ತಾಲ್ಲೂಕಿಗೆ ಮಾದರಿಯಾದ ಸ. ಮಾ. ಹಿ.ಪ್ರಾ ಶಾಲೆ ಮಾಳೂರು!
– ವಾರ್ಷಿಕೋತ್ಸವ ಸಮಾರಂಭ ಮತ್ತು ಕುವೆಂಪು ಉತ್ಸವ ಅದ್ದೂರಿ ಕಾರ್ಯಕ್ರಮ!
– ತಾಲ್ಲೂಕಿನಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳ ಹೊಂದಿರುವ “ಸರ್ಕಾರಿ ಶಾಲೆ” ಎಂದೇ ಪ್ರಸಿದ್ದಿ!
– ಕಾರ್ಯಕ್ರಮದ ರಂಗೇರಿಸಿದ ಮಕ್ಕಳ ಸಾಂಸ್ಕೃತ್ರಿಕ ಕಾರ್ಯಕ್ರಮಗಳು
NAMMUR EXPRESS NEWS
ತೀರ್ಥಹಳ್ಳಿ: ತಾಲ್ಲೂಕಿನಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಎಂದೇ ಪ್ರಸಿದ್ಧಿ ಪಡೆದಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಳೂರಿನಲ್ಲಿ ಜ. 7 ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ಮತ್ತು ಕುವೆಂಪು ಉತ್ಸವ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಿರೀಶ್ ಕೆ ಆರ್ ಅವರು ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಉದಯ್ ಜಿ ಡಿ ಅವರು ನೆರವೇರಿಸಿದರು.
ಈ ಶಾಲೆಯು ಎಲ್ಲಾ ತಾಲ್ಲೂಕಿನ ಸರ್ಕಾರ ಶಾಲೆಗಳಿಗೆ ಮಾದರಿಯಾಗಿದ್ದು, ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರವೂ ಮುಖ್ಯ ಪಾತ್ರವನ್ನು ವಹಿಸಿದೆ.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಳೂರು ವಾರ್ಷಿಕೋತ್ಸವ ಸಮಾರಂಭ ಮತ್ತು ಕುವೆಂಪು ಉತ್ಸವ ಕಾರ್ಯಕ್ರಮವೂ ನಡೆದು ಮನಸೂರೆಗೊಂಡಿತು.
ಕಾರ್ಯಕ್ರಮದ ರಂಗೇರಿಸಿದ ಮಕ್ಕಳ ಸಾಂಸ್ಕೃತ್ರಿಕ ಕಾರ್ಯಕ್ರಮಗಳು!
ಹತ್ತು ಹಲವಾರು ಮಕ್ಕಳ ಸಾಂಸ್ಕೃತ್ರಿಕ ಕಾರ್ಯಕ್ರಮಗಳು ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದೆ. ಸರ್ಕಾರ ಶಾಲೆಯ ಕಾರ್ಯಕ್ರಮ ಅದ್ದೂರಿ ಯಶಸ್ಸನ್ನು ಕಂಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಯಿತು.ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಶಿವಮೊಗ್ಗ ಮಾಜಿ ಅಧ್ಯಕ್ಷರು ಅಶೋಕ್ ಮೂರ್ತಿ, ಆದರ್ಶ ಹುಂಚದ ಕಟ್ಟೆ, ಸುಬ್ರಹ್ಮಣ್ಯ ಶೆಟ್ಟಿ, ಮೋಹನ್ ಕುಮಾರ್ ವಿ ಎಸ್, ಎಸ್ ಆರ್ ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ವೈ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಮುಖರಾದ ಎಂಸಿ ಮಂಜುನಾಥ್,ಪುಟ್ಟಪ್ಪ ಕೆ ವಿ, ಇಸಿಓ ನಾಗರಾಜ್ ಮತ್ತು ಎಸ್ಡಿಎಂಸಿಯ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಮಂಜುನಾಥ್ ಹೆಚ್ ಕೆ ಸರ್ವರನ್ನು ಸ್ವಾಗತಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ಛಾಯಾ ಅವರು ನಡೆಸಿದರು. ನಿರೂಪಣೆಯನ್ನು ಶೀಲಾ ಮತ್ತು ಅರುಣ್ ಕುಮಾರ್ ಅವರು ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಪೋಷಕರು ಭಾಗಿಯಾಗಿದ್ದರು.