ವ್ಯಾಲೆಂಟೈನ್ಸ್ ಡೇ ಸ್ಪೆಷಲ್..!
– ಒಂದು ಸರಳ ಪ್ರೇಮಕಥೆ ಚಿತ್ರದಿಂದ ಭರ್ಜರಿ ಆಫರ್ : 1 ಟಿಕೆಟ್ ಖರೀದಿಸಿದರೆ ಮತ್ತೊಂದು ಫ್ರೀ
– ಸ್ಪೆಷಲ್ ಗಿಫ್ಟ್ ಕೊಟ್ಟ ನಟ ಉಪೇಂದ್ರ: ಯುಐ ಸಿನಿಮಾ ಪ್ರೊಮೊ ರಿಲೀಸ್
450 ಕೋಟಿ ವ್ಯವಹಾರಕ್ಕೆ ಧಕ್ಕೆ..!
– ಪ್ರೇಮಿಗಳ ದಿನ ಮದ್ಯ ನಿಷೇಧದ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ!
NAMMUR EXPRESS NEWS
ಒಂದು ಸರಳ ಪ್ರೇಮಕಥೆ ಪ್ರೇಮಿಗಳ ದಿನ ಸಂದರ್ಭದಲ್ಲೇ ರಿಲೀಸ್ ಆಗಿದೆ. ಹೀಗಾಗಿ ವ್ಯಾಲೆಂಟೈನ್ಸ್ ಡೇ ದಿನ ಒಂದು ಆಫರ್ ನೀಡಲಾಗಿದೆ. ಹುಡುಗ ಟಿಕೆಟ್ ಪಡೆದರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ. ಒಂದು ಸರಳ ಪ್ರೇಮಕಥೆ’ ಚಿತ್ರ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿಯೇ ರಿಲೀಸ್ ಆಗಿದೆ. ಸುನಿ ನಿರ್ದೇಶನದ ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದಲ್ಲಿ ಲವ್ಸ್ಟೋರಿ ಇದೆ.
ಈ ಕಾರಣಕ್ಕೆ ಪ್ರೇಮಿಗಳ ದಿನದಂದು ಒಂದು ಆಫರ್ ನೀಡಲಾಗುತ್ತಿದೆ. ‘ಒಂದು ಸರಳ ಪ್ರೇಮಕಥೆ ನೋಡಲು ಹುಡುಗ ಹಾಗೂ ಹುಡುಗಿ ಬಂದರೆ ತಂಡದ ಕಡೆಯಿಂದ ಒಂದು ಆಫರ್ ಇದೆ. ಹುಡುಗ ಟಿಕೆಟ್ ಪಡೆದರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ. ಈ ವಿಚಾರವನ್ನು ನಿರ್ದೇಶಕ ಸಿಂಪಲ್ ಸುನಿ ಅವರು ರಿವೀಲ್ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಜನರು ಹೆಚ್ಚೆಚ್ಚು ನೋಡಿದರೆ ಬಾಯಿಮಾತಿನ ಪ್ರಚಾರ ಸಿಗುತ್ತದೆ. ಅದಕ್ಕಾಗಿ ಈ ಯೋಜನೆ ರೂಪಿಸಲಾಗಿದೆ.
ಸ್ಪೆಷಲ್ ಗಿಫ್ಟ್ ಕೊಟ್ಟನಟ ಉಪೇಂದ್ರ: ಪ್ರೇಮಿಗಳ ದಿನಕ್ಕೆ ಗಿಫ್ಟ್ ನೀಡಲು ಮುಂದಾಗಿದ್ದು, ನಾಳೆ ‘ಯುಐ’ ಸಿನಿಮಾದ ಫಸ್ಟ್ ಸಿಂಗಲ್ ಪ್ರೊಮೋ ರಿಲೀಸ್ ಆಗಲಿದೆ. ಪ್ರೇಮಿಗಳ ದಿನ ಬೆಳಗ್ಗೆ 10 ಗಂಟೆಗೆ ಚಿತ್ರದ ಫಸ್ಟ್ ಸಿಂಗಲ್ ಪ್ರೊಮೋ ರಿಲೀಸ್ ಆಗಲಿದೆ. ಈ ಹಿಂದೆ ಯುಐ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಚಿತ್ರತಂಡ ಇದೀಗ ಯುಐ’ ಸಿನಿಮಾದ ಫಸ್ಟ್ ಸಿಂಗಲ್ ಪ್ರೊಮೋ ರಿಲೀಸ್ ಮಾಡಲಿದೆ.
ಪ್ರೇಮಿಗಳ ದಿನ ಮದ್ಯ ನಿಷೇಧದ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ:
ಫೆಬ್ರವರಿ 14 ಪ್ರೇಮಿಗಳಿಗೆ ವಿಶೇಷವಾದ ದಿನ. ತಮ್ಮ ವಿಶೇಷ ದಿನವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ಹೋಟೆಲ್ ಮತ್ತು ಬಾರ್ ಮಾಲಿಕರಿಗೆ ಮಾತ್ರ ಈ ದಿನ ತಲೆ ಬಿಸಿ ತಂದಿದೆ. ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ. ಫೆಬ್ರವರಿ 14 ರಿಂದ 16 ರವರೆಗೆ ಮದ್ಯ ಮಾರಾಟ ನಿಷೇಧದ ಆದೇಶವನ್ನು ಮರುಪರಿಶೀಲಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪತ್ರ ಬರೆದಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾರಣದಿಂದ ಫೆಬ್ರವರಿ 14 ರಿಂದ 16 ರವರೆಗೆ ಮದ್ಯ ಮಾರಾಟ ನಿಷೇಧ ಆದೇಶವನ್ನು ಮಾಡಲಾಗಿದೆ.
ಇದರಿಂದ 450 ಕೋಟಿ ವ್ಯವಹಾರಕ್ಕೆ ಧಕ್ಕೆಯಾಗಲಿದ್ದು, ಇದರಿಂದ ಗಮನಾರ್ಹ ನಷ್ಟ ಉಂಟಾಗಲಿದೆ ಎಂದು ಹೋಟೆಲ್ ಮಾಲೀಕರು ಗಮನ ಸೆಳೆದರು. ಸರ್ಕಾರವು 240 ಕೋಟಿ ರೂಪಾಯಿಗಳ ಆದಾಯವನ್ನು ಕಳೆದುಕೊಳ್ಳುತ್ತದೆ. ಫೆಬ್ರವರಿ 14 ಪ್ರೇಮಿಗಳ ದಿನ ಎಂದು ಪರಿಗಣಿಸಿದರೆ ನಷ್ಟವು ಹೆಚ್ಚಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಕಾಳಜಿಗಳನ್ನು ಪರಿಗಣಿಸಿ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ 16,000 ಮತದಾರರು ಇಲ್ಲದಿರುವುದರಿಂದ, ನಿಷೇಧ ಆದೇಶವನ್ನು ಪರಿಷ್ಕರಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.