ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ
– ಪ್ರಥಮ ಸ್ಥಾನ ಪಡೆದ ಸಹ್ಯಾದ್ರಿ ಪ್ರೌಢಶಾಲಾ ವಿದ್ಯಾರ್ಥಿಗಳು
– ತೀರ್ಥಹಳ್ಳಿ ತಾಲ್ಲೂಕಿಗೆ ಮತ್ತು ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ
NAMMUR EXPRESS NEWS
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ದಿನಾಂಕ 26-02- 2024ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ “ಮಕ್ಕಳ ಹಬ್ಬ- 2024” ಕಾರ್ಯಕ್ರಮದಲ್ಲಿ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಜನಪದ ನೃತ್ಯ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ ಹಾಗೂ ಕುಮಾರಿ. ಪ್ರಣಮ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ನೆರೆದ ಪ್ರೇಕ್ಷರಕರ ಪ್ರಶಂಸೆಗೆ ಪಾತ್ರರಾಗಿ ತೀರ್ಥಹಳ್ಳಿ ತಾಲ್ಲೂಕಿಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಪ್ರತಿಭೆಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು,
ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ. ಜನಪದ ನೃತ್ಯ ತಂಡದಲ್ಲಿ ಅನ್ವಿ ಸಿ. ಶೇಖರ್, ಪೂರ್ವಿ, ಶ್ರೇಯಾ.ಪಿ, ರೇಣುಕ, ಹಂಸ, ಸ್ನೇಹ, ಆರ್ಯ ಮತ್ತು ಸಾಗರ್ ಭಾಗವಹಿಸಿದ್ದು, ಈ ತಂಡಕ್ಕೆ ಜನಪದ ಗೀತೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಂಗೀತ ಶಿಕ್ಷಕಿಯಾದ ಶ್ರೀಮತಿ ಉಷಾ ಇವರು ಹಾಡಿರುವರು.
* ಚಿತ್ರಕಲೆ ಪ್ರಥಮ ಸ್ಥಾನ – ಪ್ರಣಮ್ಯ
* ಜನಪದ ನೃತ್ಯ – ಪ್ರಥಮ ಸ್ಥಾನದೊಂದಿಗೆ ಸಹ್ಯಾದ್ರಿ ತಂಡ