ತುಂಗಾ ಕಲೋತ್ಸವದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ ಸಂಭ್ರಮ
– ಸಾಂಸ್ಕೃತಿಕ ಸಂಗಮ ಏಕಪಾತ್ರಾಭಿನಯ, ಕಿರು ನಾಟಕದಲ್ಲಿ ಗೆಲುವು
– ತೀರ್ಥಹಳ್ಳಿ ರೋಟರಿ ರಾಜ್ಯದಲ್ಲಿ ಬೆಸ್ಟ್ ಸಂಘಟನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ರೋಟರಿ ಜಿಲ್ಲೆ 3182 ಜೋನ್ 11 ಇದರ ವಾರ್ಷಿಕ ಸಾಂಸ್ಕೃತಿಕ ಮಿಲನ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಎರಡು ಪ್ರಥಮ ಬಹುಮಾನಗಳನ್ನು ಪಡೆದಿದೆ. ವಲಯ 11 ರಲ್ಲಿ , ಸೊರಬ, ಸಾಗರ ,ರಿಪ್ಪನ್ ಪೇಟೆ ,ಕೋಣಂದೂರು ಶಿವಮೊಗ್ಗ ಸೆಂಟ್ರಲ್, ಶಿವಮೊಗ್ಗ ಈಸ್ಟ್ ಮತ್ತು ತೀರ್ಥಹಳ್ಳಿ ರೋಟರಿ ಕ್ಲಬ್ ಒಳಗೊಂಡ “ಸಾಂಸ್ಕೃತಿಕ ಸಂಗಮ” ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ಕ್ಲಬ್ ಗೆ ಏಕಪಾತ್ರಭಿನಯ (ಮೋನೋ ಆಕ್ಟಿಂಗ್) ಹಾಗೂ ಕಿರು ನಾಟಕಕ್ಕೆ ಪ್ರಥಮ ಬಹುಮಾನ ಲಭ್ಯವಾಗಿದೆ.
ಭಕ್ತ ಪ್ರಹಲ್ಲಾದನ ಕಥೆಯನ್ನೊಳಗೊಂಡ ಏಕಪಾತ್ರ ಅಭಿನಯಕ್ಕೆ ರೊ ರಾಘವೇಂದ್ರ ಆಚಾರ್ಯ ಗುಡ್ಡೇಕೊಪ್ಪ ಇವರಿಗೆ ಪ್ರಥಮ ಪ್ರಶಸ್ತಿ ಲಭ್ಯವಾಗಿದೆ ,ಹಾಗೂ ತೀರ್ಥಹಳ್ಳಿಯ ರಂಗ ಕಲಾವಿದರೂ ನಟ ಮಿತ್ರರು ತಂಡದ ಶಿವಕುಮಾರ್ ಮತ್ತು ಕಾರ್ತಿಕ್ ನಿರ್ದೇಶನದಲ್ಲಿ ರೂಪಗೊಂಡ ಅರಣ್ಯ ಒತ್ತುವರಿ ವಿಷಯದ ಕಿರು ನಾಟಕಕ್ಕೆ ಪ್ರಥಮ ಪ್ರಶಸ್ತಿ ಲಭ್ಯವಾಗಿದೆ.
ಅತ್ಯಂತ ಕಠಿಣ ಸ್ಪರ್ಧೆ ಇದ್ದರೂ ತೀರ್ಥಹಳ್ಳಿ ರೋಟರಿಯ ಸದಸ್ಯರು ಕಠಿಣ ಪರಿಶ್ರಮದಿಂದ ಬಹುಮಾನ ಪಡೆದಿರುವುದು ಸಂತೋಷದ ವಿಷಯವಾಗಿದೆ ಎಂದು ರೊ ಅನಿಲ್ ಕುಮಾರ್ ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು. ಮಾಜಿ ಅಧ್ಯಕ್ಷರಾದ ರೊ ಬಿ.ವಿ ಶ್ರೀಧರ್ , ರೊ ಮನೋಜ್ ಕುಮಾರ್ ಆಚಾರ್ಯ , ರೊ ಶ್ರೀಕಾಂತ್ ಯಡಗರೆ , ನಿಯೋಜಿತ ಅಧ್ಯಕ್ಷರಾದ ರೊ ಪಿ.ವಿ ಭರತ್ ಕುಮಾರ್ , ಸದಸ್ಯರಾದ ರೊ ಅನಿಲ್ ಪೂಜಾರಿ,ರೊ ರಾಘವೇಂದ್ರ ಆಚಾರ್ಯ ಗುಡ್ಡೆಕೊಪ್ಪ, ರೊ ನಟರಾಜ್ ಶೇಟ್, ರೊ ವಾಣಿ ಗಣೇಶ್, ರೋಟರಿ ಕುಟುಂಬದವರಾದ ರಿತೇಶ್ ,ಶ್ರೀಮತಿ ಲತಾ ಶ್ರೀಕಾಂತ್, ಶ್ರೀಮತಿ ವಿದ್ಯಾ ಶ್ರೀಧರ್, ಮತ್ತು ಶ್ರೀಮತಿ ಶ್ವೇತಾ ಮನೋಜ್ ಕುಮಾರ್,ಇವರ ಅಭಿನಯ ಮನೋಜ್ನ್ಯವಾಗಿತ್ತು ಹಾಗೂ ಸಹಕರಿಸಿದ ಎಲ್ಲರಿಗೂ ರೊ ಹೆಚ್ ಎಂ ಸುರೇಶ್ , ಸಹಾಯಕ ಗವರ್ನರ್, ರೊ ಕೆ ಪಿ ಎಸ್ ಸ್ವಾಮಿ, ವಲಯ ತರಬೇತುದಾರ, ರೊ ಎಂ.ಎಸ್ ಶಿವಪ್ರಸಾದ್ , ಕಾರ್ಯದರ್ಶಿ ರೋಟರಿ ಕ್ಲಬ್ ತೀರ್ಥಹಳ್ಳಿ ವಂದನೆಗಳನ್ನು ತಿಳಿಸಿದರು.