ಉದ್ಯಮಿ ಸರಳ ಪ್ರವೀಣ್ ಇನ್ನಿಲ್ಲ!
– ತೀವ್ರ ಅನಾರೋಗ್ಯದಿಂದ ಸ್ನೇಹಮಯಿ ಸಂಘಟಕ ವಿಧಿವಶ
– ತೀರ್ಥಹಳ್ಳಿಯ ಹತ್ತಾರು ಸಂಘಟನೆಯಲ್ಲಿ ಸೇವೆ
– ಸರಳದ ತವರೂರಲ್ಲಿ ಇಂದು ಅಂತ್ಯಕ್ರಿಯೆ
NAMMUR EXPRES NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಯುವ ಸಂಘಟಕ, ಸ್ನೇಹಮಯ ವ್ಯಕ್ತಿತ್ವದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಸಿರಿಬೈಲ್ ಹಾರ್ಡ್ ವೇರ್ ಮಾಲೀಕ ಸರಳ ಪ್ರವೀಣ್ ಸೋಮವಾರ ವಿಧಿವಶರಾಗಿದ್ದಾರೆ.
ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರಳ ಪ್ರವೀಣ್ (40) ಸೋಮವಾರ ಬೆಳಿಗ್ಗೆ ಮಣಿಪಾಲ್ ಕೊಂಡೊಯ್ಯವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಬೆಟ್ಟಮಕ್ಕಿ ನಿವಾಸದಲ್ಲಿ ಇಡಲಾಗಿದೆ. ಸರಳದ ತವರೂರಲ್ಲಿ ಇಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಹಾಗೂ ಸ್ನೇಹ ವಲಯವನ್ನು ಅಗಲಿದ್ದಾರೆ.
ನೂರಾರು ಮಂದಿಯ ಬದುಕಿಗೆ ದಾರಿಯಾಗಿದ್ದರು!
ತಾವು ಬೆಳೆಯುವ ಜತೆಗೆ ನೂರಾರರು ಮಂದಿ ಯುವ ಉದ್ಯಮಿಗಳನ್ನು ಬೆಳೆಸಿದ್ದ ಅವರುಉದ್ಯಮ ಕ್ಷೇತ್ರದಲ್ಲಿ ತಾಲೂಕಿನಾದ್ಯಂತ ಸರಳ ಪ್ರವೀಣ್ ಎಂದೇ ಚಿರಪರಿಚಿತರಾಗಿದ್ದರು. ಎಲ್ಲರೊಂದಿಗೂ ತಮ್ಮ ಸರಳ ವ್ಯಕ್ತಿತ್ವದಿಂದಲೇ ಪ್ರೀತಿ ಪಾತ್ರರಾಗಿದ್ದರು. ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ಅನೇಕ ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದರು.
ತೀರ್ಥಹಳ್ಳಿಯ ಅನೇಕ ಸಂಘಟನೆಗಳಲ್ಲಿ ಸೇವೆ
ತೀರ್ಥಹಳ್ಳಿ ವರ್ತಕರ ಸಂಘದ ನಿರ್ದೇಶಕರಾಗಿ, ತುಂಗಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕರಾಗಿ, ವಿವಿಧ ಸಂಘ ಸಂಸ್ಥೆಗಳ ಸಂಚಾಲಕರಾಗಿ ಕಳೆದ 2 ದಶಕಗಳಿಂದ ಸೇವೆ ಸಲಿಸಿದ್ದರು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಸೇರಿದಂತೆ ಪ್ರತಿಯೊಬ್ಬ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ.