ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!
NAMMUR EXPRESS :
ಹೊದಲ ದಿನಾಂಕ 31 ಆಗಸ್ಟ್, ಅಪರೂಪದ ಸನ್ನಿವೇಶ ಒಂದರಲ್ಲಿ ತಾಲೂಕಿನ ಹೊದಲಾದ ಮಾರೀಕೆರೆ ಅರಣ್ಯದ ಬಳಿ ಅತಿ ವಿರಳವಾದ ಕೆನ್ನಾಯಿಯ ಗುಂಪೊಂದು ಕಂಡುಬಂದಿದ್ದು ಹೊದಲದ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ ಅರಣ್ಯ ವೀಕ್ಷಕರಾದ ಪ್ರಜ್ವಲ್ HG ಇವರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ತಮ್ಮ ಕುಟುಂಬದ ಗುಂಪಿನಲ್ಲಿ ಮಾರಿಕೆರೆ ದಡದಿಂದ ನಲಿಸರ ಕಾಡಿನತ್ತ ಹಾದು ಹೋಗಿರುವುದನ್ನು ಗುರುತಿಸಿದ್ದು, ಇದು ಅಚ್ಚರಿಯ ಪ್ರಸಂಗವಾಗಿದೆ.
ಇತಿಹಾಸ ಹಾಗೂ ಪರಿಸರ ಆಸಕ್ತರಾದ ಪ್ರದೀಪ್ ಹೊದಲ ಇವರು ಮಾತನಾಡಿ ನಾಗರಹೊಳೆ ಅಭಯಾರಣ್ಯದಲ್ಲಿ ಮಾತ್ರ ಕಂಡುಬರುವ ಇವುಗಳು ನಮ್ಮೂರಿನಲ್ಲಿ ಹೊದಲದಲ್ಲಿ ಕಂಡುಬಂದಿದ್ದು ಪರಿಸರದ ಅಸಮತೋಲನದ ಕಾರಣವೋ ಅಥವಾ ನಮ್ಮೂರಿನಲ್ಲಿ ಇರುವ ಪರಿಸರದ ಸಮತೋಲನವೋ ಎಂಬುದು ಸೋಜಿಗ ಎಂದರು, ಇತ್ತೀಚೆಗೆ ರಾಷ್ಟ್ರೀಯ ಕೆನ್ನಾಯಿ ದಿನವನ್ನು ಅರಣ್ಯ ಇಲಾಖೆ ಆಚರಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಕೇನ್ನಾಯಿ ದಿನದಂದು ನಾಗರಿಕರಿಗೆ ಶುಭಾಶಯ ಕೋರಿರುವುದನ್ನು ನೆನಪಿಸಿದರು ಹಾಗೂ ಮಾತನಾಡುತ್ತಾ ಪರಿಸರ ತಜ್ಞರಾದ ಉಲ್ಲಾಸ ಕಾರಂತ ಇವರು “ಕೆನ್ನಾಯಿಯಾ ಜಾಡಿನಲ್ಲಿ” ಎಂಬ ಪುಸ್ತಕವನ್ನು ಬರೆದಿರುವುದನ್ನು ನೆನಪಿಸಿ ಹಾಗೂ ಅವುಗಳ ಮೇಲೆ ಸಮಗ್ರ ಅಧ್ಯಯನವನ್ನು ಮಾಡಿ ನ್ಯಾಷನಲ್ ಜಿಯೋಗ್ರಾಫಿ ಚಾನೆಲನಲ್ಲಿ ಪ್ರಸಾರವಾಗಿದ್ದನ್ನು ನೆನಪಿಸಿದರು.
ಇತ್ತೀಚೆಗೆ ಹೊದಲ ಭಾಗದಲ್ಲಿ ಹುಲಿ ಚಿರತೆ ಮತ್ತು ಇತರೆ ಕಾಡು ಪ್ರಾಣಿಗಳು ಕಂಡುಬರುತ್ತಿದ್ದು ಮೊದಲ ಭಾಗದಲ್ಲಿ ಅರಣ್ಯ ವತ್ತುವರಿ ಕಡಿಮೆ ಇರುವುದು ಒಂದು ಕಾರಣ ಹಾಗೂ ಈ ಊರಿನ ಗ್ರಾಮಸ್ಥರು ತಾಲೂಕಿನಲ್ಲಿಯೇ ಮೊದಲ ಬಾರಿಗೆ ಅಕೇಶಿಯ ಅರಣ್ಯವನ್ನು ವಿರೋಧಿಸಿ ಯ ಜಾಗದಲ್ಲಿ ಸ್ವಾಭಾವಿಕ ಕಾಡು ಬೆಳೆಸುವಂತೆ ಅರಣ್ಯ ಇಲಾಖೆಗೆ ಒತ್ತಡ ಹೇರಿ ಬೇರೆ ಬೇರೆ ಜಾತಿಯ ಮರಗಳನ್ನು ನಡೆಸಿದ್ದು ಇಲ್ಲಿ ಸ್ಮರಣಾರ್ಥವಾಗಿದೆ. ಒಟ್ಟಾರೆಯಾಗಿ ತಾಲೂಕಿನ ಮೊದಲ ಗ್ರಾಮ ಕೆನಾಯಿಗಳಿಗೆ ಆಶ್ರಯ ನೀಡುವಂತಾಗಿದ್ದು ತಾಲೂಕು ಹಾಗೂ ಜಿಲ್ಲೆಗೆ ಪರಿಸರದ ದೃಷ್ಟಿಯಲ್ಲಿ ಒಂದು ಹೊಸ ವಿಷಯವಾಗಿದೆ.