ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ಭೋಜರಾಜ್, ವೀರೇಶ್ ಆಯ್ಕೆ
– ತೀರ್ಥಹಳ್ಳಿಯ ಇಬ್ಬರು ಶಿಕ್ಷಕರ ಆಯ್ಕೆ ಮಾಡಿದ ಶಿಕ್ಷಕರು
– ಇಬ್ಬರಿಗೂ ಶುಭಾಶಯಗಳು
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಗೆ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರಗ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಭೋಜರಾಜ್ ಬಿ ಟಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಹೆದ್ದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭೋಜರಾಜ್ ಬಿ ಟಿ ಆರಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಪುನರುಜ್ಜೀವನಕ್ಕೆ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಧ್ಯಾಪಕರು ಮತ್ತು ಸ್ಥಳೀಯರ ಜೊತೆ ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸಿದ್ದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಬೋಜರಾಜ್ ಬಿ ಟಿ ಜಿಲ್ಲೆಯ ಗಣಿತ ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಮುಖ ರಾಗಿದ್ದು ಇವರ ಆಯ್ಕೆಗೆ ಆರಗ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್ ಎನ್ ಮಂಜುನಾಥ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ದಾನೇಶ್ ಹಾಗೂ ಅಧ್ಯಾಪಕರು , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಮತ್ತು ಸದಸ್ಯರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ವೀರೇಶ್ ಆಯ್ಕೆ
ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಯ ಚುನಾವಣೆ 2024-29 ಪ್ರೌಢಶಾಲಾ ನಿರ್ದೇಶಕರ ಆಯ್ಕೆಗೆ ನೆಡೆದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಈ ಚುನಾವಣೆ ಯಲ್ಲಿ ಅತಿಹೆಚ್ಚು ಮತ ಪಡೆದು ವೀರೇಶ್. ಟಿ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೊಸೂರು – ಗುಡ್ಡೆಕೇರಿ ಇವರು ಜಯಗಳಿಸಿದ್ದಾರೆ.
ವೀರೇಶ್ ಅವರು ಬಹುಮುಖ ವಕ್ತಿತ್ವದ ಪ್ರತಿಭೆಯಾಗಿದ್ದು , ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರ ಕೊಡುವ ಉತ್ತಮ ಶಿಕ್ಷಕ ಪ್ರಶಸ್ತಿ- 2024 ಬಂದಿದ್ದನ್ನು ಸ್ಮರಿಸಬಹುದು. ಅಪಾರ ಪ್ರತಿಭೆ ಹೊಂದಿದ್ದು ಇವರ ಆಗುಂಬೆ ಭಾಗದಲ್ಲಿ ಇವರ ಮಾರ್ಗದರ್ಶನದಿಂದ 10ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಉದೋಗಕ್ಕೆ ಆಯ್ಕೆ ಆಗಿದ್ದಾರೆ..ಇವರಿಂದ ಕಲಿತ ಹಲವು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದನ್ನು ಸ್ಮರಿಸಬಹುದು.