ಬಾ ಮಳೆಯೇ ಬಾ…!
– ರಾಜ್ಯದಲ್ಲಿ ಮಳೆ ಆಗಮನ ಆಗುತ್ತಾ?
– ಮೋಡ ಕವಿದ ವಾತಾವರಣ
– ಬಿಸಿಲ ಬೇಗೆ ತಣಿಸುವ ಹಣ್ಣುಗಳ ದರ ಏರಿಕೆ
NAMMUR EXPRESS NEWS
ಬೆಂಗಳೂರು: ರಾಜ್ಯದ ಬಹುತೇಕ ಕಡೆ ಬಿಸಿಲಿನ ಝಳ ಹೆಚ್ಚಾಗಿದ್ದು ಈ ಮಧ್ಯೆ ಮಾರ್ಚ್ 31ರಿಂದ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ, ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಬಿಸಿಲ ಬೇಗೆ ತಣಿಸುವ ಹಣ್ಣುಗಳ ದರ ಏರಿಕೆ
ಬೇಸಿಗೆ ಬಿಸಿ ತಾಪಕ್ಕೆ ನಗರವಾಸಿಗಳು ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಮಾವಿನ ಹಣ್ಣು, ನಿಂಬೆ ಹಣ್ಣು ಸೇರಿದಂತೆ ಹಣ್ಣುಗಳ ಬೆಲೆ ಏರಿಕೆಯಾಗುವ ಮೂಲಕ ಗ್ರಾಹಕರ ಕಂಗಾಲಾಗಿದ್ದಾರೆ. ಗರಿಷ್ಠ ತಾಪಮಾನ ಹಿನ್ನೆಲೆ ಮಾವಿನ ಇಳುವರಿಯಲ್ಲಿ ಶೇ.60ರಷ್ಟು ಕುಸಿತ ಕಂಡಿದೆ ಹಾಗಾಗಿ ಬೇಡಿಕೆಗೆ ತಕ್ಕಂತೆ ಮಾವಿನ ಹಣ್ಣುಗಳು ಮಾರುಕಟ್ಟೆಗಳಿಗೆ ಬರುತ್ತಿಲ್ಲ. ಆದರಿಂದ ಬೆಲೆ ಏರಿಕೆ ಕಂಡಿದೆ. ಮಾವಿನ ಹಣ್ಣಿನ ಸಮಯ ವಾಗಿರುವುದರಿಂದ ವಿವಿಧ ತಳಿಯ ರಸಪೂರಿ ಮಾವಿನ ಹಣ್ಣುಗಳು ಮಾರುಕಟ್ಟೆಗಳಿಗೆ ಬಂದಿದೆ. ಹಾಗೇ ಮಾವಿನ ಹಣ್ಣನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಹಣ್ಣುಗಳು ಲಭ್ಯವಾಗದಿರುವುದರಿಂದ ಬೆಲೆ ಏರಿಕೆಯಾಗಿದೆ. ಅವರಲ್ಲೂ ಮಾವಿನ ಹಣ್ಣುಗಳ ಬೆಲೆಯಲ್ಲಿ ಈ ಬಾರಿ ಶೇ.30-40ರಷ್ಟು ಏರಿಕೆಯಾಗಿದೆ.
– ಮಣ್ಣಿನ ಪಾತ್ರೆಗಳಿಗೆ ಡಿಮ್ಯಾಂಡ್
ಬಿಸಿಲಿನ ಬೆಗೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ನಗರವಾಸಿಗಳು ಮಣ್ಣಿನ ಪಾತ್ರೆಯನ್ನು ಖರೀದಿಸುವವರ ಸಂಖ್ಯೆ ಅಧಿಕವಾಗಿದೆ. ಪರಿಸರ ಸ್ನೇಹಿ ಹಾಗೂ ಫ್ರಿಡ್ಜ್ ನಲ್ಲಿಟ್ಟ ನೀರಿಗಿಂತ ಮಡಿಕೆ ನೀರು ಆರೋಗ್ಯ ಕರವಾಗಿರುವಂತಹದ್ದು, ಹಾಗಾಗಿ ಹೆಚ್ಚಿನವರು ಮಡಿಕೆ ನೀರನ್ನು ಬಳಕೆ ಮಾಡುತ್ತಾರೆ.
– ಹಣ್ಣಿನ ಜ್ಯೂಸ್ ಬೇಡಿಕೆ ಹೆಚ್ಚಳ
ಕಲ್ಲಂಗಡಿ, ಮಾವಿನ ಹಣ್ಣು, ಹಲಸಿನ ಹಣ್ಣು, ಅನನಾಸ್, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಹೆಚ್ಚು ಸವಿಯುತ್ತಿದ್ದಾರೆ. ಇದರೊಂದಿಗೆ ಕಬ್ಬು, ಚಿಕ್ಕು ಮುಂತಾದ ಹಣ್ಣಿನ ಜ್ಯೂಸ್ ಗಳಿಗೂ ಬೇಡಿಕೆ ಬಂದಿದೆ.