಅಬ್ಬರಕ್ಕೆ ಕಾಫಿನಾಡಿನ ಜನ ಕಂಗಾಲಾಗಿದ್ದಾರೆ. ಇದರ ನಡುವೆ ಮಳೆ ಅಬ್ಬರಕ್ಕೆ ಮತ್ತೆ ಬೆಟ್ಟ-ಗುಡ್ಡ-ಧರೆ ಕುಸಿಯುವ ಭೀತಿಯಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಒಂದು ವಾರ ಪ್ರವಾಸ ಮುಂದೂಡುವಂತೆ ಸೂಚಿಸಿದೆ. ಈಗಾಗಲೇ ಜಿಲ್ಲಾದ್ಯಂತ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮಾಡಿಸಿದ ಸರ್ವೆಯಲ್ಲಿ ಜಿಲ್ಲೆಯ 88 ಸ್ಥಳಗಳನ್ನ ಡೇಂಜರ್ ಸ್ಪಾಟ್ ಎಂದು ಗುರುತಿಸಲಾಗಿದೆ. ಅದರಲ್ಲಿ ಕರ್ನಾಟಕದ ಎವರ್ಗ್ರೀನ್ ಟೂರಿಸ್ಟ್ ಸ್ಪಾಟ್ ಮುಳ್ಳಯ್ಯನಗಿರಿ ಪ್ರದೇಶ ಹಾಗೂ ಕೆಲ ಟ್ರಕ್ಕಿಂಗ್ ಸ್ಪಾಟ್ಗಳೂ ಇವೆ. ಇನ್ನೂ ಜಿಲ್ಲಾಡಳಿತ ಮುಂದಿನ ವರ್ಷದ ಮಳೆಗೆ ಕ್ರಮ ಕೈಗೊಳ್ಳೋಣ. ಆದರೆ ಮಳೆ ಕಡಿಮೆಯಾಗದ ಕಾರಣ ಪ್ರವಾಸ ಮುಂದೂಡಿ, ಸ್ಥಳೀಯರು ನದಿ-ಕೆರೆ-ಕಟ್ಟೆ ಬಳಿ ಹೋಗದಂತೆ ಸೂಚನೆ ನೀಡಿದೆ.
ಮಳೆಯಿಂದ ಏಕಾಏಕಿ ಹಳ್ಳಗಳು ಬರ್ತಿಯಾಗುತ್ತಿವೆ. ರಸ್ತೆಗಳು ಜಲಾವೃತವಾಗುತ್ತಿವೆ. ಅವಾಂತರಗಳಾಗುವ ಆತಂಕದಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಈ ಸೂಚನೆ ನೀಡಿದೆ.
ಮಳೆ ಹೆಚ್ಚಳ: ಕೈಗೆ ಸಿಗದ ಬೆಳೆ!
ರಾಜ್ಯದ ಹಲವು ಭಾಗದಲ್ಲಿ ಮಳೆ ಹೆಚ್ಚಳ ಇದೀಗ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ರಾಜ್ಯದ ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಝೆಡ್ ಬೆಂಗಳೂರು ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಳವಾಗಿದ್ದು, ಬೆಳೆ ಹಾನಿಯಾಗಿದೆ. ಇದರಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ.