ಗಾಯತ್ರಿ ಜ್ಯುವೆಲ್ಲರ್ಸ್ ನೂತನ ಚಿನ್ನಾಭರಣಗಳ ಮಳಿಗೆ ಆರಂಭ
– ಸಾವಿರಾರು ಜನರಿಂದ ಚಿನ್ನ ಖರೀದಿ: ಇಡೀ ದಿನ ಜನವೋ ಜನ
– ಹೊರನಾಡು ಧರ್ಮಕರ್ತ ಭೀಮೇಶ್ವರ ಜೋಶಿ ದಂಪತಿಗಳಿಂದ ಉದ್ಘಾಟನೆ
– ಸರ್ವರಿಗೂ ಧನ್ಯವಾದ ಹೇಳಿದ ಮಾಲೀಕ ಅನಂತ ಪದ್ಮನಾಭ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್ ನೂತನ ಚಿನ್ನಾಭರಣ ಮಳಿಗೆಯ ಉದ್ಘಾಟನೆ ಅತ್ಯಂತ ಅದ್ದೂರಿಯಾಗಿ ಗುರುವಾರ ನಡೆಯಿತು.
ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕ ದಲ್ಲಿರುವ ಅಲಂಕಾರ್ ಕಾಂಪ್ಲೆಕ್ಸ್ನಲ್ಲಿ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಮತ್ತು ಶ್ರೀಮತಿ ರಾಜೇಶ್ವರಿ ಜೋಶಿಯವರ ಅಮೃತ ಹಸ್ತದಿಂದ ನೆರವೇರಿತು.
ಮಾಲೀಕ ಅನಂತ ಪದ್ಮನಾಭ ಮಾತನಾಡಿ, ಗ್ರಾಹಕರ ಅಪೇಕ್ಷೆ ಮೇರೆಗೆ ಗುಣಮಟ್ಟದ ಚಿನ್ನವನ್ನು ಗ್ರಾಹಕರಿಗೆ ಕೊಡುವ ಉದ್ದೇಶದಿಂದ ನೂತನ ಚಿನ್ನಾಭರಣ ಮಳಿಗೆ ಶುರುಮಾಡಲಾಗಿದೆ. ಸೇವೆಯೇ ನಮ್ಮ ಧ್ಯೇಯ. ಕಳೆದ 28 ವರ್ಷದಿಂದ ತೀರ್ಥಹಳ್ಳಿಯ ಜನರ ಸಹಕಾರದಿಂದ ಹೊಸ ಮಳಿಗೆ ಶುರುವಾಗಿದೆ ಎಂದರು.
ಹೊರನಾಡು ಭೀಮೇಶ್ವರ ಜೋಶಿ ಅವರಿಂದ ಆಶೀರ್ವಾದ
ತೀರ್ಥಹಳ್ಳಿ ಪಟ್ಟಣದಲ್ಲಿ ಜ್ಯುವೆಲ್ಲರ್ಸ್ ಉದ್ಯಮಕ್ಕೆ ಒಂದು ಹೊಸ ರೂಪವನ್ನು ನೀಡಿದಂತಹ ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹೊರನಾಡು ಧರ್ಮದರ್ಶಿ ಭೀಮೇಶ್ವರ ಜೋಶಿ ಅವರು ಗಾಯತ್ರಿ ಜ್ಯುವೆಲ್ಲರಿ ಮಲೆನಾಡಿನ ಪ್ರಮುಖ ಚಿನ್ನಾಭರಣ ಮಳಿಗೆಯಾಗಿದೆ. ತನ್ನ ಗುಣಮಟ್ಟ ಮತ್ತು ಸೇವೆ ಮೂಲಕ ಮನೆ ಮಾತಾಗಿದೆ ಎಂದು ಬಣ್ಣಿಸಿದರು.
ತೀರ್ಥಹಳ್ಳಿ ರಥಬೀದಿಯಲ್ಲಿ ಜ್ಯುವೆಲ್ಲರ್ನ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಗಾಯತ್ರಿ ಜ್ಯುವೆಲ್ಲರ್ಸ್ ಈಗ ಪಟ್ಟಣದ ಗಾಂಧಿಚೌಕದಲ್ಲಿರುವ ಅಲಂಕಾರ್ ಕಾಂಪ್ಲೆಕ್ಸ್ನಲ್ಲಿ ನೂತನ ಮಳಿಗೆ ಶುರುವಾಗಿದೆ. ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ, ಕೆನರಾ ಬ್ಯಾಂಕ್ನ ಡಿಸಿಎಂ ದೇವರಾಜ್, ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಮೊಹ್ಮ ದ್ ಸಾಬೀರ್, ಆರ್ಕಿಟೆಕ್ಚರ್ ರಾಘವೇಂದ್ರ ಆಚಾರ್ಯ, ಚಾರ್ಟೆಡ್ ಅಕೌಂಟೆಂಟ್ ವಸಂತ್ ಕುಮಾರ್, ಕಟ್ಟಡದ ಮಾಲಕಿ ಗೌರಿ ಎಸ್ , ಡಿವೈಎಸ್ಪಿ ಗಜಾನನ ವಾಮನಸುತಾರ, ಸರ್ಕಲ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಸೇರಿ ತೀರ್ಥಹಳ್ಳಿ ಎಲ್ಲಾ ಕ್ಷೇತ್ರದ ಗಣ್ಯರು ಭೇಟಿ ನೀಡಿ ಶುಭ ಹಾರೈಸಿದರು. ಶ್ರೀಮತಿ ನಾಗವೇಣಿ, ಶ್ರೀ ರಾಜ ಗೋಪಾಲ ಆಚಾರ್ಯ, ಶ್ರೀಮತಿ ಮೋಹಿನಿ ಎ. ಆಚಾರ್ಯ, ಶ್ರೀ ಅನಂತ ಪದ್ಮನಾಭ ಆಚಾರ್ಯ, ಆಮೋಘ ವಿ. ಆಚಾರ್ಯ, ಅನಘ ವಿ. ಆಚಾರ್ಯ ಹಾಗೂ ಗಾಯತ್ರಿ ಜ್ಯುವೆಲ್ಲರ್ನ ಸಿಬ್ಬಂದಿಗಳು ಸ್ವಾಗತಿಸಿದರು.
ಚಿನ್ನ ಖರೀದಿದಗೆ ಮುಗಿ ಬಿದ್ದ ಜನ!
ಚಿನ್ನಾಭರಣ ಮಳಿಗೆ ಉದ್ಘಾಟನೆ ವೇಳೆ ಚಂಡೆ, ವಾಯ್ಲಿನ್ ವಾದನ, ಪ್ರಣೀತಾ ಗೌಡ ನಿರೂಪಣೆ ಗಮನ ಸೆಳೆಯಿತು. ಚಿನ್ನ ಖರೀದಿಗೆ ಸಾವಿರಾರು ಜನ ಮುಗಿಬಿದ್ದಿರುವುದು ಕಂಡು ಬಂದಿತು.