ಹೊಸಹಳ್ಳಿ ಗುತ್ಯಮ್ಮ ದೇವಿ ಸನ್ನಿಧಿಯಲ್ಲಿ ದಸರಾ ಸಂಭ್ರಮ!
* ಅಲಂಕಾರದಿಂದ ಕಂಗೊಳಿಸುತ್ತಿದ್ದ ಗುತ್ಯಮ್ಮ ದೇವಿ
* ನವರಾತ್ರಿ ಉತ್ಸವ ತಾಯಿಯ ಅದ್ದೂರಿ ಮೆರವಣಿಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಶ್ರೀ ಗುತ್ಯಮ್ಮ ದೇವಿಯ ದೇವಸ್ಥಾನದಲ್ಲಿ ವಿಜಯದಶಮಿ ಸಂಭ್ರಮ ಕಳೆಗಟ್ಟಿತ್ತು.. ಉತ್ಸವದ ಮೂಲಕ ಪಲ್ಲಕ್ಕಿಯಲ್ಲಿ ಗುತ್ಯಮ್ಮ ದೇವಿಯನ್ನ ಬನ್ನಿ ಮಂಟಪಕ್ಕೆ ಕರೆದೊಯ್ಯಲಾಯಿತು.
ಬಳಿಕ ಭಕ್ತರಿಗೆ ಬನ್ನಿ ನೀಡಿ ಗ್ರಾಮದ ಬೇರೆ ಬೇರೆ ದೇವಾಲಯಗಳಿಗೆ ಪಲ್ಲಕ್ಕಿ ಮೂಲಕ ಉತ್ಸವ ಮೂರ್ತಿಯನ್ನು ಕರೆದೊಯ್ಯಲಾಯಿತು.. ದೇವಿಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ಗುತ್ಯಮ್ಮ ದೇವಿಯ ದರ್ಶನ ಪಡೆದು ಪುನೀತರಾದರು.. ತೀರ್ಥಹಳ್ಳಿ ತಾಲೂಕಿನ ಶಕ್ತಿದೇವತೆ ಎಂದೇ ಖ್ಯಾತಿ ಪಡೆದಿರುವ ಗುತ್ಯಮ್ಮ ದೇವಿ ಪಲ್ಲಕ್ಕಿಯಲ್ಲಿ ತೂಗುತ್ತಾ ದರ್ಶನ ನೀಡಿದ್ದು ವಿಶೇಷವಾಗಿತ್ತು.
ಹೊಸಹಳ್ಳಿ ಊರಿನ ಶ್ರೀ ಗುತ್ಯಮ್ಮ ದೇವಿಯ ನವರಾತ್ರಿ ಉತ್ಸವ ತಾಯಿಯ ಗರ್ಭ ಗುಡಿ ಇಂದ ಮೆರವಣಿಗೆ ಮೂಲಕ ಬನ್ನಿ ಮಂಟಪವನ್ನು ತಲುಪಿ ಜನರಿಗೆಲ್ಲ ಬನ್ನಿಯನ್ನು ವಿತರಿಸಲಾಯಿತು.ತದನಂತರ ಪಕ್ಕದ ದೇವಸ್ಥಾನಗಳಿಗೆ ಭೇಟಿ ನೀಡಿ ಮೆರವಣಿಗೆ ಮೂಲಕ ತನ್ನ ಗರ್ಭ ಗುಡಿಗೆ ವಾಪಾಸ್ ಆಗುವ ಒಂದು ದೃಶ್ಯವು ಮನೋಹರವಾಗಿತ್ತು.