ಸುಳ್ಯ ಬಸ್ ನಿಲ್ದಾಣದಲ್ಲೇ ಬಸ್ಸಿಗೆ ಬೆಂಕಿ!
– ಪ್ರಯಾಣಿಕರು ಪಾರು: ಏನಿದು ಘಟನೆ?
– ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ ಶರಣು!
– ಮಂಗಳೂರಿನಲ್ಲಿ ಮತ್ತೆ ಅಂಡರ್ ವರ್ಲ್ಡ್ ಸದ್ದು!
– ಮಂಗಳೂರು: ಟ್ಯಾಂಕರ್ನಡಿ ಸಿಲುಕಿ ಸ್ಕೂಟರ್ ಸವಾರ ಸಾವು
NAMMUR EXPRESS NEWS
ಸುಳ್ಯ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಕಿ ಬಿದ್ದು ಭಾರೀ ಅವಘಡ ತಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೊಯನಾಡು ಭಾಗಕ್ಕೆ ತೆರಳಬೇಕಾಗಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ದಟ್ಟ ಹೊಗೆ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ದಟ್ಟ ಹೊಗೆ ಬರುತ್ತಿದ್ದಂತೆ ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಮೂಲಕ, ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ.
ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ ಶರಣು!
ಉಡುಪಿ: ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ ಶರಣಾಗಿದ್ದಾರೆ. ಯಕ್ಷಗಾನ ಕಲಾವಿದ ಗುರುಪ್ರಸಾದ್ ಕುಲಾಲ್ (25) ಆತ್ಮಹತ್ಯೆ ಮಾಡಿಕೊಂಡವರು. ಕಲಾವಿದ ಗುರುಪ್ರಸಾದ್ ಉಡುಪಿಯ ಬ್ರಹ್ಮಾವರ ತಾಲೂಕು ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಹೀಗೆ ಹಲವು ಮೇಳಗಳಲ್ಲಿ ಸೇವೆ ನೀಡಿದ್ದರು. ಬಹುತೇಕ ಸ್ತ್ರೀ ಪಾತ್ರಗಳ ಮೂಲಕವೇ ಗುರುಪ್ರಸಾದ್ ಪ್ರಚಾರದಲ್ಲಿದ್ದರು. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಮಂಗಳೂರಿನಲ್ಲಿ ಮತ್ತೆ ಅಂಡರ್ ವರ್ಲ್ಡ್ ಸದ್ದು!
ಮಂಗಳೂರು : ಕೆಲ ವರ್ಷಗಳಿಂದ ಸ್ತಬ್ದವಾಗಿದ್ದ ಅಂಡರ್ ವರ್ಲ್ಡ್ ಮತ್ತೆ ಮಂಗಳೂರಿನಲ್ಲಿ ಸದ್ದು ಮಾಡಲಾರಂಭಿಸಿದೆ. ಅಂಡರ್ ವಲ್ಡ್ ಡಾನ್ ಕಲಿ ಯೋಗಿಶ್ ಇಬ್ಬರು ಸಹಚರನ್ನು ಬಂಧಿಸಿದ ಘಟನೆ ನಡೆದಿದೆ. ನಗರದ ಸೌರಾಷ್ಟ್ರ ಬಟ್ಟೆ ಮಳಿಗೆಯ ಮಾಲಕರಿಗೆ 50 ಲಕ್ಷ ನೀಡುವಂತೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಬೆನ್ನುಹತ್ತಿದ್ದ ಪೊಲೀಸರು ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರನ್ನು ಬಂಧಿಸಿದ್ದಾರೆ. ಕೇರಳ ಕಾಸರಗೋಡು ನಿವಾಸಿ ಮಹಮ್ಮದ್ ಹನೀಫ್(42) ಮುಡಿಪು ಬಂಟ್ವಾಳ ನಿವಾಸಿ ಮಹಮ್ಮದ್ ರಫೀಕ್ (36) ಬಂಧಿತರು. ನಗರದ ಫನ್ನೀರ್ ನಲ್ಲಿ ಕಾರ್ಯಾಚರಣೆ ಮಾಡಿದ ನಗರ ಕ್ರೈಂ ಬ್ರಾಂಚ್ ಖಚಿತ ಮಾಹಿತಿ ಆಧಾರಿಸಿ ಕಾರು ತಪಾಸಣೆ ನಡೆಸುತ್ತಿದ್ದಾಗ ಇನ್ನೊವ ಕಾರಿನಲ್ಲಿ ಸಂಚಾರಿಸುತ್ತಿದ್ದ ಭೂಗತ ಪಾತಕಿ ಕಲಿಯೋಗಿಶ್ ಸಹಚರರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
ಮಂಗಳೂರು: ಟ್ಯಾಂಕರ್ನಡಿ ಸಿಲುಕಿ ಸ್ಕೂಟರ್ ಸವಾರ ಸಾವು
ಮಂಗಳೂರು: ನಗರದ ನಂತೂರು ಮತ್ತು ಕೆಪಿಟಿ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟರು. ಮೃತರನ್ನು ಶಿವಾನಂದ ಎಂದು ಗುರುತಿಸಲಾಗಿದೆ.ಅವರು ಬಿಕರ್ನಕಟ್ಟೆಯಲ್ಲಿ ಟೈರ್ ದುರಸ್ತಿ ಪಡಿಸುವ ಮಳಿಗೆಯನ್ನು ನಡೆಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ. ಅವರು ಸ್ಕೂಟರ್ ನಲ್ಲಿ ಪಾದಚಾರಿ ಮಾರ್ಗ ದಿಂದ ಹೆದ್ದಾರಿಯನ್ನು ಪ್ರವೇಶಿಸುವಾಗ ಆಯ ತಪ್ಪಿ ಹೆದ್ದಾರಿ ಮೇಲೆ ಬಿದ್ದರು. ಅಗ ನಂತೂರು ಕಡೆಯಿ.ದ ಬಂದ ಟ್ಯಾಂಕರ್ ನ ಎಡ ಹಿಂಭಾಗದ ಟೈರ್ ಅವರ ತಲೆಮೇಲೆ ಹಾದುಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟ್ಯಾಂಕರ್ ಚಾಲಕ ಸುನೀತ್ ಕೆ. ವಿರುದ್ಧ ಸಂಚಾರ ಪೂರ್ವ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.