ತೀರ್ಥಹಳ್ಳಿಯಲ್ಲಿ ಸರ್ಕಾರಿ ನೌಕರರ ಕ್ರಿಕೆಟ್: ಇಂದೂ ಪಂದ್ಯ
– ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಆಯೋಜನೆ
– ಹ್ಯಾಟ್ರಿಕ್ ಸಿಕ್ಸ್ ಹೊಡೆದು ಗಮನ ಸೆಳೆದ ಗುತ್ತಿಗೆದಾರ ಕಲಾಂ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ತೀರ್ಥಹಳ್ಳಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಪ್ರಯುಕ್ತ ಸರಕಾರಿ ನೌಕರರ ಕ್ರಿಕೆಟ್ ಪಂದ್ಯಾಟ ಡಿ. 14 ಮತ್ತು 15ರಂದು ಪಟ್ಟಣ ಪಂಚಾಯತ್ ವತಿಯಿಂದ ತೀರ್ಥಹಳ್ಳಿ ಅನಂತಮೂರ್ತಿ ಶಾಲಾ ಮೈದಾನದಲ್ಲಿ ನಡೆಯುತ್ತಿದೆ. 16 ಇಲಾಖೆಗಳು ಕ್ರೀಡಾಕೂಟದಲ್ಲಿ ಅಧಿಕಾರಿಗಳು ಮತ್ತು ನೌಕರರು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಂದ್ಯಾಟ ಬ್ಯಾಟ್ ಬೀಸುವ ಮೂಲಕ ಉದ್ಘಾಟನೆ ಮಾಡಿದರು. ಪೊಲೀಸ್ ಇನ್ಸ್ಪೆಕ್ಟರ್ ಅಶ್ವತ್ ಗೌಡ, ತಹಸೀಲ್ದಾರ್ ರಂಜಿತ್ ಬೌಲಿಂಗ್ ಮಾಡಿದರು. ಪಟ್ಟಣ ಪಂಚಾಯತ್ ಎಲ್ಲಾ ಸದಸ್ಯರು, ಸಿಬ್ಬಂದಿ ಹಾಜರಿದ್ದರು. ಸೂಡಾ ಅಧ್ಯಕ್ಷರಾದ ಸುಂದರೇಶ್, ನಾಬಳ ಸಚ್ಚಿ0ದ್ರ ಹೆಗಡೆ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.
ಹ್ಯಾಟ್ರಿಕ್ ಸಿಕ್ಸ್ ಬಾರಿಸಿದ ಕಲಾಂ!
ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್, ತೀರ್ಥಹಳ್ಳಿ ಕ್ರಿಕೆಟ್ ಕ್ಲಬ್ ಮೂಲಕ ನೂರಾರು ಮಕ್ಕಳಿಗೆ ಲೆದರ್ ಕ್ರಿಕೆಟ್ ತರಬೇತಿ ನೀಡುತ್ತಿರುವ ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಕಲಾಂ ಪತ್ರಕರ್ತರು ಮತ್ತು ಗುತ್ತಿಗೆದಾರರ ಸಂಘದ ನಡುವಿನ ಪಂದ್ಯಾಟದಲ್ಲಿ ಸತತವಾಗಿ 3 ಸಿಕ್ಸ್ ಬಾರಿಸಿ ದಾಖಲೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯಾಟ ನಮ್ಮೂರ್ ಎಕ್ಸ್ ಪ್ರೆಸ್ ತೀರ್ಥಹಳ್ಳಿ ಫೇಸ್ಬುಕ್ ಅಲ್ಲಿ ಲೈವ್ ಮಾಡಲಾಗಿತ್ತು.