ಸರಕಾರಿ ಶಾಲೆ ಹೊರೆಯಲ್ಲ, ಜವಾಬ್ದಾರಿ!
– ಸರ್ಕಾರಿ ಶಾಲೆ ಸೀಬಿನಕೆರೆಗೆ ಆಗಮಿಸಿದ ಶಿವಮೊಗ್ಗ ಉಪವಿಭಾಗ ಅಧಿಕಾರಿಗಳು!
– ಮಕ್ಕಳಿಗೆ ಉಡುಗೊರೆ ನೀಡಿ ಸಂಭ್ರಮಿಸಿದ ಅಧಿಕಾರಿ
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಸೀಬಿನಕೆರೆಯಲ್ಲಿ ಪ್ರಾರಂಭದ ದಿನ ಬರೀ 17 ಮಕ್ಕಳನ್ನು ಹೊಂದಿದ್ದು, ಇದೀಗ ಸುಮಾರು 230 ಮಕ್ಕಳನ್ನು ಹೊಂದಿರುವ ಶಾಲೆಯಾಗಿದೆ. ಜ. 2ರಂದು ಶಾಲೆಗೆ ಶಿವಮೊಗ್ಗ ಉಪವಿಭಾಗ ಅಧಿಕಾರಿಗಳು (ಅಸಿಸ್ಟೆಂಟ್ ಕಮಿಷನರ್) ಸತ್ಯನಾರಾಯಣರವರು ದಿಢೀರ್ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ನೀಡಿ ಸಂಭ್ರಮಿಸಿದರು. ತೀರ್ಥಹಳ್ಳಿ ತಾಲ್ಲೂಕು ತಹಸೀಲ್ದಾರ್ ರಂಜಿತ್, ಕರ್ನಾಟಕ ರಾಜ್ಯ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರು ರಾಘವೇಂದ್ರ, ತಾಲ್ಲೂಕು ನೌಕರರ ಸಂಘದ ಕಾರ್ಯದರ್ಶಿ ಪವಿತ್ರ, ತಾಲ್ಲೂಕು ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಸುಷ್ಮಾ, ಉಪಾಧ್ಯಕ್ಷರಾದ ರಮೇಶ್ ಡಿ, ಸೀಬಿನಕೆರೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್, ತಾಲ್ಲೂಕು ಕಂದಾಯ ನಿರೀಕ್ಷಕರಾದ ಸುಧೀರ್, ವಿಲೇಜ್ ಅಕೌಂಟೆಂಟ್ ಲೋಕೇಶ್, ಪತ್ರಿಕಾ ವರದಿಗಾರರಾದ ಡಾನ್ ರಾಮಣ್ಣ, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಸಿಸ್ಟೆಂಟ್ ಕಮಿಷನರ್ ಆದ ಸತ್ಯನಾರಾಯಣರವರು ಎಲ್ಲಾ ಮಕ್ಕಳಿಗೂ ನೋಟ್ ಬುಕ್, ಜಾಮೀಟ್ರಿ ಬಾಕ್ಸ್, ಸ್ಕೆಚ್ ಪೆನ್, ಚಾಕೋಲೇಟ್ ಗಳನ್ನು ಮಕ್ಕಳಿಗೆ ನೀಡಿದರು. ಸಭೆಯಲ್ಲಿ CRP ಪೂರ್ಣೇಶ್ ಅವರು ನಿರೂಪಿಸಿದರು. ಮುಖ್ಯಉಪಾಧ್ಯಾಯರು, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಾಮುಂಡೇಶ್ವರಿ ನಾಗರಾಜ್, ಖಜಾಂಚಿ ನಾಗಭೂಷಣ್ ಮತ್ತು ಪೋಷಕರು ಸಭೆಯಲ್ಲಿ ನೆರೆದಿದ್ದರು. ಶಾಲೆಯ ಈ ಬೆಳವಣಿಗೆ ಗೆ ಸಹಕರಿಸಿದ ಹಿರಿಯ ವಿದ್ಯಾರ್ಥಿಗಳನ್ನು ಸ್ಮರಿಸಿ, ಸರ್ಕಾರಿ ಶಾಲೆಗಳ ಬಗ್ಗೆ ಇದ್ದ ಅಭಿಮಾನ, ಮತ್ತು ಶಾಲಾ ಮಕ್ಕಳಿಗೆ ನೀಡಿದ ಕೊಡುಗೆಗೆ ಕೃತಜ್ಞತೆ ಅರ್ಪಿಸಿ ಸನ್ಮಾನಿಸಿ ಗೌರವಿಸಲಾಯಿತು.