ಮಲ್ಪೆಯಲ್ಲಿ ಸಿಕ್ತು ಎರಡೂವರೆ ಕ್ವಿಂಟಲ್ ಮೀನು!
– 250 ಕೆಜಿ ಭರ್ಜರಿ ತೊರಕೆ ಮೀನು ಬಲೆಗೆ
– ಕೆ .ಜಿ.ಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುತ್ತೆ!
NAMMUR EXPRESS NEWS
ಮಲ್ಪೆ: ಮಲ್ಪೆ ಮೀನುಗಾರರು 250 ಕೆಜಿಯ ಭರ್ಜರಿ ತೊರಕೆ ಮೀನೊಂದನ್ನು ಭೇಟೆಯಾಡಿದ್ದಾರೆ. ಸುಮಾರು ಎರಡೂವರೆ ಕ್ವಿಂಟಲ್ ಮೀನು ಇದೀಗ ಮೀನುಗಾರರಿಗೆ ದೀಪಾವಳಿ ಖುಷಿ ನೀಡಿದೆ. ಸ್ಟಿಂಗ್ ರೇ ಎಂದು ಕರೆಯಲ್ಪಡುವ ಬೃಹತ್ ತೂಕದ ತೊರಕೆ ಮೀನು ಬಲೆಗೆ ಬಿದ್ದು ಮೀನುಗಾರರ ಅದೃಷ್ಟ ಖುಲಾಯಿಸಿದೆ. ಸುಮಾರು 250 ಕೆ.ಜಿ ತೂಗುವ ತೊರಕೆ ಮೀನು ಬಲೆಗೆ ಬಿದ್ದಿದ್ದು, ಇದು ಅಪರೂಪಕ್ಕೆ ಒಮ್ಮೆ ಸಿಗುವ ಭಾರಿ ಗಾತ್ರದ ತೊರಕೆ ಮೀನಾಗಿದೆ. ಕೆ.ಜಿ.ಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುವ ಈ ಮೀನು, ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದಿದೆ. ಅಪರೂಪಕ್ಕೆ ಸಿಗುವ ಭಾರಿ ಗಾತ್ರದ ಮತ್ತ್ವ ಎಂದು ಮೀನುಗಾರರು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ.