ಮಲೆನಾಡು ಅಭಿವೃದ್ಧಿಯೇ ನನ್ನ ಕನಸು..!
– ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಡಾ. ಆರ್ ಎಂ ಮಂಜುನಾಥಗೌಡ
– ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜೊತೆ ಎಕ್ಸ್ ಕ್ಲೂಸಿವ್ ಮಾತುಕತೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಸಹಕಾರಿ ನಾಯಕ ಹಾಗೂ ರಾಜ್ಯದಲ್ಲೇ ತಮ್ಮ ಸಹಕಾರಿ ಕ್ಷೇತ್ರಗಳ ಮೂಲಕ ಸಂಚಲನ ಮೂಡಿಸಿರುವಂತಹ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥ್ ಗೌಡ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಇಡೀ ಮಲೆನಾಡು ಸಂಭ್ರಮ ಪಡುತ್ತಿದೆ. ಅವರ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮೂರ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸುರ್ಜೇವಾಲ ಹಾಗೂ ಜಿಲ್ಲಾ ಸಚಿವರಾದ ಮಧು ಬಂಗಾರಪ್ಪನವರು ನನಗೆ ಈ ಅವಕಾಶ ಕೊಟ್ಟಿದಾರೆ. ಮಲೆನಾಡು ಭಾಗದ ಅಭಿವೃದ್ಧಿಯಲ್ಲಿ ಏನೇನು ಮಾಡಬೇಕು ಎನ್ನುವ ದಿಸೆಯಲ್ಲಿ ಆಲೋಚನೆ ಮಾಡುತ್ತಿದ್ದೇನೆ. ಸಿದ್ದರಾಮಯ್ಯನವರು ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದಾರೆ. ಜನಪರವಾದ ಬಜೆಟ್ಟನ್ನು ಜನರ ಮುಂದಿಟ್ಟಿದ್ದಾರೆ. ಗೃಹ ಜ್ಯೋತಿ ಹೊರತಾಗಿರುವ ಜನರಿಗೆ ಅನುಕೂಲವಾಗಲಿ ಎಂದು ವಿದ್ಯುತ್ ಬಿಲ್ ಕೂಡ ಕಡಿಮೆ ಮಾಡಲಾಗಿದೆ. ನನಗೂ ಕೂಡ ಪಕ್ಷ ಹಾಗೂ ಮುಖಂಡರು ಸೇರಿ ಒಂದು ಅವಕಾಶವನ್ನು ಕೊಟ್ಟಿದ್ದಾರೆ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಜನರ ಬಳಿ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ಮಾಡುವುದು ನನ್ನ ಜವಾಬ್ದಾರಿ.
ಮಲೆನಾಡಿನ ಭಾಗದಲ್ಲಿ ಸಂಪರ್ಕಗಳ ಕೊರತೆ ಇದೆ ಹಾಗೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಇದೆ. ಅವೆಲ್ಲದಕ್ಕೂ ಕೂಡ ಸರ್ಕಾರದ ಜೊತೆ ಸಂಬಂಧ ಇಟ್ಟುಕೊಂಡು ನನ್ನ ಜವಾಬ್ದಾರಿಯನ್ನು ಜನರಿಗೆ ಮುಟ್ಟಿಸುವಂತಹ ಪ್ರಯತ್ನವನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕೆಂಬ ಮನಸ್ಸು ನನಗಿದೆ. ಈಗಾಗಲೇ ಡಿಸಿಸಿ ಬ್ಯಾಂಕ್ ಅನ್ನು ಜನರ ಬಳಿಗೆ ತೆಗೆದು ಕೊಂಡು ಹೋಗಿದ್ದೇನೆ ಇದನ್ನು ಕೂಡ ಜನರಿಗೆ ತಲುಪಿಸುತ್ತೇನೆ. ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗ ಅದಕ್ಕೆ ವಿಶೇಷ ಒತ್ತನ್ನು ಕೊಡುವುದರ ಮೂಲಕ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂಬುದು ನನ್ನ ಉದ್ದೇಶ ಎಂದರು.
ಅಭಿಮಾನಿಗಳ ಸಂತಸವನ್ನು ಹೇಗೆ ಸ್ವೀಕರಿಸುತ್ತೀರಿ ಮತ್ತು ಅವರಿಗೆ ಈ ಸಂದರ್ಭದಲ್ಲಿ ಏನು ಹೇಳಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳು ನನಗಿಂತ ಹೆಚ್ಚು ಸಂತೋಷವಾಗಿದ್ದಾರೆ. ಕಾಂಗ್ರೆಸ್ ಜೊತೆಗೆ ಬೇರೆ ಬೇರೆ ಪಕ್ಷದ ಆತ್ಮೀಯರೂ ಕೂಡ ವಿಶೇಷವಾಗಿ ಹಾರೈಕೆಯನ್ನು ಮಾಡಿ ಶುಭ ಹಾರೈಸಿದ್ದಾರೆ. ಜನರ ಈ ಹಾರೈಕೆಯಿಂದ ನನಗೆ ಕೆಲಸ ಮಾಡಲು ಇನ್ನಷ್ಟು ಶಕ್ತಿಯನ್ನು ಕೊಡುತ್ತದೆ. ಜನರ ಸಲಹೆ ಸಹಕಾರ ಇಲ್ಲದಿದ್ದರೆ ನಾಯಕರಾಗಲು ಸಾಧ್ಯವಿಲ್ಲ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡಲು, ಜನರಿಗೆ ಅನುಕೂಲವಾಗುವ ಹಾಗೆ ಮಾಡುವುದು ನನ್ನ ಮೂಲ ಉದ್ದೇಶ.
ಅವಶ್ಯಕತೆ ಇರುವ ಜನರಿಗೆ ಸೌಲಭ್ಯ ತಲುಪಿದಾಗ ನಮಗೆ ಸಾಧನೆ ತೃಪ್ತಿ ಕೊಡುತ್ತದೆ. ಸುರ್ಜೆವಾಲ್ ಅವರು ನನಗೆ ಫೋನ್ ಮಾಡಿ ಈ ಜವಾಬ್ದಾರಿ ನೀವು ನಿಭಾಯಿಸುತ್ತಿರ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದು ನನಗೆ ತುಂಬಾ ಶಕ್ತಿ ಮತ್ತು ಚೈತನ್ಯ ಕೊಡುವಂತದ್ದು, ವಿಶೇಷವಾಗಿ ನಮ್ಮ ತೀರ್ಥಹಳ್ಳಿಯಲ್ಲಿ ಕೂಡ ಪಕ್ಷದವರು ಸಂತೋಷ ವ್ಯಕ್ತಪಡಿಸಿದ್ದಾರೆ. ಪಕ್ಷ ನನಗೆ ಕೊಟ್ಟಿರುವಂತಹ ಜವಾಬ್ದಾರಿಯನ್ನು ಗಂಭೀರವಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸ ನನಗಿದೆ ಇದೆ. ಬಹಳ ಅಚ್ಚುಕಟ್ಟಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.