ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ!
– ಕಳೆದ 4ವರ್ಷದಿಂದ 1ಹೋಳುಕೂಡಾ ಬಂದಿಲ್ಲ!
– ದೇಶೀಯ ಅಡಿಕೆ ಬೆಲೆ ಏರಿಕೆ ಕಾಣಲಿದೆ: ಆರಗ ಜ್ಞಾನೇಂದ್ರ
– ಅಡಿಕೆ ಮಾರಾಟ ಸಂಸ್ಥೆಗಳಿಂದಲೂ ಅಭಯ
NAMMUR EXPRESS NEWS
ತೀರ್ಥಹಳ್ಳಿ: ಭೂತಾನ್ನಿಂದ ಅಡಿಕೆ ಬರುತ್ತದೆ, ಇದರಿಂದ ದೇಶೀಯ ಅಡಿಕೆ ಬೆಲೆ ಇಳಿಯುತ್ತದೆ ಎಂಬ ವದಂತಿಗಳನ್ನು ಪದೇ ಪದೇ ಹರಿಬಿಡಲಾಗುತ್ತಿದೆ. ಇದು ಅಡಿಕೆ ವ್ಯಾಪಾರಸ್ಥರ ತಂತ್ರಗಾರಿಕೆ ಅಷ್ಟೇ . ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ಡಿಬಿಡಿ ಮಾಡಿ ಅಡಿಕೆ ಮಾರುವ ಅಗತ್ಯವೂ ಇಲ್ಲ ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಇನ್ನಷ್ಟು ಏರಲಿದೆ ಎಂದು ಅಡಿಕೆ ಬೆಳೆಗಾರರ ಪರ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ನ ಮಾಜಿ ಅಧ್ಯಕ್ಷರೂ ಆದ ಶಾಸಕ ಆರಗ ಜ್ಞಾನೇಂದ್ರ ರೈತರಿಗೆ ಸಲಹೆ ನೀಡಿದ್ದಾರೆ.
ಒಪ್ಪಂದ ಆಗಿದ್ದು ಹೌದು ಆದರೆ ಒಂದು ಹೋಳು ಅಡಿಕೆಯೂ ಬಂದಿಲ್ಲ, ಅಂತರಾಷ್ಟ್ರೀಯ ಒಪ್ಪಂದಗಳ ಅನ್ವಯ ಭೂತಾನ್ನಿಂದ 17ಸಾವಿರ ಟನ್ ಅಡಿಕೆ ಆಮದಿಗೆ ಅವಕಾಶ ನೀಡಿರುವುದು ಸತ್ಯ. ಆದರೆ ಅದು ಸಂಸ್ಕರಿಸದ ಹಸಿ ಅಡಿಕೆಗೆ ಮಾತ್ರ ಒಣ ಅಡಿಕೆ ತರುವಂತಿಲ್ಲ ತೆರಿಗೆ ಏರಿಸಲಾಗಿದೆ ಮತ್ತು ಕೇವಲ 2 ಬಂದರುಗಳ ಮೂಲಕ ಅಡಿಕೆ ತರಲು ಅವಕಾಶ ಕೊಟ್ಟಿದೆ. ಹಸಿ ಅಡಿಕೆ 6-7 ದಿನಗಳಿಗಿಂತಾ ಜಾಸ್ತಿ ಉಳಿಯುವುದಿಲ್ಲ. ಹಡಗುಗಳ ಮೂಲಕ ಕೇವಲ 2 ಬಂದರುಗಳು ಆಡಿಕೆ ತಂದರೆ ಅದಕ್ಕೆ ಕನಿಷ್ಟ 15ರಿಂದ 20 ದಿನ ತಗಲುತ್ತದೆ. ಅಷ್ಟರಲ್ಲಿ ಹಸಿ ಅಡಿಕೆ ಕೊಳೆತು ಗೊಬ್ಬರವಾಗುತ್ತದೆ.
ಇದೇ ಕಾರಣದಿಂದ ಕಳೆದ 4 ವರ್ಷದಿಂದ ಭೂತಾನ್ ಅಡಿಕೆ ಭಾರತಕ್ಕೆ ಬಂದಿಲ್ಲ. ಲೋಕಸಭೆ ಪ್ರಶೋತ್ತರ ವೇಳೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸಚಿವರು ಭೂತಾನ್ನಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಅವಕಾಶ ಇದೆ ಎಂಬ ಉತ್ತರ ನೀಡಿದ್ದರು. ಅದೇ ಈಗ ವದಂತಿ ರೂಪ ಪಡೆದು ಗೊಂದಲಕ್ಕೆ ಕಾರಣವಾಗುತ್ತಿದೆ. ಅಡಿಕೆ ಬೆಳೆಗಾರರು ಈ ವಾಸ್ತವವನ್ನು ತಿಳಿಯಬೇಕು. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಜ್ಞಾನೇಂದ್ರರು ನಿಖರ ಮಾಹಿತಿ ನೀಡಿದ್ದಾರೆ.
ಅಡಿಕೆ ಮಾರಾಟ ಸಂಸ್ಥೆಗಳಿಂದಲೂ ಅಭಯ
ಅಡಿಕೆ ಮಾರಾಟ ಸಂಸ್ಥೆಗಳಿಂದಲೂ ಅಡಿಕೆ ಬೆಲೆ ಕಡಿಮೆ ಆಗಲ್ಲ. ಭಯ ಬೇಡ ಎಂದು ಮ್ಯಾಮ್ಕೋಸ್, ಕ್ಯಾ0ಪ್ಕೋ ಸಂಸ್ಥೆಗಳು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ರೈತರು ಆತಂಕಕ್ಕೆ ಒಳಗಾಗೋದು ಬೇಡ ಎಂದಿದ್ದಾರೆ.
ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!
HOW TO APPLY : NEET-UG COUNSELLING 2023