ಕುಮಾರಸ್ವಾಮಿಗೆ ಗೆಲುವು: ಆಗ್ತಾರಾ ಸೆಂಟ್ರಲ್ ಮಿನಿಸ್ಟರ್..?!
– ಸ್ಟಾರ್ ಚಂದ್ರು ವಿರುದ್ಧ ಗೆದ್ದು ಬೀಗಿದ ಮಾಜಿ ಸಿಎಂ
– 2.71 ಲಕ್ಷ ಮತಗಳಿಗೂ ಹೆಚ್ಚು ಅಂತರ ಕುಮಾರಸ್ವಾಮಿಗೆ ಜಯ
– ಜೆಡಿಎಸ್ ಪಕ್ಷಕ್ಕೆ ಎರಡು ಸ್ಥಾನ: ಕೋಲಾರದಲ್ಲಿ ಮಲ್ಲೇಶ್ ಬಾಬು ಗೆಲುವು
NAMMUR EXPRESS NEWS
ಮಂಡ್ಯ/ಕೋಲಾರ: ರಾಜ್ಯದಲ್ಲಿ ಜಿದ್ದಾಜಿದ್ದಿನ ಕಣವಾಗಿ ಗುರುತಿಸಿಕೊಂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರ್ಜರಿ ಜಯ ಗಳಿಸಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಎಚ್ಡಿಕೆ ಕೈ ಮೇಲಾಗಿದೆ. ಎನ್ಡಿಎ ಅಭ್ಯರ್ಥಿ, ಜೆಡಿಎಸ್ನ ಎಚ್ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ನ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ನಡುವೆ ಇಲ್ಲಿ ಫೈಟ್ ಇತ್ತು. ಇದೀಗ ಕುಮಾರಸ್ವಾಮಿ 7,89,428 ಮತಗಳನ್ನು ಪಡೆದು, 2,71,307 ಅಂತರದಿಂದ ಸ್ಟಾರ್ ಚಂದ್ರು ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 5,18,121 ಮತಗಳನ್ನಷ್ಟೇ ಪಡೆದಿದ್ದಾರೆ. ಸುಮಲತಾ ಜೊತೆಗಿದ್ದ ನಟ ದರ್ಶನ್ ಸಹ ಚಂದ್ರು ಪರವಾಗಿ ಪ್ರಚಾರ ಮಾಡಿದ್ದರು.
ಆಗ್ತಾರಾ ಮಿನಿಸ್ಟರ್?
ಕೇಂದ್ರದಲ್ಲಿ ಮಿತ್ರ ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್ ರಾಜ್ಯದಲ್ಲಿ 2 ಸ್ಥಾನ ಪಡೆದಿದೆ. ಮೈತ್ರಿ ಕಾರಣದಿಂದ ಮೋದಿ ಪ್ರಧಾನಿಯಾಗಲು ಕುಮಾರಸ್ವಾಮಿ ಸಾಥ್ ನೀಡಿದ್ದರು. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆ ಇದೆ.
ಕೋಲಾರ ಗೆದ್ದ ಜೆಡಿಎಸ್
ಕೋಲಾರದಲ್ಲಿ ಮಲ್ಲೇಶ್ ಬಾಬು ಕಾಂಗ್ರೆಸ್ ಪಕ್ಷದ ಗೌತಮ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕೋಲಾರದಲ್ಲಿ ಜೆಡಿಎಸ್ ಖಾತೆ ತೆರೆದಿದೆ. ಈ ಹಿಂದೆ ಮುನಿಸ್ವಾಮಿ ಇಲ್ಲಿ ಸಂಸದರಾಗಿದ್ದರು. 71,388 ಮತಗಳ ಅಂತರದಿಂದ ಇಲ್ಲಿ ಮಲ್ಲೇಶ್ ಬಾಬು ಗೆದ್ದಿದ್ದಾರೆ.
ಹಾಸನದಲ್ಲಿ ಸ್ಥಾನ ಕಳೆದುಕೊಂಡ ಜೆಡಿಎಸ್!
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋಲುವ ಮೂಲಕ ಹಾಸನದಲ್ಲಿ ಜೆಡಿಎಸ್ ತನ್ನ ನೆಲೆ ಕಳೆದುಕೊಂಡಿದೆ. ತವರು ಹೊಳೆ ನರಸೀಪುರದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ವಿರುದ್ಧ ಸೋಲು ಕಂಡಿದ್ದಾರೆ.
2019ರಲ್ಲಿ ಜೆಡಿಎಸ್ 1 ಸ್ಥಾನ ಇತ್ತು
2019ರಲ್ಲಿ ಜೆಡಿಎಸ್ ಒಂದು ಸ್ಥಾನ ಇತ್ತು. ಈಗ ಎರಡು ಸ್ಥಾನ ಪಡೆದುಕೊಂಡಿದೆ.