ದೀಪಾವಳಿ ಪ್ರಾರಂಭ ಯಾವಾಗ?
– ಹಬ್ಬದ ಮಹತ್ವ, ಹಿನ್ನೆಲೆ ಏನು ಗೊತ್ತಾ?
– ದೀಪಾವಳಿ ದಿನಾಂಕ ಮತ್ತು ಸಮಯ ಯಾವಾಗ?
NAMMUR EXPRESS NEWS
ದೀಪಗಳ ಹಬ್ಬ ದೀಪಾವಳಿ ಬಂದೇ ಬಿಡ್ತು. ದೀಪಾವಳಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ದೀಪಾವಳಿಯನ್ನು ಯಾವಾಗ ಆಚರಿಸಲಾಗುತ್ತದೆ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ದೀಪಾವಳಿಯ ನಿಖರವಾದ ದಿನಾಂಕ ಯಾವುದು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನೂ ಕೆಲವರು ನವೆಂಬರ್ 1ರಂದು ದೀಪಾವಳಿ ಆಚರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಈ ದಿನ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಂಚಾಂಗದ ಪ್ರಕಾರ, ದೀಪಾವಳಿಯ ಸರಿಯಾದ ದಿನಾಂಕ ಮತ್ತು ಮಂಗಳಕರ ಸಮಯ ಯಾವುದು ಎಂದು ತಿಳಿಯೋಣ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೀಪಾವಳಿಯಂದು ಅಮವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನದಂದು ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದನು ಎಂದು ನಂಬಲಾಗಿದೆ. ಅಮಾವಾಸ್ಯೆಯಾಗಿದ್ದರಿಂದ ಭಕ್ತರು ಲಕ್ಷಗಟ್ಟಲೆ ದೀಪಗಳನ್ನು ಹಚ್ಚಿ ಶ್ರೀರಾಮನನ್ನು ಸ್ವಾಗತಿಸಿದರು ಹಾಗೂ ಅಯೋಧ್ಯೆಗೆ ಹಿಂದಿರುಗಿದ ರಾಮನನ್ನು ನೋಡಿ ಭಕ್ತರು ಸಂಭ್ರಮಗೊಂಡರು ಎಂದು ಹೇಳಲಾಗುತ್ತದೆ.
ದೀಪಾವಳಿ ದಿನಾಂಕ ಮತ್ತು ಸಮಯ:
• ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31, 2024 ರಂದು ಆಚರಿಸಲಾಗುವುದು.
• ಅಮಾವಾಸ್ಯೆ ತಿಥಿ ಅಕ್ಟೋಬರ್ 31, 2024 ರಂದು ಮಧ್ಯಾಹ್ನ 03:52 ಕ್ಕೆ ಪ್ರಾರಂಭವಾಗುತ್ತದೆ.
• ಅಮವಾಸ್ಯೆಯ ತಿಥಿಯು ನವೆಂಬರ್ 01,2024 6:16 ಕೊನೆಗೊಳ್ಳುತ್ತದೆ.
• ಪ್ರದೋಷ ಕಾಲ ಮಧ್ಯಾಹ್ನ 05:12 ರಿಂದ 07:43
• ಲಕ್ಷ್ಮಿಪೂಜೆ ಮುಹೂರ್ತ ಸಂಜೆ 05:12 ರಿಂದ ಸಂಜೆ 06:16
• ವೃಷಭ ಮುಹೂರ್ತದಿಂದ ಸಂಜೆ 06:00 ರಿಂದ ಸಂಜೆ 07:59
ದೀಪಾವಳಿಯ ದಿನಾಂಕ!
ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ದೀಪಾವಳಿಯನ್ನು ಯಾವಾಗಲೂ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿಯ ಅಮವಾಸ್ಯೆಯ ತಿಥಿ ಅಕ್ಟೋಬರ್ 31ರಂದು ಮಧ್ಯಾಹ್ನ 3.52ಕ್ಕೆ ಆರಂಭವಾಗಲಿದೆ. ಈ ದಿನಾಂಕವು ಮರುದಿನ ಅಂದರೆ ನವೆಂಬರ್ 1 ರಂದು ಸಂಜೆ 6:16 ರವರೆಗೆ ಇರುತ್ತದೆ. ಆದ್ದರಿಂದ, ದೀಪಾವಳಿಯನ್ನು ಅಕ್ಟೋಬರ್ 31ರ ಸಂಜೆ ಆಚರಿಸಲಾಗುತ್ತದೆ. ಪ್ರದೋಷ ಕಾಲದ ನಂತರ ದೀಪಾವಳಿ ಪೂಜೆಯನ್ನು ಮಾಡಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಟೋಬರ್ 31ರ ರಾತ್ರಿ ಲಕ್ಷ್ಮೀ ಪೂಜೆ, ಕಾಳಿ ಪೂಜೆ ಹಾಗೂ ನಿಶಿತ ಕಾಲದ ಪೂಜೆ ನಡೆಯಲಿದೆ. ಮಧ್ಯರಾತ್ರಿಯ ಪೂಜೆ ಕೂಡ ಅಕ್ಟೋಬರ್ 31 ರಂದು ಮಾತ್ರ ನಡೆಯುತ್ತದೆ.
ನವೆಂಬರ್ 1 ರಂದು ಅಮವಾಸ್ಯೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡಲಾಗುತ್ತದೆ. ನವೆಂಬರ್ 1ರಂದು ಬೆಳಗ್ಗೆ ದಾನ ಮತ್ತು ಪೂರ್ವಜರ ಕೆಲಸವನ್ನು ಮಾಡುವುದು ಸೂಕ್ತವಾಗಿರುತ್ತದೆ.