ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ!
– ಡಿವೈಎಸ್, ಇನ್ಸ್ಪೆಕ್ಟರ್ ಸೇರಿ ಎಲ್ಲಾ ಪೊಲೀಸರು ಭಾಗಿ
– ಮೇಲಿನ ಕುರುವಳ್ಳಿಯಲ್ಲಿ ಲಾರಿಗಳಿಗೆ ಪೂಜೆ
NAMMUR EXPRESS NEWS
ತೀರ್ಥಹಳ್ಳಿ: ಆಯುಧ ಪೂಜೆಯನ್ನು ಪಟ್ಟಣದಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಫೋಟೋ ಜೊತೆಗೆ ಕಲಶ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿ ಆಯುಧ ಪೂಜೆ ಮಾಡಲಾಯಿತು. ಪೊಲೀಸ್ ವಾಹನಗಳಿಗೆ ಪೂಜೆ ಸಲ್ಲಿಸಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಮಾಡಲಾಯಿತು. ಈ ಪೂಜೆಯಲ್ಲಿ ಡಿವೈಎಸ್ ಪಿ ಗಜಾನನ ವಾಮನ ಸುತಾರ, ಇನ್ಸೆಕ್ಟರ್ ಅಶ್ವಥ್ ಗೌಡ, ಪಿಎಸ್ಐ ಸುಷ್ಮಾ, ಪಿಎಸ್ಐ ಶಿವನಗೌಡ ಸೇರಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.
ಕುರುವಳ್ಳಿಯಲ್ಲಿ ಲಾರಿಗಳಿಗೆ ಪೂಜೆ
ತೀರ್ಥಹಳ್ಳಿ ಉಧ್ಯಮದ ಬೆನ್ನೆಲುಬು ಕುರುವಳ್ಳಿ ಬಂಡೆ. ಕುರುವಳ್ಳಿಯಲ್ಲಿ ಲಾರಿಗಳನ್ನು ಪೂಜೆ ಮಾಡಲಾಯಿತು.
ಆಟೋಗಳಿಗೆ ಬಣ್ಣ ಬಣ್ಣದ ಸಿಂಗಾರ!
ತೀರ್ಥಹಳ್ಳಿ ಗಾಂಧಿ ಚೌಕ ಆಟೋ ನಿಲ್ದಾಣ, ಕಾರು ನಿಲ್ದಾಣಗಳಲ್ಲಿ ಆಟೋ, ಕಾರು ಸಿಂಗಾರ ಮಾಡಲಾಗಿದೆ.