- ವಿಧಾನ ಸೌಧದ ಸುತ್ತ ದಾರ್ಶನಿಕರ ಪ್ರತಿಮೆ ನಿರ್ಮಾಣ
- ತೀರ್ಥಹಳ್ಳಿ ಹೆಸರನ್ನು ಕಲಾ ಪ್ರಪಂಚದಲ್ಲಿ ಅರಳಿಸಿದ ಕಲಾವಿದ
NAMMUR EXPRESS NEWS
ನಾಡಿನ ಖ್ಯಾತ ಕಲಾವಿದರಾದ ತೀರ್ಥಹಳ್ಳಿ ಮೂಲದ ಬಿ.ಡಿ.ಜಗದೀಶ್ ಬಾಣಂಕಿ ನಿರ್ಮಿಸಿರುವ ಬಸವಣ್ಣ, ಕೆಂಪೇಗೌಡ, ಕೆ.ಸಿ.ರೆಡ್ಡಿ ಮತ್ತು ಡಾ.ಅಂಬರೀಶ್ ಅವರ ಪ್ರತಿಮೆಯನ್ನು ರಾಜ್ಯ ಸರ್ಕಾರ ಸಮರ್ಪಣೆ ಮಾಡಿದೆ.
ವಿಧಾನ ಸೌಧದ ಮುಂದೆ ಬಸವಣ್ಣ, ಕೆಂಪೇಗೌಡ ಹಾಗೂ ಕೆ.ಸಿ. ರೆಡ್ಡಿ ಪ್ರತಿಮೆ ಈ ನಾಡಿನ ಹಿರಿಯರ ನೆನಪಿನ ಪುಟವಾಗಿ ನಿಂತಿದೆ.
ಇನ್ನು ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಪ್ರತಿಮೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣ್ಯರ ಸಮ್ಮುಖದಲ್ಲಿ ನಾಡಿಗೆ ಸಮರ್ಪಿಸಲಾಗಿದೆ.
ತೀರ್ಥಹಳ್ಳಿಯ ದೇವಂಗಿ ಸಮೀಪದ ಬಾಣಂಕಿ ಮೂಲದ ಜಗದೀಶ್ ಈಗ ನಾಡಿನ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಇವರ ಕಲೆ ಬಗ್ಗೆ ಸಿಎಂ ಬೊಮ್ಮಾಯಿ, ಸಚಿವ ಆರ್ ಅಶೋಕ್, ಅಂಬರೀಷ್ ಪತ್ನಿ ಸುಮಲತಾ, ಮಗ ಅಭಿಷೇಕ್, ಹಾಗೂ ಎಲ್ಲಾ ಗಣ್ಯರು ಹೆಮ್ಮೆ ವ್ಯಕ್ತಪಡಿಸಿ ಗೌರವಿಸಿದ್ದಾರೆ.
ತುಂಗಾ ಕಾಲೇಜಿನಲ್ಲಿ ಪಿಯುಸಿ
ವಿಧಾನ ಸೌಧದ ಎದುರು ಮೂರು ಪ್ರತಿಮೆ
ವಿಧಾನಸೌಧದ ಆವರಣದಲ್ಲಿ ನಾಡಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯು 14 ಅಡಿ ಎತ್ತರವಿದ್ದು ಮೂರು ಟನ್ ತೂಕವನ್ನು ಹೊಂದಿದೆ. ವಿಧಾನಸೌಧದ ಒಂದು ಭಾಗದಲ್ಲಿ ತೀರ್ಥಹಳ್ಳಿಯವರೇ ಆದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವೃತ್ತವನ್ನು ಹೊಂದಿದ್ದು ಇನ್ನೊಂದು ಭಾಗದಲ್ಲಿ ಬಾಣಂಕಿ ಬಿ.ಡಿ.ಜಗದೀಶ್ ಮಾಡಿರುವ ಕೆ.ಸಿ.ರೆಡ್ಡಿ ಅವರ ಕಂಚಿನ ಪ್ರತಿಮೆ ಶಾಶ್ವತವಾಗಿ ನಿರ್ಮಾಣವಾಗಲಿದೆ. ವಿಧಾನ ಸೌಧದ ಎದುರು ಮಾ.27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಸರ್ಕಾರದ ಸಿಎಂ, ಸಚಿವರು ಸೇರಿ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಮಾಡಿದ್ದಾರೆ. ಬಸವಣ್ಣ ಪ್ರತಿಮೆ 14 ಅಡಿ ಇದ್ದು6 ಟನ್ ಇದೆ. ಕೆಂಪೇಗೌಡ ಪ್ರತಿಮೆ ಕೂಡ 14 ಅಡಿ ಎತ್ತರ, 6 ಟನ್ ತೂಕವಿದೆ.
ಅಂಬರೀಷ್ ಪ್ರತಿಮೆ ನಿರ್ಮಾಣ
ಡಾ.ಅಂಬರೀಶ್ ಅವರ ಪ್ರತಿಮೆ 16 ಅಡಿ ಎತ್ತರವಿದ್ದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ರವರ ಸಮಾಧಿಯ ಪಕ್ಕದಲ್ಲಿ ಸ್ಥಾಪಿಸಲಾಗಿದೆ. ಇದರ ತೂಕ 3 1/2 ಟನ್ ತೂಕವಿದ್ದು ಜಗದೀಶ್ ಅವರ ಕಲಾ ಸಾಮರ್ಥ್ಯದಿಂದ ನಿರ್ಮಿಸಿದ್ದಾರೆ.
ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದ ಕಲಾವಿದ!
ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದ ಈ ಪ್ರತಿಮೆ ನಿರ್ಮಾಣ ಮಾಡಲಿದ್ದು ತೀರ್ಥಹಳ್ಳಿ ಪ್ರತಿಭೆಯನ್ನು ರಾಷ್ಟ್ರಕ್ಕೆ ಸಾಬೀತು ಪಡಿಸಲಿದ್ದಾರೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತ ವಿಷಯ. ಈ ಹಿಂದೆ ಹಲವಾರು ಪ್ರಶಸ್ತಿಯನ್ನು ಜಗದೀಶ್ ಪಡೆದಿದ್ದು ವಿಶ್ವ ಮಟ್ಟದಲ್ಲಿ ಇವರ ಕಲಾಕೃತಿಗಳಿಗೆ ಮಾನ್ಯತೆ ಸಿಕ್ಕಿದೆ.
ಎಲ್ಲೆಲ್ಲಿ ಪ್ರತಿಮೆ ನಿರ್ಮಾಣ?
- ಫ್ರೀಡಂ ಪಾರ್ಕ್- ಕುವೆಂಪು ಪ್ರತಿಮೆ
- ಶಿವಮೊಗ್ಗ ರಂಗ ಮಂದಿರ- ಕುವೆಂಪು ಪ್ರತಿಮೆ
- ಬೆಂಗಳೂರು ವಿವಿ ಭಾಷಾ ಭಾರತಿ- ಕುವೆಂಪು ಪ್ರತಿಮೆ
- ಮಲ್ಲೇಶ್ವರಂ ಬ್ರಿಡ್ಜ್- ಕುವೆಂಪು ಪ್ರತಿಮೆ
- ರಾಜಾಜಿನಗರ – ಶಿವಕುಮಾರ ಸ್ವಾಮೀಜಿ, ಬಸವಣ್ಣ
ಹಿರಿಯೂರು – ನಾಲ್ವಡಿ ಕೃಷ್ಣರಾಜ ಒಡೆಯರ್
ಸಿಎಂ, ಅಂಬರೀಷ್ ಕುಟುಂಬದ ಮೆಚ್ಚುಗೆ
75 ದಿನದಲ್ಲಿ ಬಸವಣ್ಣ, ಕೆಂಪೇಗೌಡ, 2 ದಿನದಲ್ಲೇ 4 ಪ್ರತಿಮೆ ಉದ್ಘಾಟನೆ ಆಗಿದೆ. ಅಲ್ಲಿಯೂ ಇಡೀ ಪ್ರತಿಮೆ ರಾಜ್ಯದ ಹೆಮ್ಮೆ, ಕಲೆಯನ್ನು ಪ್ರತಿನಿಧಿಸಿದೆ. ಅಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಅಂಬರೀಷ್ ಕುಟುಂಬ ಪ್ರತಿಮೆ ನೋಡಿ ಸಂತಸದಿಂದ ಜಗದೀಶ್ ಅವರ ಕಲೆಯನ್ನು ಕೊಂಡಾಡಿದ್ದಾರೆ. ಅಲ್ಲದೆ ತೀರ್ಥಹಳ್ಳಿ ಕಲಾವಿದನ ಸಾಧನೆಯನ್ನು ಕೊಂಡಾಡಿದ್ದಾರೆ.
ದೇಶ, ವಿದೇಶದಲ್ಲಿ ಜಗದೀಶ್ ಹೆಸರು ಪ್ರಸಿದ್ಧಿ!
ತೀರ್ಥಹಳ್ಳಿ ತಾಲೂಕಿನ ದೇವಂಗಿ ಪ್ರಾಥಮಿಕ ಶಾಲೆಯಲ್ಲಿ ಓದಿ, ಕಟ್ಟೆಹಕ್ಕಲಲ್ಲಿ ಹೈಸ್ಕೂಲ್, ಪಿಯುಸಿ ತುಂಗಾ ಕಾಲೇಜಿನಲ್ಲಿ ಪಿಯುಸಿ, ಚಿತ್ರಕಲಾ ಪರಿಷತ್ ಬೆಂಗಳೂರು, ಕೆನ್ಸ್ ಆಫ್ ಆರ್ಟ್ಸ್, ಡಿಗ್ರಿ ಫೈನ್ ಆರ್ಟ್ಸ್( ಕಲಾ ಪದವಿ) ಪಡೆದರು.
ದೆಹಲಿ ವರ್ಚ್ಯುಎಲ್ ವಿವಿ ಕಲಾ ಸೇವೆಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಪಾಕಿಸ್ತಾನದ ಬಾಲಕಿ ಹೃದಯ ಚಿಕಿತ್ಸೆಗಾಗಿ ಭಾರತದ ದೆಹಲಿ ಆಸ್ಪತ್ರೆಗೆ ಬಂದಾಗ “ನೂರ್ ಫಾತಿಮಾಬ್ಯಾಕ್ ಟು ಡೆಲ್ಲಿ ” ಭಾರತ ಸೌಹಾರ್ದತೆಯ ಪೈಂಟ್ಸ್,ಭಾರತ ಎಲ್ಲರನ್ನು ಸ್ವಾಗತಿಸುತ್ತದೆ ಎಂಬ ಹೆಮ್ಮೆಯ ಪೈಂಟ್ ಇಡೀ ದೇಶವನ್ನು ಪ್ರತಿನಿಧಿಸಿತು
ಇರಾಕ್ ಇರಾನ್ ಯುದ್ಧ ಅಣು ಬಾಂಬ್ ಪ್ರಯೋಗ ವಿರುದ್ಧ ಪೈಂಟ್, ಭಯೋತ್ಪಾದನಾ ವರ್ಲ್ಡ್ ಟ್ರೇಡ್ ಬಿಲ್ಡಿಂಗ್ ಕುಸಿತದ ಆತಂಕದ ಪೈಂಟ್ ಸೇರಿದಂತೆ
ಅನೇಕ ಶಿಲ್ಪ ಕಲೆ, ಚಿತ್ರಕಲೆಗಳು ಅಮೇರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರದರ್ಶನಗೊಂಡಿದೆ.
ರೈತ ಕುಟುಂಬದ ಕಲಾವಿದ
ಚಿಕ್ಕ ರೈತ ಕುಟುಂಬದ ಕಲಾವಿದನೊಬ್ಬ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ದೇವಂಗಿ ಗ್ರಾಮ ಪಂಚಾಯತ್ ಬಾನಂಕಿಯ
ಬಿ.ವಿ ಧರ್ಮಣ್ಣ ಗೌಡ ಹಾಗೂ ರಂಗಮ್ಮ ದಂಪತಿಗಳ ಪುತ್ರ. ತಮ್ಮ ಧರ್ಮಪತ್ನಿ ಸುಮಿತ್ರಾ ಹಾಗೂ ಜಾಹ್ನವಿ ಮತ್ತು ವೈಷ್ಣವಿ ಇಬ್ಬರು ಮಕ್ಕಳ ಚಿಕ್ಕ ಕುಟುಂಬ ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಹಲವು ಪ್ರಶಸ್ತಿಗಳು: ನ್ಯೂಯಾರ್ಕ್ನ WVES ಇಂಟರ್ನ್ಯಾಶನಲ್ನಿಂದ ಅಮೇರಿಕನ್ ಗೋಲ್ಡನ್ ಬ್ರಷ್ ಪ್ರಶಸ್ತಿ.ಜಯಚೀಸ್ ಪ್ರಶಸ್ತಿ, 1995,ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರಶಸ್ತಿ, ದಸರಾ ಪ್ರಶಸ್ತಿ., ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ, ಗೌರವ ಡಾಕ್ಟರೇಟ್-2019 ಪಡೆದಿದ್ದಾರೆ.