ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲೊಂದು ವಿಭಿನ್ನ ಹೊಸ ವರ್ಷ!
– ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
– ಜನತಾ ಬಡಾವಣೆಯಲ್ಲಿ ಮೊಳಗಿದ ಹೊಸ ವರ್ಷದ ಹರ್ಷ..!
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಜನತಾ ಕಾಲೋನಿ ಇದೀಗ ಹೊಸ ವರ್ಷದಿಂದ ಜನತಾ ಬಡಾವಣೆಯಾಗಿ ಮಾರ್ಪಟ್ಟಿದ್ದು ಬಡಾವಣೆಯ ಜನರೆಲ್ಲಾ ಸೇರಿ ಹೊಸ ವರ್ಷವನ್ನ ಸ್ವಾಗತಿಸಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗಮನ ಸೆಳೆದರು. ರಾಘವೇಂದ್ರ ಎಸ್ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಎಸ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ರಾಘವೇಂದ್ರ ಎಲ್ ಅವರು ಕಾರ್ಯಕ್ರಮದ ಸಾರಥ್ಯವನ್ನು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಹುತೇಕ ಜನತಾ ಬಡಾವಣೆಯ ಎಲ್ಲಾ ಮನೆಯ ಜನತೆ ಭಾಗವಹಿಸಿದ್ದು ಈ ಬಡಾವಣೆಯ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ವಿವಿಧ ಆಟೋಟಗಳನ್ನು ನಡೆಸಲಾಯಿತು. ಹಾಗೆ ಪಟಾಕಿಗಳನ್ನ ಸಿಡಿಸಿ,ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಜೊತೆಗೆ ಇಡೀ ಬಡಾವಣೆಯ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ಬಡಾವಣೆಯ ಎಲ್ಲರೂ ಸೇರಿ ಹೊಸ ವರ್ಷ ಆಚರಣೆ ಮಾಡಿರುವುದು ಗಮನ ಸೆಳೆಯಿತು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಯಿತು.