ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಶ್ವರಪ್ಪ ಮಿಂಚಿನ ಸಂಚಾರ!
– ಕೌದಳ್ಳಿ ದೇವಾಲಯಕ್ಕೆ ಭೇಟಿ: ಗುರುಗಳ ಆಶೀರ್ವಾದ
– ಮಂಡಗದ್ದೆ, ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ ದೇವಂಗಿ, ಮೇಲಿನಕುರುವಳ್ಳಿ, ಕೋಣಂದೂರಲ್ಲಿ ಸಭೆ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್. ಈಶ್ವರಪ್ಪ ಅವರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸಿದರು. ಮಂಡಗದ್ದೆ, ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ ದೇವಂಗಿ, ಮೇಲಿನಕುರುವಳ್ಳಿ, ಕೋಣಂದೂರಲ್ಲಿ ಸಾರ್ವಜನಿಕ ಸಭೆ ನಡೆಸಿ ಅವರು ಮತ ಯಾಚನೆ ಮಾಡಿದರು.
ಎಲ್ಲಾ ಹೋಬಳಿಯಲ್ಲೂ ಸಭೆ
ತೀರ್ಥಹಳ್ಳಿ ತಾಲೂಕಿನ ಎಲ್ಲಾ ಹೋಬಳಿಯಲ್ಲೂ ಸಭೆ ನಡೆಸಿದ ಅವರು, ಕೋಣಂದೂರಲ್ಲಿ 300ಕ್ಕೂ ಹೆಚ್ಚು ಮಂದಿ ಸೇರಿದ್ದರು.
ಯಡಿಯೂರಪ್ಪ ಕುಟುಂಬದಿಂದ ನನಗೆ ಮೋಸ ಆಗಿದೆ
ಎಲ್ಲಾ ಬಹಿರಂಗ ಸಭೆಗಳಲ್ಲಿ ಮಾತನಾಡಿದ ಈಶ್ವರಪ್ಪ ಅವರು ನನಗೆ ಆದ ಮೋಸ ಇನ್ನು ಯಾರಿಗೂ ಆಗಬಾರದು. ಕುಟುಂಬ ರಾಜಕಾರಣದಿಂದ ಎಲ್ಲರಿಗೂ ತೊಂದರೆಯಾಗಲಿದೆ. ನನಗೆ ಒಮ್ಮೆ ಮತ ನೀಡಿ. ನಿಮ್ಮ ಜತೆ ನಾನು ಸದಾ ಇರುತ್ತೇನೆ ಎಂದರು.
ಕೌದಳ್ಳಿ ದೇವಾಲಯಕ್ಕೆ ಭೇಟಿ: ಆಶೀರ್ವಾದ
ಶ್ರೀ ನಾಗರಕ್ತೇಶ್ವರಿ ಅಮ್ಮನವರ ಸನ್ನಿಧಿಗೆ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಿರುವ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಅವರು ಅಮ್ಮನವರಿಗೆ ಪೂಜೆ ಸಲ್ಲಿಸಿ ಧರ್ಮದರ್ಶಿಗಳಾದ ಮಂಜುನಾಥ್ ಅವರ ಆಶೀರ್ವಾದ ಪಡೆದರು. ಈ ವೇಳೆ ಗಣೇಶ್, ಸೇರಿದಂತೆ ಸ್ಥಳೀಯ ಮುಖಂಡರೂ ಹಾಜರಿದ್ದರು.