ದೇವಂಗಿ- ಬಸವಾನಿ ರಸ್ತೆ ಕುಸಿತ: ಅಪಾಯಕ್ಕೆ ಹೊಣೆ ಯಾರು?
– ಈಗಾಗಲೇ ಮೂರು ವಾಹನಗಳು ಗುಂಡಿಗೆ ಬಿದ್ದು ಅಪಘಾತ
– ಆಡಳಿತದ ವಿರುದ್ಧ ಸ್ಥಳೀಯರು, ಗ್ರಾಮ ಪಂಚಾಯತ್ ಸದಸ್ಯರ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ದೇವಂಗಿ ಸಮೀಪದ ಮಳೂರಿನ ಸಮೀಪ ರಸ್ತೆ ಕುಸಿದಿದ್ದು ಕೂಡಲೇ ಲೋಕೋಪಯೋಗಿ ಇಲಾಖೆ ಗಮನಿಸಿ ಸರಿ ಪಡಿಸಬೇಕು ಎಂದು ಹಾರೋಗೊಳಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಸದಸ್ಯರಾದ ಪ್ರಸನ್ನ ಅಂದಗೆರೆ ಅಗ್ರಹಿಸಿದ್ದಾರೆ. ಈಗಾಗಲೇ 3 ವಾಹನಗಳು ಈ ಗುಂಡಿಗೆ ಬಿದಿದ್ದು ಕಳೆದ ಬಾರಿ ಟ್ರ್ಯಾಕ್ಟರ್ ಡ್ರೈವರ್ ಪಲ್ಟಿ ಹೊಡೆದು ಡ್ರೈವರ್ ಅಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇತ್ತೀಚಿಗೆ ರಾತ್ರಿ ಪಿಕಪ್ ಒಂದು ಇದೇ ಹೊಂಡಕ್ಕೆ ಬಿದ್ದು ಭಾರಿ ಅನಾಹುತ ತಪ್ಪಿದೆ. ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಲೋಕೋಪಯೋಗಿ ಇಲಾಖೆ, ಸಂಬಂಧಪಟ್ಟ ಇಲಾಖೆ, ಗುತ್ತಿಗೆದಾರರು ಈ ರಸ್ತೆ ಮುಚ್ಚಬೇಕು. ಇಲ್ಲ ತಡೆಗೋಡೆಯನ್ನು ಹಾಕಬೇಕು. ಅನಾಹುತ ತಪ್ಪಿಸಬೇಕು ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.