ತೀರ್ಥಹಳ್ಳಿ ಕೆಡಿಪಿ ಸದಸ್ಯರಿಗೆ ಆಡಳಿತದ ಗೌರವ
– 6 ಮಂದಿ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ
– ಈಗ ಕೆಡಿಪಿ ಸದಸ್ಯರೇ ತಾಲೂಕಿನ ಜನಪ್ರತಿನಿಧಿಗಳು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಪಂಚಾಯತ್ ಕೆಡಿಪಿ ಸಭೆಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಕಾಂಗ್ರೆಸ್ ಪ್ರಮುಖರಾದ ಪೂರ್ಣೇಶ್ ಕೆಳಕೆರೆ, ಕರುಣಾಕರ್ ಮಾದ್ಲು, ಮಹೇಶ್ ಗೌಡ ಮಂಡಗದ್ದೆ, ಜೀನಾ ವಿಕ್ಟರ್ ಡಿಸೋಜ, ಅನ್ನಪೂರ್ಣ ಮೋಹನ್, ಸುರೇಶ್ ಕಲ್ಲುಕೊಪ್ಪ ಅವರನ್ನು ತಾಲೂಕು ಪಂಚಾಯತ್ ಆಡಳಿತದಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೈಲಾ,
ತಾಲೂಕು ಪಂಚಾಯತ್ ಮ್ಯಾನೇಜರ್ ರಾಘವೇಂದ್ರ ಎಸ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಕೆಡಿಪಿ ಸದಸ್ಯರೇ ಜನಪ್ರತಿನಿಧಿಗಳು!
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಯದ ಕಾರಣ ತಾಲೂಕು ಪಂಚಾಯತ್ ಜನಪ್ರತಿನಿಧಿಗಳು ಇಲ್ಲ. ಹಾಗಾಗಿ ಈಗ ಕೆಡಿಪಿ ಸದಸ್ಯರೇ ಜನ ಪ್ರತಿನಿಧಿಗಳು. ಪೂರ್ಣೇಶ್, ಜಿನಾ ವಿಕ್ಟರ್ ಸೇರಿ ಎಲ್ಲಾ ಸದಸ್ಯರು ರಾಜಕೀಯ ಹಾಗೂ ಜನ ಸಾಮಾನ್ಯರ ಕಷ್ಟ ಗೊತ್ತಿರುವವರು. ಜನರ ಸಮಸ್ಯೆ ಬಗ್ಗೆ ಇವರು ದನಿ ಎತ್ತಬೇಕಿದೆ.
ಕೆಡಿಪಿ ಸಭೆಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡವರು
ಪೂರ್ಣೇಶ್ ಕೆಳಕೆರೆ, ಕರುಣಾಕರ್ ಮಾದ್ಲು, ಮಹೇಶ್ ಗೌಡ ಮಂಡಗದ್ದೆ, ಜೀನಾ ವಿಕ್ಟರ್ ಡಿಸೋಜ, ಅನ್ನಪೂರ್ಣ ಮೋಹನ್, ಸುರೇಶ್ ಕಲ್ಲುಕೊಪ್ಪ