ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ತುರ್ತು ಪ್ರಕಟಣೆ
– ರಾಜ್ಯ ನಿರ್ದೇಶಕರಾದ ಸಾಧಿಕ್ ಬೆಳ್ಳಾರೆ ಸದಸ್ಯತ್ವದಿಂದ ಉಚ್ಚಾಟನೆ
– ಸಂಘಟನೆಯ ಎಲ್ಲಾ ಹುದ್ದೆಗಳಿಂದ ತೆರವು: ಸದಸ್ಯರಿಗೆ ಮಾಹಿತಿ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ರಾಜ್ಯ ನಿರ್ದೇಶಕರಾದ ಸಾಧಿಕ್ ಬೆಳ್ಳಾರೆ ಅವರನ್ನು ಸಂಘಟನೆಯ ಎಲ್ಲಾ ಹುದ್ದೆಗಳಿಂದ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘವು ತನ್ನ ನೈತಿಕ ಮತ್ತು ಸಂಘಟನಾ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಸಂಘದ ರಾಜ್ಯ ನಿರ್ದೇಶಕರಾದ ಸಾಧಿಕ್ ಬೆಳ್ಳಾರೆ ಅವರ ವಿರುದ್ಧ ಶಿಸ್ತಿನ ಕ್ರಮಕ್ಕೆ ಎಡವಿರುವ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಅವರನ್ನು ಸಂಘಟನೆಯ ಎಲ್ಲಾ ಹುದ್ದೆಗಳಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಲಾಗಿದೆ.
ಈ ಕ್ರಮವು ಸಂಘಟನೆಯ ನಿಯಮಾವಳಿಗಳಿಗೆ ಹಾಗೂ ನಿಯಮಿತಗಳಿಗೆ ವಿರುದ್ಧವಾಗಿರುವ ಯಾವುದೇ ನಡೆಗಳನ್ನು ತಡೆಯಲು, ನೈತಿಕತೆಯನ್ನು ಕಾಪಾಡಲು ಮತ್ತು ಸಂಘಟನೆಯ ಶ್ರೇಯೋಭಿವೃದ್ಧಿಯನ್ನು ಕಾಪಾಡಲು ತೆಗೆದುಕೊಳ್ಳಲಾಗಿದ್ದು ಇದು ಎಲ್ಲಾ ಸದಸ್ಯರಿಗೆ ನೈತಿಕತೆ ಹಾಗೂ ಸಮರ್ಪಣೆಯಿಂದ ವರ್ತನೆ ಮಾಡುವ ಬುದ್ಧಿವಂತಿಕೆಯನ್ನು ತಲುಪಿಸುವ ಸಂದೇಶವಾಗಿದೆ. ಇದೇ ಸಂದರ್ಭದಲ್ಲಿ ಸಂಘಟನೆ ಎಲ್ಲ ಸದಸ್ಯರು ಹಾಗೂ ಸಹಯೋಗಿಗಳಿಗೆ ವಿನಂತಿಎಂದರೆ ಸಾಧಿಕ್ ಬೆಳ್ಳಾರೆ ಅವರೊಂದಿಗೆ ಅಥವಾ ಅವರ ಮೂಲಕ ಸಂಘಟನೆಯ ಕುರಿತು ಯಾವುದೇ ರೀತಿಯ ವ್ಯವಹಾರವನ್ನು ಮಾಡದಿರಲು ಕೋರಲಾಗಿದೆ. ಈ ಹಿನ್ನಲೆಯಲ್ಲಿ ಅವರು ನಡೆಸಿದ ಅಥವಾ ನಡೆಸುವ ಯಾವುದೇ ವೈಯಕ್ತಿಕ ವ್ಯವಹಾರಗಳಿಗೆ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಜವಾಬ್ದಾರಿಯಲ್ಲ ಎಂದು ಸಂಘದ ರಾಜ್ಯಾಧ್ಯಕ್ಷರಾದ ಸತೀಶ್ ಜೋಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.