ಯೂಟ್ಯೂಬ್ ನೋಡಿ ಆಪರೇಷನ್: ಬಾಲಕ ಬಲಿ!
* ನಕಲಿ ವೈದ್ಯನಿಂದ ಆಪರೇಷನ್: ಏನಿದು ಘಟನೆ
* ಶವವನ್ನು ಬಿಟ್ಟು ಸ್ಥಳದಿಂದ ನಕಲಿ ವೈದ್ಯ ಪರಾರಿ!
NAMMUR EXPRESS NEWS
ಬಿಹಾರ: ಯೂಟ್ಯೂಬ್ ನೋಡಿ ಆಪರೇಷನ್ ಮಾಡಲು ಹೋಗಿ ನಕಲಿ ವೈದ್ಯನೊಬ್ಬ ಬಾಲಕನ ಜೀವವನ್ನೇ ತೆಗೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನಿಗೆ ಪಿತ್ತಕೋಶದಲ್ಲಿ ಕಲ್ಲಾಗಿ ತುಂಬಾ ದಿನಗಳಿಂದ ನೋವು ಅನುಭವಿಸುತ್ತಿದ್ದ. ತಾನು ಶಸ್ತ್ರಚಿಕಿತ್ಸೆ ನಡೆಸುವುದಾಗಿ ನಕಲಿ ವೈದ್ಯನೊಬ್ಬ ಭರವಸೆ ಕೊಟ್ಟು, ಯೂಟ್ಯೂಬ್ ನೋಡಿ ಆಪರೇಷನ್ ಮಾಡಲು ಹೋಗಿ ಬಾಲಕನ ಪ್ರಾಣವನ್ನೇ ತೆಗೆದಿದ್ದಾನೆ.
ನಕಲಿ ವೈದ್ಯನೊಬ್ಬ ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ್ದಕ್ಕೆ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನಿಗೆ ಪಿತ್ತಕೋಶದಲ್ಲಿ ಕಲ್ಲಾಗಿ ತುಂಬಾ ದಿನಗಳಿಂದ ನೋವು ಅನುಭವಿಸುತ್ತಿದ್ದ. ತಾನು ಶಸ್ತ್ರಚಿಕಿತ್ಸೆ ನಡೆಸುವುದಾಗಿ ನಕಲಿ ವೈದ್ಯನೊಬ್ಬ ಭರವಸೆ ಕೊಟ್ಟು, ಯೂಟ್ಯೂಬ್ ನೋಡಿ ಆಪರೇಷನ್ ಮಾಡಲು ಹೋಗಿ ಬಾಲಕನ ಜೀವವನ್ನೇ ತೆಗೆದಿದ್ದಾನೆ.
ಅಜಿತ್ ಕುಮಾರ್ ಪುರಿ ನಡೆಸುತ್ತಿದ್ದ ಕ್ಲಿನಿಕ್ಗೆ ಅವರ ಕುಟುಂಬದವರು ಸೇರಿಸಿದ್ದಾರೆ, ಬಾಲಕನಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ಹೇಳುವ ಪ್ರಕಾರ, ತಮ್ಮ ಅರಿವಿಗೆ ಬಾರದೆ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ತಮ್ಮ ಮೊಬೈಲ್ ಫೋನ್ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ನೋಡವ ೂಲಕ ಅವರು ಸ್ತ್ರಚಿಕಿತ್ಸೆ ನಡೆಸು್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಚಿಕಿತ್ಸೆ ವೇಳೆ ಬಾಲಕನ ಸ್ಥಿತಿ ಹದಗೆಟ್ಟಿತ್ತು. ಪೋಷಕರು ಗಲಾಟೆ ಮಾಡಿದಾಗ ತಾನು ವೈದ್ಯನೇ ಅಲ್ಲ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ನಕಲಿ ವೈದ್ಯ ಅಂತಿಮವಾಗಿ ಬಾಲಕನನ್ನು ಪಾಟ್ನಾದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದ, ಆದರೆ ಅವರು ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾರೆ. ನಂತರ ನಕಲಿ ವೈದ್ಯ ಬಾಲಕನ ಶವವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ನಕಲಿ ವೈದ್ಯನ ನಿರ್ಲಕ್ಷ್ಯ ಮತ್ತು ದುಷ್ಕೃತ್ಯ ಕುರಿತು ಕುಟುಂಬ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ನಕಲಿ ವೈದ್ಯ ಹಾಗೂ ಆತನ ಕ್ಲಿನಿಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.