ನಾಡಿನೆಲ್ಲೆಡೆ ವಿಜಯ ದಶಮಿ ಹಬ್ಬ..!
* ವಿಜಯ ದಶಮಿ ಆಚರಣೆ ಹೇಗೆ?
* ಪ್ರತೀ ತಾಲೂಕು, ಹಳ್ಳಿ ಹಳ್ಳಿಗಳಲ್ಲೂ ಹಬ್ಬ
NAMMUR EXPRESS NEWS
ಅಶ್ವಿನಿ ಮಾಸದಲ್ಲಿ ಆಚರಿಸಲಾಗುವ ಅತ್ಯಂತ ಮಹತ್ತರವಾದ ಹಬ್ಬಗಳಲ್ಲಿ ದಸರಾ ಮತ್ತು ವಿಜಯದಶಮಿಯು ವಿಜೃಂಭಣೆಯಿಂದ ಆಚರಿಸಲಾಗುವುದು. ದಸರಾ ಮತ್ತು ವಿಜಯದಶಮಿಯು ನವರಾತ್ರಿ ಹಬ್ಬದ ಮುಕ್ತಾಯವನ್ನು ಸೂಚಿಸುವ ದಿನವಾಗಿದೆ. ಶ್ರೀರಾಮನಿಂದ ರಾವಣ ಸಂಹಾರಕ್ಕೂ ಮುನ್ನವೇ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ವಿಜಯದಶಮಿಯ ದಿನ ಮಾತ್ರ ರಾವಣ ದಹನ ನಡೆಯುತ್ತದೆ. ಶಾರದೀಯ ನವರಾತ್ರಿ ಮುಗಿದ ನಂತರ, ದುರ್ಗಾ ಮೂರ್ತಿಯ ನಿಮಜ್ಜನವೂ ಈ ದಿನದಂದು ನಡೆಯುತ್ತದೆ ಮತ್ತು ವಿಜಯೋತ್ಸವವನ್ನು ಆಚರಿಸಲಾಗುವುದು.
ಮೈಸೂರು ದಸರಾ ಮೆರವಣಿಗೆ, ಜಂಬೂ ಸವಾರಿ ದೇಶದ ಪ್ರಮುಖ ದಸರಾದಲ್ಲಿ ಒಂದಾಗಿದೆ. ಇನ್ನು ಪ್ರತೀ ಜಿಲ್ಲೆ, ಪ್ರತೀ ತಾಲೂಕಲ್ಲಿ ದಸರಾ ಮೆರವಣಿಗೆ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.ಸಂಜೆ ಬನ್ನಿ ಮುಡಿಯುವ ಮೂಲಕ ಪರಸ್ಪರ ಸ್ನೇಹ ವಿಶ್ವಾಸ ಹೆಚ್ಚಾಗಲು ಬಯಸಲಾಗುತ್ತದೆ. ಎಲ್ಲೆಡೆ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ.
ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು!