ತೀರ್ಥಹಳ್ಳಿ ತಾಲೂಕಿನ ಶೈಕ್ಷಣಿಕ ಸುದ್ದಿಗಳು
– ರಸ ಪ್ರಶ್ನೆ: ಮತ್ತೊಮ್ಮೆ ಗುಡ್ಡೇಕೇರಿ ಹೈಸ್ಕೂಲ್ ಚಾಂಪಿಯನ್
– ಶಿರುಪತಿ ಶಾಲೆಯಲ್ಲಿ ಸಂಭ್ರಮದ ಪ್ರತಿಭಾ ಕಾರಂಜಿ
ತೀರ್ಥಹಳ್ಳಿ: ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಹಾಗೂ ತಾಲೂಕು ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರಥಮ ಸ್ಥಾನ ಪಡದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವೀರೇಶ್ ಟಿ ಅವರ ಮಾರ್ಗದರ್ಶನ ಹಾಗೂ ಎಲ್ಲಾ ಶಿಕ್ಷಕರ ಸಹಕಾರದಲ್ಲಿ ಗೆದ್ದ , ಕು. ಅಶ್ವಿನಿ ಪ್ರಭುಗೌಡರ್ ತುಂಬಿಗಿ ಹಾಗೂ ನಮ್ರತಾ ಮೋಹನ್ ನಂಟೂರು ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಇದೇ ಶಾಲೆಯ ಅಕ್ಷತಾ ಹೆಚ್ ಯು ಮತ್ತು ಶ್ರೀರಕ್ಷಾ ಕರ್ನಾಟಕ ರಾಜ್ಯ ಮಟ್ಟದಲ್ಲಿ ರನ್ನರ್ ಆಪ್ ಪ್ರಶಸ್ತಿ ಪಡೆದು ಜಿಲ್ಲೆಗೆ ತಾಲೂಕಿಗೆ ಕೀರ್ತಿ ತಂದಿದ್ದು ಸ್ಮರಿಸಬಹುದು.
ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಭಾಗವಹಿಸದ್ದ ಈ ಸ್ಪರ್ಧೆಯಲ್ಲಿ ಗುಡ್ಡೇಕೇರಿ ಶಾಲಾ ಮಕ್ಕಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು, ಮೌಖಿಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.. ಅಂತಿಮ ಸುತ್ತಿನಲ್ಲಿ, ಸಹ್ಯಾದ್ರಿ ಪ್ರೌಢಶಾಲೆ, ವಾಗ್ದೇವಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮೇಗರವಳ್ಳಿ, ಸರ್ಕಾರಿ ಪ್ರೌಢಶಾಲೆ ಕೊಡ್ಲು ಹಾಗೂ ಗುಡ್ಡೇಕೇರಿ ಪ್ರೌಢಶಾಲೆ ಭಾಗವಹಿಸಿದ್ದವು.. ಅಂತಿಮವಾಗಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮಕ್ಕಳು ನಾವು ಏಕೆ ಚಾಂಪಿಯನ್ಸ್ ಅಂತಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಪೋಷಕರ ಪರವಾಗಿ, ಮಕ್ಕಳ ಪರವಾಗಿ ಎಸ್ ಡಿ ಎಂ ಸಿ ಪರವಾಗಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ ಹಾಗೂ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಶಿರುಪತಿ ಶಾಲೆಯಲ್ಲಿ ಸಂಭ್ರಮದ ಪ್ರತಿಭಾ ಕಾರಂಜಿ
– ಅತ್ಯುತ್ತಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಪ್ರತಿಭಾ ಕಾರಂಜಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪ್ರತಿಭೆಯನ್ನು ಚಿಕ್ಕನಿಂದಲೇ ಬೆಳೆಸಬೇಕು ಪೋಷಕರು ಹಾಗೂ ಶಿಕ್ಷಕರ ಪಾತ್ರ ತುಂಬ ಪ್ರಾಮುಖ್ಯತೆ ಪಡೆದಿದೆ ಎಂದರು.
ಶಿಕ್ಷಕಿಯರಾದ ಶ್ರೀಲತಾ ಲತಾ ರಾಜಕುಮಾರ್, ಮಾಲಾ, ದೀಪ ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದಂತ ಉಮಾ, ಉಪನ್ಯಾಸಕ ಹಳೆ ವಿದ್ಯಾರ್ಥಿ ಪ್ರಸನ್ನ ಕುಮಾರ್ ನಿರೂಪಿಸಿದರು. ಜಾನಪದ ಹಾಗೂ ರಂಗಭೂಮಿ ನಿರ್ದೇಶಕರಾದ ಟಿ ಎನ್ ಮಂಜುನಾಥ್ ಶಿರುಪತಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದು ವೇದಿಕೆ ನಿರ್ವಹಿಸಿದರು. ಹಳೆಯ ವಿದ್ಯಾರ್ಥಿಗಳು ಶ್ರೀ ವ್ಯಾಗ್ರ ನರಸಿಂಹ ದೇವಸ್ಥಾನ ಆಡಳಿತ ಮಂಡಳಿಯವರು ವಿಶ್ವನಾಥ್ ಶೆಟ್ಟಿ, ಊರಿನ ಗ್ರಾಮದ ಪ್ರಮುಖರಾದ ಸುರೇಂದ್ರ, ರವೀಂದ್ರ, ಪುರುಷೋತ್ತಮ್ ನಾಗಪ್ಪ ಗೌಡ್ರು ಇದ್ದರು. ಕೊಪ್ಪಲು ಹತ್ತಿಗುಡ್ಗಿ ಶಿರುಪತಿ ಗುಂಡಿಹಳ್ಳಿ ಕುಸ್ಕಿ ತೆಂಕಬೈಲು ಗ್ರಾಮಸ್ಥರ ನೆರವಿನಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶ್ರೀ ಲತಾ ಅವರಿಗೆ ಊರಿನ ಗ್ರಾಮಸ್ಥರು ಹಾಗೂ ಸಚಿವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಕೊಪ್ಪಲು ರಾಮಚಂದ್ರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.